Home Crime Hassan: ಪಟ್ಲಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

Hassan: ಪಟ್ಲಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

Hassan

Hindu neighbor gifts plot of land

Hindu neighbour gifts land to Muslim journalist

Hassan: ಪಟ್ಲಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ ನಡೆದಿರುವ ಆರೋಪದ ಮೇಲೆ ಇದೀಗ ಆರೋಪಿಗಳಾದ ಜೀಪು ಚಾಲಕರ ಬಂಧನವಾಗಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪ್ರವಾಸಿತಾಣವಾದ ಪಟ್ಲಬೆಟ್ಟ ಬಳಿ ಜೀಪ್‌ ಹಾಗೂ ಪಿಕ್‌ಅಪ್‌ ವಾಹನ ಚಾಲಕರು ಜೂ.23 ರಂದು ಬೈಕ್‌ನಲ್ಲಿ ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದು, ಈ ಕುರಿತು ದೂರನ್ನು ನೀಡಲಾಗಿತ್ತು. ಇದೀಗ ಜೀಪು ಚಾಲಕರ ಬಂಧನವಾಗಿದೆ.

ಬೈಕ್‌ನಲ್ಲಿ ಬಂದಿದ್ದ ಪ್ರವಾಸಿಗರು ಪಟ್ಲಬೆಟ್ಟಕ್ಕೆ ಭೇಟಿ ನೀಡಿ ವಾಪಸ್‌ ಬರುವಾಗ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿರುವ ವೀಡಿಯೋವೊಂದು ವೈರಲ್‌ ಆಗಿತ್ತು. ಜೀಪುಗಳನ್ನು ಬಾಡಿಗೆ ಪಡೆಯದೇ ತಮ್ಮ ಬೈಕ್‌ನಲ್ಲಿ ಹೋಗಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆ ಕುರಿತು ದಕ್ಷಿಣ ಕನ್ನಡ ಮೂಲದ ಪ್ರವಾಸಿಗರಾದ ಭುವಿತ್‌ ಪೂಜಾರಿ ದೂರನ್ನು ನೀಡಿದ್ದರು. ಗಗನ್‌, ಕಿರಣ್‌, ನಿಶಾಂತ್‌, ಮದನ್‌ ಎಂಬುವವರ ಮೇಲೆ ಯಸಳೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

Kodimath Swamiji Prediction: ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದ ತೊಂದರೆ; ಅಭಿಮನ್ಯುವಿನ ಹೆಂಡತಿ ಸಂಸತ್‌ ಪ್ರವೇಶ, ದುಯೋರ್ಧನನಿಗೆ ಗೆಲುವು- ಏನಿದರ ಅರ್ಥ?