Home Crime Bangalore News: ರೋಗಿಯ ಬಟ್ಟೆ ಮೇಲಕ್ಕೆತ್ತಿ, ಎದೆಗೆ ಕೈ ಹಾಕಿ ಸ್ತನಕ್ಕೆ ಮುತ್ತಿಟ್ಟ ವೈದ್ಯ, ಹೈಕೋರ್ಟ್...

Bangalore News: ರೋಗಿಯ ಬಟ್ಟೆ ಮೇಲಕ್ಕೆತ್ತಿ, ಎದೆಗೆ ಕೈ ಹಾಕಿ ಸ್ತನಕ್ಕೆ ಮುತ್ತಿಟ್ಟ ವೈದ್ಯ, ಹೈಕೋರ್ಟ್ ಈ ಬಗ್ಗೆ ಕೊಡ್ತು ಹೊಸ ಆದೇಶ !

Bangalore News

Hindu neighbor gifts plot of land

Hindu neighbour gifts land to Muslim journalist

Bangalore News: ವೈದ್ಯೋ ನಾರಾಯಣ ಹರಿ ಎನ್ನುವ ಮಾತಿದೆ. ವೈದ್ಯರಿಲ್ಲದ ಜಗತ್ತನ್ನು ನಾವು ಎಣಿಸಲು ಸಾಧ್ಯವಿಲ್ಲ. ರೋಗ ಬರುವವರೆಗೆ ವೈದ್ಯರ ಮಹತ್ವ ತಿಳಿಯುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ವೈದ್ಯ ಈ ಎಲ್ಲಾ ಲೋಕೋಕ್ತಿಗಳಿಗೆ ಎಳ್ಳು ನೀರು ಬಿಟ್ಟಿದ್ದ. ಏಕೆಂದರೆ ವೈದ್ಯಕೀಯ ತಪಾಸಣೆಗೆಂದು ಬಂದಿದ್ದ ಮಹಿಳೆಯೊಬ್ಬರ ಎದೆಭಾಗವನ್ನು ಸ್ಪರ್ಶಿಸಿ ಮುತ್ತಿಟ್ಟು, ಲೈಂಗಿಕ ಕಿರುಕುಳ ನೀಡಿದ್ದು, ಈ ಆರೋಪದ ಸಂಬಂಧ ವೈದ್ಯರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಕಾರ ವ್ಯಕ್ತಪಡಿಸಿದೆ. ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ.

ರೋಗಿಯ ದೇಹ ಮುಟ್ಟಲು ವೈದ್ಯರಿಗೆ ಇರುವ ಅಧಿಕಾರ ಪವಿತ್ರವಾದದ್ದು, ಅದರ ದುರ್ಬಳಕೆ ಸಲ್ಲದು ಎಂದು ನ್ಯಾಯಪೀಠ ಹೇಳಿದೆ. ರೋಗಿಯ ದೇಹ ಮುಟ್ಟಿ ತಪಾಸಣೆ ನಡೆಸಲು ವೈದ್ಯ ವೃತ್ತಿಯಲ್ಲಿ ಇರುವವರಿಗೆ ಅವಕಾಶವಿದೆ. ದುರುದ್ದೇಶ ಪೂರ್ವಕವಾಗಿ ಬಳಕೆ ಮಾಡಿದ್ದಲ್ಲಿ ಅದು ಲೈಂಗಿಕ ಕಿರುಕುಳ ನೀಡಿದಂತಾಗುತ್ತದೆ. ಇದನ್ನು ವೈದ್ಯರಾದವರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.

