Home Crime Hassana: ಪ್ರಿಯಕರನಿಗೆ ಪ್ರೇಯಸಿಯಿಂದ ಚಾಕು ಇರಿತ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

Hassana: ಪ್ರಿಯಕರನಿಗೆ ಪ್ರೇಯಸಿಯಿಂದ ಚಾಕು ಇರಿತ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

Hindu neighbor gifts plot of land

Hindu neighbour gifts land to Muslim journalist

Hassana: ಹೊಸ ವರ್ಷದಂದು ಪ್ರಿಯಕರನಿಗೆ ಪ್ರೇಯಸಿ ಚಾಕು ಇರಿತ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ವೊಂದು ದೊರಕಿದೆ. ಆರೋಪಿ ಯುವತಿ ಪೊಲೀಸರಿಗೆ ಮೆಸೇಜ್‌ ಮಾಡಿರುವ ಸ್ಕ್ರೀನ್‌ಶಾಟ್‌ ಇದೀಗ ವೈರಲ್‌ ಆಗಿದೆ.

ಚಾಕು ಇರಿತಕ್ಕೆ ಒಳಗಾದ ಯುವಕ ಮನುಕುಮಾರ್‌ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ಯುವತಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೆಸೇಜ್‌ನಲ್ಲಿ ಏನಿದೆ?
ನನಗೂ ಮನುಕುಮಾರ್‌ಗೂ ಮದುವೆ ಆಗಿದೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಇದರ ಸರ್ಟಿಫಿಕೇಟ್‌ ಬಹಿರಂಗಗೊಳಿಸಿದ್ದಾಳೆ. 2023 ನ.10 ರಂದು ಮದುವೆ ಆಗಿದ್ದು, 2024ರ ಅ.25ರಂದು ನೋಂದಣಿ ಮಾಡಿಸಲಾಗಿದೆ. ನನ್ನ ಜೊತೆ ಮದುವೆಯಾಗಿ ಆತ ಹಲವು ಜನರ ಜೊತೆ ಅಫೇರ್‌ ಇಟ್ಟುಕೊಂಡಿದ್ದ. ಬೇರೆ ಹುಡುಗಿ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗಿದ್ದ. ಅದು ಗೊತ್ತಾದಾಗ ನಾನು ಅಲ್ಲಿಗೆ ಹೋಗಿ, ಜಗಳ ಮಾಡಿದ್ದು, ಈ ವಿಚಾರದಲ್ಲಿ ಅವನ ಮನೆಯವರೆಲ್ಲರೂ ಸುಳ್ಳು ಹೇಳುತ್ತಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಯುವತಿ ಮೆಸೇಜ್‌ ಮೂಲಕ ಪೊಲೀಸರಲ್ಲಿ ಮನವಿ ಮಾಡಿದ್ದಾಳೆ.

ಹಾಸನ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಆರೋಪಿ ಮಹಿಳೆಯನ್ನು ಇರಿಸಲಾಗಿದೆ.