Home Crime Bangalore: ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕತೆಗೆ ಒತ್ತಾಯ; ಸಹಕರಿಸದ ಹೆಂಡತಿಯ ಕೊಲೆ

Bangalore: ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕತೆಗೆ ಒತ್ತಾಯ; ಸಹಕರಿಸದ ಹೆಂಡತಿಯ ಕೊಲೆ

Hindu neighbor gifts plot of land

Hindu neighbour gifts land to Muslim journalist

Bangalore: ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಅದೇ ರೀತಿ ನೀನೂ ಮಾಡು ಎಂದು ಅಸಹಜ ಲೈಂಗಿಕತೆಗೆ ಹೆಂಡತಿಯನ್ನು ಒತ್ತಾಯ ಮಾಡಿದ ಗಂಡ, ಇದಕ್ಕೆ ಒಪ್ಪದ ಹೆಂಡತಿ ತನ್ನ ಅಮ್ಮನಲ್ಲಿ ದೂರು ಹೇಳಿದ್ದಾರೆ. ಅವರು ಬುದ್ಧಿ ಹೇಳಿದ್ದಕ್ಕೆ ಗಂಡ ಕೋಪಗೊಂಡಿದ್ದಾನೆ. ನಂತರ ತನ್ನ ಮಗನ ಎದುರೇ ಕತ್ತು ಹಿಸುಕಿ ಹೆಂಡತಿಯನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ಕಾಳಿ ನಗರದಲ್ಲಿ ನಡೆದಿದೆ.

ಮಮತಾ (33) ಕೊಲೆಯಾದ ಪತ್ನಿ. ಪತಿ ಸುರೇಶ್‌ (40) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವ. ಆರು ವರ್ಷದ ಮಗನ ಎದುರಿಗೆ ಈ ಘಟನೆ ನಡೆದಿದೆ. ಈ ಘಟನೆ ಕುರಿತು ಆರು ವರ್ಷದ ಮಗ ಅಕ್ಕ-ಪಕ್ಕದ ಮನೆಯವರಿಗೆ ಹೇಳಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮೃತದೇಹಗಳನ್ನು ಆಂಬುಲೆನ್ಸ್‌ ಮೂಲಕ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.