Home Crime ಡ್ರೆಸ್ಸಿಂಗ್‌ ರೂಂನಲ್ಲಿ ಮಹಿಳೆಯರು ಬಟ್ಟೆ ಬದಲಿಸುವ ವಿಡಿಯೋ ಸೆರೆ: ಆಸ್ಪತ್ರೆ ಸಿಬ್ಬಂದಿ ಅರೆಸ್ಟ್

ಡ್ರೆಸ್ಸಿಂಗ್‌ ರೂಂನಲ್ಲಿ ಮಹಿಳೆಯರು ಬಟ್ಟೆ ಬದಲಿಸುವ ವಿಡಿಯೋ ಸೆರೆ: ಆಸ್ಪತ್ರೆ ಸಿಬ್ಬಂದಿ ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಶಸ್ತ್ರಚಿಕಿತ್ಸಾ ಘಟಕದ ಡ್ರೆಸ್ಸಿಂಗ್‌ ರೂಂನಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಿಸುವ ರಹಸ್ಯ ವಿಡಿಯೋ ಮಾಡುತ್ತಿದ್ದ ಆರೋಪದ ಮೇಲೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ನಾಗರಬಾವಿ ಖಾಸಗಿ ಆಸ್ಪತ್ರೆಯ ನಿರ್ದೇಶಕ ಡಾ.ಚೇತನ್‌ ನೀಡಿದ ದೂರಿನ ಆಧಾರದ ಮೇಲೆ ಆಸ್ಪತ್ರೆಯ ಜೂನಿಯರ್‌ ಟೆಕ್ನಿಷಿಯನ್‌ ಸುವೆಂದು ಮಹಾಂತ (23) ಎಂಬಾತನನ್ನು ಬಂಧನ ಮಾಡಲಾಗಿದೆ. ಡ್ರೆಸ್ಸಿಂಗ್‌ ರೂಂ ನಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಿಸುವಾಗ ಆರೋಪಿ ಮೊಬೈಲ್‌ ಫೋನ್‌ ಬಳಸಿಕೊಂಡು ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ. ಇದನ್ನು ಗಮನಿಸಿದ ಮತ್ತೋರ್ವ ಮಹಿಳಾ ಸಿಬ್ಬಂದಿ ಆಸ್ಪತ್ರೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು.

ಆರೋಪಿಯ ಮೊಬೈಲ್‌ ಪರಿಶೀಲನೆ ಮಾಡಿದಾಗ ವಿಡಿಯೋ ಮಾಡಿರುವುದು ತಿಳಿದು ಬಂದಿದೆ. ಈ ಕುರಿತು ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧನ ಮಾಡಲಾಗಿದೆ.