Belthangady: ಅಕ್ರಮ ಗಣಿಗಾರಿಕೆ ಪ್ರಕರಣ ;ಶಶಿರಾಜ್‌ ಶೆಟ್ಟಿ , ಪ್ರಮೋದ್‌ ದಿಡುಪೆಗೆ ಜಾಮೀನು ಮಂಜೂರು

ಏನಿದು ಪ್ರಕರಣ:
ಎದೆ ನೋವು ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಪರೀಕ್ಷೆಗೆಂದು ಖಾಸಗಿ ಆಸ್ಪತ್ರೆಗೆ ಬಂದಿದ್ದು, ಅಲಿ ಆಕೆಯನ್ನು ತಪಾಸಣೆ ಮಾಡಿದ್ದ ಅರ್ಜಿದಾರ (ವೈದ್ಯ) ಇಸಿಜಿ, ಎಕ್ಸ್‌ ರೇ ಪರೀಕ್ಷೆ ನಡೆಸಲು ಹೇಳಿದ್ದಾರೆ. ಆಕೆಯ ಮೊಬೈಲ್‌ ಸಂಖ್ಯೆ ಪಡೆದು ವಾಟ್ಸ್‌ಅಪ್‌ ಮೂಲಕ ಇಸಿಜಿ ಎಕ್ಸ್‌ರೇ ಪರೀಕ್ಷೆಯ ವರದಿ ಕಳುಹಿಸಿದ್ದರು. ನಂತರ ಹೆಚ್ಚಿನ ತಪಾಸಣೆಗೆಂದು ಖಾಸಗಿ ಕ್ಲಿನಿಕ್‌ಗೆ ಬರಲು ಹೇಳಿದ್ದರು.

ಅದರಂತೆ ತಪಾಸಣೆಗೆಂದು ಬಂದ ಮಹಿಳಾ ರೋಗಿಯು 2024 ಮಾ.21 ರಂದು ಕ್ಲಿನಿಕ್‌ಗೆ ಒಬ್ಬರೇ ಹೋಗಿದ್ದ ಸಂದರ್ಭದಲ್ಲಿ ಆಕೆಯನ್ನು ಕೊಠಡಿಗೆ ಕರೆದು ಹಾಸಿಗೆ ಮೇಲೆ ಮಲಗಲು ಅರ್ಜಿದಾರ (ವೈದ್ಯ) ಹೇಳಿದ್ದು, ನಂತರ ಆಕೆಯ ಎದೆಯ ಭಾಗದ ಮೇಲೆ ಸ್ಟೆಥಸ್ಕೋಪ್‌ನ್ನಿಟ್ಟು ಪರಿಶೀಲನೆ ಮಾಡಿ, ನಂತರ ಆಕೆಯ ಉಡುಪನ್ನು ಮೇಲಕ್ಕೆ ಸರಿಸಿದ್ದ. ಆಮೇಲೆ ಎದೆಭಾಗ ಸ್ಪರ್ಶಿಸಿದ್ದು, ಎಡಭಾಗದ ಸ್ತನಕ್ಕೆ ಮುತ್ತಿಟ್ಟಿದ್ದರು. ಕೂಡಲೇ ಎಚ್ಚೆತ್ತ ಮಹಿಳೆ ಕ್ಲಿನಿಕ್‌ನಿಂದ ಹೊರಗೆ ಬಂದು ತನ್ನ ಕುಟುಂಬದವರಿಗೆ ಮಾಹಿತಿ ನೀಡಿದ್ದರು.

ಅನಂತರ ಮಹಿಳೆ ವೈದ್ಯನ ಮೇಲೆ ಪುಟ್ಟೇನಹಳ್ಳಿ ಠಾಣಾ ಪೊಲೀಸರಿಗೆ ದೂರನ್ನು ನೀಡಿದ್ದರು. ಅದನ್ನು ಆಧರಿಸಿ ಲೈಂಗಿಕ ಕಿರುಕುಳ ಆರೋಪದ ಮೇಲೆ ವೈದ್ಯನ ಮೇಲೆ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು. ವೈದ್ಯ ಎಫ್‌ಐಆರ್‌ ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್; ತನಿಖಾಧಿಕಾರಿಯೇ ಎತ್ತಂಗಡಿ !