Home Crime Crime News: ಜಗಳ ಮಾಡಬೇಡಿ ಎಂದ ಅತ್ತೆಯ ತಲೆಗೆ ಸುತ್ತಿಗೆಯಲ್ಲಿ ಬಡಿದು ಕೊಂದವ ನೇಣಿಗೆ ಶರಣು

Crime News: ಜಗಳ ಮಾಡಬೇಡಿ ಎಂದ ಅತ್ತೆಯ ತಲೆಗೆ ಸುತ್ತಿಗೆಯಲ್ಲಿ ಬಡಿದು ಕೊಂದವ ನೇಣಿಗೆ ಶರಣು

Image Credit: Public Tv

Hindu neighbor gifts plot of land

Hindu neighbour gifts land to Muslim journalist

Chikkamagaluru: ಕುಡಿದು ಬಂದು ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಅಳಿಯನಿಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯನ್ನೇ ಕೊಲೆ ಮಾಡಿ ಪರಾರಿ ಆಗಿದ್ದ ವ್ಯಕ್ತಿ ಕಾಫಿ ತೋಟದಲ್ಲಿ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್‌ ನಲ್ಲಿ ನಡೆದಿದೆ.

ಕಣತಿ ಗ್ರಾಮದ ಯಮುನಾ (65) ಕೊಲೆಯಾದ ಮಹಿಳೆ. ಶಶಿಧರ್‌ ಕೊಲೆ ಆರೋಪಿ.

ಯಮುನಾ ಕೂಲಿ ಕೆಲಸ ಮುಗಿಸಿ ಮಗಳ ಮನೆಗೆ ಹೋದಾಗ ಕುಡಿದು ಜಗಳ ಮಾಡುತ್ತಿದ್ದ ಅಳಿಯನಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಶಶಿಧರ ಸುತ್ತಿಗೆಯಿಂದ ಅವರ ತಲೆಗೆ ಹೊಡೆದಿದ್ದಾನೆ. ಯಮುನಾ ಅವರು ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮೂಡಿಗೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಮೃತ ಹೊಂದಿದ್ದಾರೆ.