Home Crime Nagamangala (Mandya): ಸಾಲ ವಸೂಲಾತಿಗೆ ಬಂದ ಮೈಕ್ರೋಫೈನಾನ್ಸ್‌ ಸಿಬ್ಬಂದಿಯಿಂದ ರೈತ ಕುಟುಂಬಕ್ಕೆ ನಿಂದನೆ; ಬೈಕ್‌ಗೆ ಬೆಂಕಿ

Nagamangala (Mandya): ಸಾಲ ವಸೂಲಾತಿಗೆ ಬಂದ ಮೈಕ್ರೋಫೈನಾನ್ಸ್‌ ಸಿಬ್ಬಂದಿಯಿಂದ ರೈತ ಕುಟುಂಬಕ್ಕೆ ನಿಂದನೆ; ಬೈಕ್‌ಗೆ ಬೆಂಕಿ

Crime News Bangalore

Hindu neighbor gifts plot of land

Hindu neighbour gifts land to Muslim journalist

Nagamangala (Mandya): ಟ್ರ್ಯಾಕ್ಟರ್‌ ಸಾಲದ ಕಂತು ವಸೂಲು ಮಾಡಲು ಬಂದ ಮೈಕ್ರೋ ಫೈನಾನ್ಸ್‌ ಸಿಬ್ಬಂದಿಯು ರೈತ ಕುಟುಂಬವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಲ ಪಡೆದಿದ್ದ ವ್ಯಕ್ತಿಯ ಪುತ್ರನ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಸಿಟ್ಟುಗೊಂಡ ಗ್ರಾಮಸ್ಥರು, ಆ ಮೈಕ್ರೋಫೈನಾನ್ಸ್‌ ಸಿಬ್ಬಂದಿಯ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ನಾಗಮಂಗಲ ತಾಲೂಕಿನ ಗೆಜ್ಜೆಹೊಸಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.

ಖಾಸಗಿ ಫೈನಾನ್ಸ್‌ನಲ್ಲಿ ಸುಮಾರು ಎರಡೂವರೆ ಲಕ್ಷ ಟ್ರ್ಯಾಕ್ಟರ್‌ ಸಾಲ ಪಡೆದಿದ್ದ ಗ್ರಾಮದ ರೈತ ಲಕ್ಷ್ಮಣ ನಾಲ್ಕು ತಿಂಗಳಿನಿಂದ ಸಾಲದ ಕಂತು ಪಾವತಿ ಮಾಡಿರಲಿಲ್ಲ. ಕಂತು ವಸೂಲಿಗೆ ಗುರುವಾರ ಸಂಜೆ ಬೈಕ್‌ನಲ್ಲಿ ಬಂದ ಫೈನಾನ್ಸ್‌ ಸಂಸ್ಥೆಯ ಇಬ್ಬರು ಸಿಬ್ಬಂದಿ ಸಾಲದ ಕಂತು ಪಾವತಿಸದಿದ್ದರೆ ಟ್ರ್ಯಾಕ್ಟರ್‌ ಜಪ್ತಿ ಮಾಡುವುದಾಗಿ ಒತ್ತಡ ಹಾಕಿದ್ದಾರೆ.

ಲಕ್ಷ್ಮಣರ ಪುತ್ರ ಸುನಿಲ್‌ರನ್ನು ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಸಿಬ್ಬಂದಿ ಬೈಕ್‌ಗೆ ಬೆಂಕಿ ಹಚ್ಚುತ್ತಿದ್ದಂತೆ ಸ್ಥಳದಿಂದ ಸಿಬ್ಬಂದಿ ಕಾಲ್ಕಿತ್ತಿದ್ದಾರೆ.