

ಬೆಂಗಳೂರು: ಬಲವಂತದ ಮತಾಂತರ ಆರೋಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿ ಹೆಸರಿನಲ್ಲಿ ಹಿಂದೂ ಯುವತಿಯನ್ನು ಮದುವೆಯಾಗಿ ನಂತರ ಕೈಕೊಟ್ಟಿರುವ ಘಟನೆ ನಡೆಇದೆ. ಹಿಂದೂ ಯುವತಿಯನ್ನು ಪ್ರೀತಿ ಮಾಡಿ ಮದುವೆಯಾಗಿ, ನಂತರ ಆಕೆಯನ್ನು ಮತಾಂತರ ಮಾಡಿ ಕೈಗೆ ಎರಡು ಮಕ್ಕಳನ್ನು ಕೊಟ್ಟು, ಇದೀಗ ಇನ್ನೋರ್ವ ಮಹಿಳೆಯನ್ನು ಮದುವೆಯಾಗಿದ್ದಾನೆ. ಇದನ್ನು ಪ್ರಶ್ನೆ ಮಾಡಿದಾಗ, ತಲಾಕ್ ನೀಡುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಮಹಿಳೆ ನೊಂದಿದ್ದು, ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರನ್ನು ನೀಡಿದ್ದಾಳೆ.
ದೇವರ ಜೀವನಹಳ್ಳಿಯ ನಿವಾಸಿ ರೀಟಾ, 2015 ರಲ್ಲಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ಅದೇ ಡಿಜೆ ಹಳ್ಳಿಯ ಪರ್ವೇಜ್ ಎನ್ನುವವನ ಪರಿಚಯವಾಗಿದೆ. ಫರ್ವೇಜ್ ರೀಟಾಳ ಹಿಂದೆ ಬಿದ್ದು, ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದ. ಪ್ರೀತಿಸುವಾಗ, ಫರ್ವೇಜ್ ರೀಟಾಳಿಗೆ ತನ್ನ ಧರ್ಮಕ್ಕೆ ಮತಾಂತರಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದ. ಹೀಗೆ ಪ್ರೀತಿ ಮಾಡಿ ಮದುವೆ ಮಾಡಲು ಮುಂದಾಗಿದ್ದರು.
ಆದರೆ ಫರ್ವೇಜ್ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ರೀಟಾ ಮತ್ತು ಆಕೆಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೂ-ಮುಸ್ಲಿಂ ವಿವಾಹ ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುವ ಆತಂಕವನ್ನು ತಮ್ಮ ಮಗಳಿಗೆ ವ್ಯಕ್ತಪಡಿಸಿದ್ದಾರೆ. ಆದರೆ ರೀಟಾ ಹಿಂದೂ ಆಗಿಯೇ ಇರಬಹುದು ಎಂದು ಫರ್ವೇಜ್ ಹೇಳಿದ್ದು, ಆತನ ಕುಟುಂಬದವರನ್ನು ಒಪ್ಪಿಸಿದ್ದ. ಹೀಗಾಗಿ 2019 ಡಿ.15 ರಂದು ರೀಟಾ ಮದುವೆಯಾಗಿದ್ದಳು.
ಮದುವೆಯಾದದ್ದೇ ತಡ ಫರ್ವೇಜ್ ತನ್ನ ನಿಜ ರೂಪ ತೋರಿಸಿದ್ದಾನೆ. ರೀಟಾಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಬಲವಂತ ಪಡಿಸಿದ್ದು, ಇದಕ್ಕೆ ಒಪ್ಪದಿದ್ದರೆ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಎಲ್ಲಾ ಬೆದರಿಕೆಗೆ ಮಣಿದ ರೀಟಾ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ನಂತರ ತನ್ನ ಹೆಸರನ್ನು ಸಾದಿಯಾ ತಬಸುಮ್ ಎಂದು ಬದಲಾಯಿಸಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳು. ಆದರೆ ರೀಟಾ ಸಾದಿಯಾ ತಬಸುಮ್ ಆಗಿ ಮತಾಂತರಗೊಂಡ ಕೂಡಲೇ ಫರ್ವೇಜ್ ಕೂಡಲೇ ಆಕೆಯನ್ನು ಕೈ ಬಿಟ್ಟಿದ್ದಾನೆ.
ವಿಚ್ಛೇದನ ನೀಡದೇ ಇನ್ನೋರ್ವ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿ ಪತಿ ವಿರುದ್ಧ ಡಿಜೆ ಹಳ್ಳಿ ಠಾಣೆಗೆ ದೂರು ನೀಡಿದರೂ ಕ್ಯಾರೆ ಮಾಡಲಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿರುವ ಸಾದಿಯಾ ತಬಸುಮ್ ಡಿಜಿಪಿ, ಐಜಿಪಿ ಹಾಗೂ ಬೆಂಗಳೂರು ಪೊಲೀಸ್ ಕಮೀಷನರ್‌ಗೆ ದೂರನ್ನು ನೀಡಿದ್ದಾರೆ.













