Home Crime Crime: ಸ್ಕ್ಯಾನಿಂಗ್‌ಗೆ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ: ರೇಡಿಯಾಲಜಿಸ್ಟ್‌ ಅರೆಸ್ಟ್‌, ವಿಡಿಯೋ ವೈರಲ್

Crime: ಸ್ಕ್ಯಾನಿಂಗ್‌ಗೆ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ: ರೇಡಿಯಾಲಜಿಸ್ಟ್‌ ಅರೆಸ್ಟ್‌, ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Bangalore: ಸ್ಕ್ಯಾನಿಂಗ್‌ಗೆಂದು ಬಂದ ಮಹಿಳೆಯ ಖಾಸಗಿ ಅಂಗ ಮುಟ್ಟಿ ರೇಡಿಯಾಲಜಿಸ್ಟ್‌ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಕುರಿತ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸ್ಕ್ಯಾನಿಂಗ್‌ ಮಾಡುವ ನೆಪದಲ್ಲಿ ಖಾಸಗಿ ಅಂಗ ಸ್ಪರ್ಶ ಮಾಡಿದ್ದಾನೆ. ಈ ಕುರಿತು ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಘಟನೆ ನಡೆದಿರುವುದು ಆನೇಕಲ್‌ನಲ್ಲಿ. ಆರೋಪಿ ಜಯಕುಮಾರ್‌ ಎಂಬಾತ ಹೊಟ್ಟೆ ನೋವು ಎಂದು ಪತಿಯ ಜೊತೆಗೆ ಬಂದಿದ್ದ ಮಹಿಳೆಯ ಖಾಸಗಿ ಅಂಗ ಸ್ಪರ್ಶ ಮಾಡಿದ್ದಾನೆ. ಮಹಿಳೆ ಪತಿ ಜೊತೆ ಸ್ಕ್ಯಾನಿಂಗ್‌ ಸೆಂಟರ್‌ಗೆ ಬಂದಿದ್ದರು. ಸ್ಕ್ಯಾನಿಂಗ್‌ ಮಾಡುತ್ತಾ ಆರೋಪಿ ಮಹಿಳೆಯ ಖಾಸಗಿ ಅಂಗಗಳಿಗೆ ಕೈ ಹಾಕಿದ್ದು, ಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಆತ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಇಲ್ಲಿ ನಡೆದ ವಿಚಾರವನ್ನು ಹೊರಗೆ ಬಾಯಿಬಿಡಬಾರದು ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹೊರಗೆ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಮಹಿಳೆ ಇದನ್ನೆಲ್ಲ ರೆಕಾರ್ಡ್‌ ಮಾಡಿದ್ದಾರೆ. ಸ್ಕ್ಯಾನಿಂಗ್‌ ಸೆಂಟರ್‌ನಿಂದ ಹೊರಗೆ ಬಂದ ಕೂಡಲೇ ಆಕೆ ಆನೇಕಲ್‌ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ಆನೇಕಲ್‌ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವೈದ್ಯ ಕಿರುಕುಳ ನೀಡುತ್ತಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.