Home Crime Puttur Crime News: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಕತ್ತಿಯಿಂದ ಹಲ್ಲೆ

Puttur Crime News: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಕತ್ತಿಯಿಂದ ಹಲ್ಲೆ

Puttur crime News

Hindu neighbor gifts plot of land

Hindu neighbour gifts land to Muslim journalist

Puttur Crime News: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ವ್ಯಕ್ತಿಯೋರ್ವ ಕತ್ತಿಯಿಂದ ಹಲ್ಲೆ ಮಾಡಿರುವ ಕುರಿತು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Toll Plaza: ದೇಶಾದ್ಯಂತ ಟೋಲ್ ಫ್ಲಾಜಾಗಳು ರದ್ದು, ಸದ್ಯದಲ್ಲೇ ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ !!

ಬಳ್ಪ ನಿವಾಸಿ ರಮೇಶ್‌ ಕೆ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಸುಂದರ ಹೊಸ್ಮಠ ಎಂಬುವವರೇ ಆರೋಪಿ.

ರಮೇಶ್‌ ಅವರು ತಮ್ಮ ಹೆಂಡತಿ ಮತ್ತು ಸಣ್ಣ ಮಗುವಿನೊಂದಿಗೆ ಬಳ್ಪದ ಮನೆಯಲ್ಲಿ ವಾಸವಾಗಿದ್ದರು. ಮಾ.26 ರಂದು ಸಂಜೆ ಮನೆಯಲ್ಲಿರುವಾಗ ಅವರ ಸಂಬಂಧಿಕರಾದ ಸುಂದರ ಹೊಸ್ಮಠ ಮನೆಗೆ ಬಂದು ಕುಳಿತು ಜೋರಾಗಿ ಮಾತನಾಡುತ್ತಿದ್ದು, ಈ ವೇಳೆ ರಮೇಶ್‌ ಅವರು ಸಣ್ಣ ಮಗು ಮಲಗಿದೆ ಎಂದು ಹೇಳಿ, ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಸುಂದರ ಅವರು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: MGNREGA Wage Rates Hike: ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರದಿಂದ ದೊಡ್ಡ ಕೊಡುಗೆ, ನರೇಗಾ ವೇತನದಲ್ಲಿ ಬಂಪರ್ ಹೆಚ್ಚಳ

ಈ ಕುರಿತು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.