Home Crime Bhopal: ಪತ್ನಿ ಮುಂದೆ ʼಅಂಕಲ್‌ʼ ಎಂದು ಕರೆದ ಅಂಗಡಿಯಾತ; ಅಂಗಡಿಯಾತನಿಗೆ ಬಿತ್ತು ಗೂಸಾ

Bhopal: ಪತ್ನಿ ಮುಂದೆ ʼಅಂಕಲ್‌ʼ ಎಂದು ಕರೆದ ಅಂಗಡಿಯಾತ; ಅಂಗಡಿಯಾತನಿಗೆ ಬಿತ್ತು ಗೂಸಾ

Hindu neighbor gifts plot of land

Hindu neighbour gifts land to Muslim journalist

Bhopal: ಪತ್ನಿ ಮುಂದೆ ತನ್ನನ್ನು ʼಅಂಕಲ್‌ʼ ಎಂದು ಕರೆದಿರುವುದಕ್ಕೆ ವ್ಯಕ್ತಿಯೊಬ್ಬ ಅಂಗಡಿಯಾತನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಆರೋಪಿ ರೋಹಿತ್‌ ಎಂಬಾತನೇ ಹಲ್ಲೆ ನಡೆಸಿರುವ ವ್ಯಕ್ತಿ. ಈತ ವಿಶಾಲ್‌ ಎಂಬಾತನ ಅಂಗಡಿಗೆ ತನ್ನ ಪತ್ನಿಯೊಂದಿಗೆ ಶನಿವಾರ ಸೀರೆ ಖರೀದಿ ಮಾಡಲೆಂದು ಬಂದಿದ್ದು, ಪತ್ನಿ ಹಲವು ಸಮಯದವರೆಗೆ ಸೀರೆ ನೋಡಿದರೂ ಯಾವುದನ್ನೂ ಆಯ್ಕೆ ಮಾಡಿರಲಿಲ್ಲ. ಈ ಸಮಯದಲ್ಲಿ ವಿಶಾಲ್‌ ರೋಹಿತ್‌ಗೆ ಯಾವ ಬೆಲೆಯ ಸೀರೆಗಳನ್ನು ಖರೀದಿ ಮಾಡುವಿರಿ ಎಂದು ಕೇಳಿದಾಗ, ರೂ.1000 ರೇಂಜ್‌ನಲ್ಲಿ ತೋರಿಸಿ ಎಂದಿದ್ದು, ಅದಕ್ಕಿಂತ ಸ್ವಲ್ಪ ಜಾಸ್ತಿಯಾದರೂ ಖರೀದಿ ಮಾಡುತ್ತೇವೆ ಎಂದು ವಿಶಾಲ್‌ ಹೇಳಿದ್ದಾರೆ.

ಇದಕ್ಕೆ ವಿಶಾಲ್‌, ” ಅಂಕಲ್‌, ನಾನು ನಿಮಗೆ ಬೇರೆ ರೇಂಜ್‌ಗಳಲ್ಲಿ ಸೀರೆ ತೋರಿಸುವೆ” ಎಂದು ಹೇಳಿದ್ದಾನೆ. ಇದನ್ನು ಕೇಳಿ ರೋಹಿತ್‌, ನನ್ನನ್ನು ಮತ್ತೆ ಅಂಕಲ್‌ ಕರೆಯಬೇಡಿ ಎಂದು ಹೇಳಿದ್ದು, ನಂತರ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದಿದೆ.

ನಂತರ ರೋಹಿತ್‌ ಅಂಗಡಿಯಿಂದ ಹೊರಬಂದಿದ್ದು, ಸ್ವಲ್ಪ ಸಮಯದ ನಂತರ ಕೆಲ ಸ್ನೇಹಿತರೊಂದಿಗೆ ರೋಹಿತ್‌ ವಿಶಾಲ್‌ ಅಂಗಡಿಗೆ ಬಂದಿದ್ದಾನೆ. ಅನಂತರ ವಿಶಾಲ್‌ನನ್ನು ಅಂಗಡಿಯಿಂದ ರಸ್ತೆಗೆ ಎಳೆದುಕೊಂಡು ಹೋಗಿ, ದೊಣ್ಣೆ, ಬೆಲ್ಟ್‌ಗಳಿಂದ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದಾದ ನಂತರ ವಿಶಾಲ್‌ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದು, ದೂರು ದಾಖಲಿಸಿದ ಪೊಲೀಸರು ರೋಹಿತ್‌ ಮತ್ತು ಆತನ ಸ್ನೇಹಿತರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.