Home Crime Belthangady: ನಕ್ಸಲ್‌ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು!

Belthangady: ನಕ್ಸಲ್‌ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು!

Hindu neighbor gifts plot of land

Hindu neighbour gifts land to Muslim journalist

Belthangady: ನಕ್ಸಲ್‌ ನಾಯಕ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ವಿವಿಧ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಟ್ವಾಳ ಡಿ.ವೈ.ಎಸ್‌ಪಿ ವಿಜಯಪ್ರಸದ್‌ ನೇತೃತ್ವದ ತಂಡ ಬಿ.ಜಿ.ಕೃಷ್ಣಮೂರ್ತಿ ಹಾಗೂ ಚಿಕ್ಕಮಗಳೂರು ಮೂಲದ ನಕ್ಸಲ್‌ ಸಾವಿತ್ರಿ ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಿತ್ತಬಾಗಿಲಿನಲ್ಲಿ ಪೊಲೀಸರ ಮೇಲೆ ದಾಳಿ, ಕುತ್ಲೂರುನಲ್ಲಿ ರಾಮಚಂದ್ರ ಭಟ್‌ ಎಂಬುವವರ ಕಾರಿಗೆ ಬೆಂಕಿ ಹಚ್ಚಿರುವುದು, ಅರಸಿನಮಕ್ಕಿಯಲ್ಲಿ ಮನೆಯೊಂದರ ಗೋಡೆಯ ಮೇಲೆ ನಕ್ಸಲ್‌ ಪರ ಬರಹ ಬರೆದಿರುವ ಆರೋಪ ಎದುರಿಸುತ್ತಿರುವ ಇವರನ್ನು ಕೇರಳದ ಜೈಲಿನಿಂದ ಬಾಡಿವಾರೆಂಟ್‌ ಮೂಲಕ ವಶಕ್ಕೆ ಪಡೆದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

2005 ರಿಂದ ನಕ್ಸಲ್‌ ನಾಯಕತ್ವ ವಹಿಸಿದ್ದ ಬಿ.ಜಿ.ಕೃಷ್ಣಮೂರ್ತಿ 2021 ನವೆಂಬರ್‌ 9 ರಂದು ಬಂಧನವಾಗಿತ್ತು. ಈತನ ಮೇಲೆ 53 ಕೇಸು ದಾಖಲಾಗಿದೆ. ಸಾವಿತ್ರಿ ಕೇರಳದ ವಯನಾಡಿನ ಕಬನಿ ಮುಖ್ಯಸ್ಥೆಯಾಗಿ ಗುರುತಿಸಿಕೊಂಡಿದ್ದು, ಈಕೆಯ ಮೇಲೆ 22 ಕೇಸು ದಾಖಲಾಗಿದೆ.