Home Crime Bigg Boss: ಲಾಂಗ್‌ ಹಿಡಿದು ರೀಲ್ಸ್‌; ರಜತ್‌, ವಿನಯ್‌ ಮೇಲೆ FIR!

Bigg Boss: ಲಾಂಗ್‌ ಹಿಡಿದು ರೀಲ್ಸ್‌; ರಜತ್‌, ವಿನಯ್‌ ಮೇಲೆ FIR!

Image Credit: Newsfirst

Hindu neighbor gifts plot of land

Hindu neighbour gifts land to Muslim journalist

Bigg Boss Contestants: ಬಿಗ್‌ಬಾಸ್‌ ಸೀಸನ್‌ 11ರ ಸ್ಪರ್ಧಿ ರಜತ್‌ ಹಾಗೂ ಬಿಗ್‌ಬಾಸ್‌ ಸೀಸನ್‌ 10 ರ ವಿನಯ್‌ ಗೌಡ ಇಬ್ಬರ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ರಜತ್‌ ಕಿಶನ್‌ ಜೊತೆ ವಿನಯ್‌ ಗೌಡ ಅವರು ಲಾಂಗ್‌ ಹಿಡಿದು, ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿ ರೀಲ್ಸ್‌ ಮಾಡಿದ್ದಾರೆ. ದರ್ಶನ್‌ ʼಮೆಜೆಸ್ಟಿಕ್‌ʼ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ಆಕ್ಟ್‌ ಮಾಡಿದ್ದು, ಇವರಿಬ್ಬರ ಕೈಯಲ್ಲಿ ಮಾರಕಾಸ್ತ್ರವಿದ್ದು, ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ಕೇಸು ದಾಖಲಾಗಿದೆ.

ಇವರು ಲಾಂಗ್‌ ಹಿಡಿದು ನಟನೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಜನರು ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಬಸವೇಶ್ವರ ನಗರ ಪೊಲೀಸರು ಇಬ್ಬರ ವಿರುದ್ಧ ಆರ್ಮ್ಸ್‌ ಆಕ್ಟ್‌ ಅಡಿ ಕೇಸು ದಾಖಲು ಮಾಡಿದ್ದಾರೆ. ಕಾನೂನು ಪ್ರಕಾರ, ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್‌ ಮಾಡುವುದು, ಭಯದ ವಾತಾವರಣ ಸೃಷ್ಟಿ ಮಾಡುವುದು ಅಪರಾಧ. ಹೀಗಾಗಿ ಇವರಿಬ್ಬರ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.