Home Crime Murder Case: ಬೆಂಗಳೂರಿನಲ್ಲಿ ಮಹಿಳೆಯ ಹತ್ಯೆಗೈದು, 60 ಪೀಸ್‌ ಮಾಡಿದ ಪ್ರಕರಣ; ಆರೋಪಿ ಗುರುತು ಪತ್ತೆ-ಕಮೀಷನರ್‌...

Murder Case: ಬೆಂಗಳೂರಿನಲ್ಲಿ ಮಹಿಳೆಯ ಹತ್ಯೆಗೈದು, 60 ಪೀಸ್‌ ಮಾಡಿದ ಪ್ರಕರಣ; ಆರೋಪಿ ಗುರುತು ಪತ್ತೆ-ಕಮೀಷನರ್‌ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

Murder Case: ಬೆಂಗಳೂರಿನ ವೈಯ್ಯಾಲಿ ಕಾವಲ್‌ನಲ್ಲಿ ಮಹಿಳೆಯನ್ನು ಪೀಸ್‌ ಪೀಸ್‌ ಮಾಡಿ ಕ್ರೂರವಾಗಿ ಹತ್ಯೆ ಮಾಡಿ, ನಂತರ ಮೃತ ದೇಹವನ್ನು ತುಂಡು ತುಂಡು ಮಾಡಿ ಫ್ರಿಜ್‌ನಲ್ಲಿಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಗುರುತು ಪತ್ತೆಯಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಬಿ.ದಯಾನಂದ್‌ ತಿಳಿಸಿದ್ದಾರೆ.

ಬೆಂಗಳೂರಿನ ವೈಯ್ಯಾಲಿಕಾವಲ್‌ನಲ್ಲಿರುವ ಮನೆಯೊಂದರಲ್ಲಿ ಮಹಿಳೆಯನ್ನು ಕೊಲೆ ಮಾಡಿ 59 ತುಂಡುಗಳನ್ನಾಗಿ ಕತ್ತರಿಸಿ ಫ್ರಿಜ್‌ನಲ್ಲಿಟ್ಟ ಆರೋಪಿ. ಈ ಕೊಲೆ 10-15 ದಿನಗಳ ಹಿಂದೆ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಇದೀಗ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಕೊಲೆ ಆರೋಪಿ ಗುರುತು ಪತ್ತೆಯಾಗಿದೆ. ಶೀಘ್ರದಲ್ಲಿಯೇ ಆತನ ಬಂಧನ ಮಾಡಲಾಗುವುದು ಎಂದು ಕಮೀಷನರ್‌ ದಯಾನಂದ್‌ ಹೇಳಿದ್ದಾರೆ. ಕೊಲೆ ಆರೋಪಿ ಹೊರ ರಾಜ್ಯದವನಾಗಿದ್ದು, ಈತ ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಎಂದು ಹೇಳಿದ್ದಾರೆ.