Home Crime Belthangady: ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮದ ಅವಹೇಳನ; 17 ಮಂದಿ ವಿರುದ್ಧ ಪ್ರಕರಣ ದಾಖಲು!

Belthangady: ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮದ ಅವಹೇಳನ; 17 ಮಂದಿ ವಿರುದ್ಧ ಪ್ರಕರಣ ದಾಖಲು!

Hindu neighbor gifts plot of land

Hindu neighbour gifts land to Muslim journalist

Belthangady: ಪೆರಾಡಿ ಗ್ರಾಮದಲ್ಲಿ ಪುರುಷ ಕಟ್ಟುವ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್‌ (ಸ.ಅ) ಮತ್ತು ಪವಿತ್ರವಾದ ಅಝಾನ್‌ ಅನ್ನು ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 17 ಮಂದಿ ಆರೋಪಿಗಳ ವಿರುದ್ಧ ಹಾಗೂ ಇದಕ್ಕೆ ಸಹಕರಿಸಿದ ಇತರ 20 ರಿಂದ 30 ಮಂದಿಯ ವಿರುದ್ಧ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ಮನೆ ನಿವಾಸಿ ಮಹಮ್ಮದ್ ರಫೀಕ್ ನೀಡಿರುವ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಸಾವ್ಯ ನಿವಾಸಿಗಳಾದ ವಸಂತ, ರಾಜೇಶ್, ಹರೀಶ್, ಪೆರಾಡಿ ನಿವಾಸಿಗಳಾದ ದಯಾನಂದ, ರಂಗನಾಥ ಮೋಹನ್, ಶಮಿತ್, ರವಿ, ರಮೇಶ್ ಕುಲಾಲ್, ಸುರೇಶ್, ಅಶೋಕ ಕುಲಾಲ್, ಧನುಷ್ ಹರದೊಟ್ಟು, ಹರೀಶ್ ಬಂತೊಟ್ಟು, ರಮೇಶ್ ಆರ್.ಕೆ, ಸುರೇಶ್ ಬರೊಟ್ಟು, ಪ್ರಮೋದ್, ಪ್ರಕಾಶ್ ಪೆರಾಡಿ ಮತ್ತು ಇತರ 20 ರಿಂದ 30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಎ.14 ರಂದು ರಾತ್ರಿಯ ವೇಳೆ ಪುರುಷ ಕಟ್ಟುನ ಎಂಬ ಆಚರಣೆಯ ನೆಪದಲ್ಲಿ ಮುಸ್ಲಿಂ ವೇಷ ಧರಿಸಿಕೊಂಡು ಇಸ್ಲಾಂ ಧರ್ಮ, ಪ್ರವಾದಿ ಮಹಮ್ಮದ್ (ಸ.ಅ) ಮತ್ತು ಪವಿತ್ರವಾದ ಆಝಾನ್ ಅನ್ನು ಅವಹೇಳನ ಮಾಡಿ ಹಿಂದೂ ಮುಸ್ಲಿಂ ಧರ್ಮಗಳ ನಡುವೆ ವೈಷಮ್ಯದ ಭಾವನೆಗಳನ್ನು ಉಂಟುಮಾಡುವ ಉದ್ದೇಶದಿಂದ ಅದನ್ನು ಸಾಮಾಜಿಕ ಜಾಕತಾಣಗಳಲ್ಲಿ ವೈರಲ್ ಮಾಡಿದ್ದ ಬಗ್ಗೆ ಕಲಂ 353(2) ಜೊತೆಗೆ 3(5) ಬಿ.ಎನ್.ಎಸ್ 2023 ರಂತೆ ಪ್ರಕರಣ ದಾಖಲಿಸಲಾಗಿದೆ.

ಇಸ್ಲಾಂ ಧರ್ಮವನ್ನು ಅವಮಾನಿಸುವ ವೀಡಿಯೋ ಹರಿಬಿಟ್ಟ ಬಗ್ಗೆ, ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಇದೀಗ ವೇಣೂರು ಪೊಲೋಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.