Home Crime Bagalkote: ಕ್ರಿಕೆಟ್‌ ಬಾಲ್‌ಗಾಗಿ ಜಗಳ: ಶಿಕ್ಷಕನಿಗೆ ಬಿಯರ್‌ ಬಾಟ್ಲಿಯಿಂದ ಹೊಡೆದ ಯುವಕ

Bagalkote: ಕ್ರಿಕೆಟ್‌ ಬಾಲ್‌ಗಾಗಿ ಜಗಳ: ಶಿಕ್ಷಕನಿಗೆ ಬಿಯರ್‌ ಬಾಟ್ಲಿಯಿಂದ ಹೊಡೆದ ಯುವಕ

Image Credit: Tv 9 Kannada

Hindu neighbor gifts plot of land

Hindu neighbour gifts land to Muslim journalist

Bagalkote: ಕ್ರಿಕೆಟ್‌ ಬಾಲ್‌ ವಾಪಾಸ್‌ ಕೊಡದ ವಿಚಾರಕ್ಕೆ ಜಗಳ ತೆಗೆದ ಯುವಕನೋರ್ವ ಒಡೆದ ಬಿಯರ್‌ ಬಾಟಲ್‌ನಿಂದ ಶಿಕ್ಷಕನಿಗೆ ಇರಿದ ಘಟನೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಶಿಕ್ಷಕ ರಾಮಪ್ಪ ಪೂಜಾರಿ (36) ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪವನ್‌ ಜಾಧವ್‌ (21) ಬಾಟಲ್‌ನಿಂದ ಇರಿದು ಗಾಯಗೊಳಿಸಿದ ವ್ಯಕ್ತಿ.

ಬಿಎಲ್‌ಡಿಇ ಖಾಸಗಿ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ರಾಮಪ್ಪ ಪೂಜಾರಿ ಮತ್ತು ಪವನ್‌ ಜಾಧವ್‌ ಅವರು ಅಕ್ಕಪಕ್ಕ ಮನೆಯವರು. ಕ್ರಿಕೆಟ್‌ ಆಡುವಾಗ ಬಾಲ್‌ ಶಿಕ್ಷಕ ರಾಮಪ್ಪ ಪೂಜಾರಿ ಮನೆಯಲ್ಲಿ ಬಿದ್ದಿತ್ತು. ಆರೋಪಿ ಪವನ್‌ ಜಾಧವ್‌ ನಿಮ್ಮ ಮನೆಯಲ್ಲಿ ಬಾಲು ಬಿದ್ದಿದೆ, ಕೊಡಿ ಎಂದು ಕೇಳಿದ್ದಾನೆ. ಅದಕ್ಕೆ ರಾಮಪ್ಪ ಪೂಜಾರಿ ಇಲ್ಲಿ ಇಲ್ಲ ಎಂದಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.

ಅನಂತರ ಸ್ಟಾಫ್‌ ರೂಂ ಗೆ ಬಂದ ಪವನ್‌ ಬಿಯರ್‌ ಬಾಟಲ್‌ನಿಂದ ಶಿಕ್ಷಕ ರಾಮಪ್ಪ ಪೂಜಾರಿಗೆ ಇರಿದಿದ್ದು, ಗಾಯಗೊಂಡ ಶಿಕ್ಷಕನನ್ನು ಸಾವಳಗಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಳಗಿ ಠಾಣೆ ಪೊಲೀಸರು ಪವನ್‌ ಜಾದವ್‌ನನ್ನು ಬಂಧನ ಮಾಡಿದ್ದಾರೆ.