Home Crime Immoral Relationship: ಪರಪುರಷನ ಸಂಗಕ್ಕೆ ಅಡ್ಡಿ: ಅನ್ನಕ್ಕೆ ವಿಷ ಹಾಕಿ ಇಡೀ ಕುಟುಂಬವನ್ನೇ ಮುಗಿಸಲು ಸ್ಕೆಚ್‌...

Immoral Relationship: ಪರಪುರಷನ ಸಂಗಕ್ಕೆ ಅಡ್ಡಿ: ಅನ್ನಕ್ಕೆ ವಿಷ ಹಾಕಿ ಇಡೀ ಕುಟುಂಬವನ್ನೇ ಮುಗಿಸಲು ಸ್ಕೆಚ್‌ ಹಾಕಿದಾಕೆ ಅರೆಸ್ಟ್ ‌

Hindu neighbor gifts plot of land

Hindu neighbour gifts land to Muslim journalist

Immoral Relationship: ಅನೈತಿಕ ಸಂಬಂಧಕ್ಕೆ ತನ್ನ ಕುಟುಂಬಸ್ಥರು ಅಡ್ಡಿಯಾಗುತ್ತಾರೆಂದು ಅವರನ್ನು ಸಾಮೂಹಿಕವಾಗಿ ಕೊಲೆ ಮಾಡಲು ಯತ್ನ ಮಾಡಿದಾಕೆಯನ್ನು ಪೊಲೀಸರು ಬಂಧಿಸುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನ್ನಕ್ಕೆ ವಿಷ ಹಾಕಿ ಪತಿ, ಮಕ್ಕಳು, ಅತ್ತೆ ಮಾವನ ಕೊಲೆಗೆ ಯತ್ನ ಮಾಡಿದ್ದ ಮಹಿಳೆ ಚೈತ್ರಾ (33) ಎಂಬಾಕೆಯನ್ನು ಬಂಧನ ಮಾಡಲಾಗಿದೆ.

11 ವರ್ಷಗಳ ಹಿಂದೆ ಗಜೇಂದ್ರ ಎನ್ನುವವರ ಜೊತೆ ಚೈತ್ರಾ ಮದುವೆಯಾಗಿದ್ದು, ಇವರಿಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದು ಮೂರು ವರ್ಷಗಳಿಂದ ಚೈತ್ರಾ ಗಂಡನೊಂದಿಗೆ ವಿನಾಕಾರಣ ಜಗಳ ಮಾಡುತ್ತಿದ್ದಳು. ಈ ನಡುವೆ ಚೈತ್ರಾಗೆ ಪುನೀತ್‌ ಎನ್ನುವವನ ಪರಿಚಯವಾಗಿದ್ದು ಆತನ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದಳು. ಇದು ಗಂಡನಿಗೆ ಗೊತ್ತಾಗಿ ಆತ ಚೈತ್ರಾಳ ಮನೆಮಂದಿಯನ್ನು ಕರೆಸಿದ್ದ. ನಂತರ ರಾಜಿ ಪಂಚಾಯಿತಿ ಮಾಡಲಾಗಿದೆ.

ಅನಂತರ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ಅನಂತರ ಅದೇ ಗ್ರಾಮದ ಶಿವು ಜೊತೆ ಚೈತ್ರಾ ಅನೈತಿಕ ಸಂಬಂಧ ಹೊಂದಿದಳು. ಈ ವಿಷಯವೇನಾದರೂ ಕುಟುಂಬದವರಿಗೆ ತಿಳಿದರೆ ಎನ್ನುವ ಕಾರಣಕ್ಕೆ ಗಂಡ, ಮಕ್ಕಳು, ಅತ್ತೆ-ಮಾವಗೆ ಮುಗಿಸುವ ಸ್ಕೆಚ್‌ ಹಾಕಿದ್ದಾಳೆ. ಕುಟುಂಬದವರಿಗೆ ತಿಳಿಯದಂತೆ ಅವರ ಊಟ-ತಿಂಡಿಯಲ್ಲಿ ವಿಷಯುಕ್ತ ಮಾತ್ರೆಗಳನ್ನು ಹಾಕುತ್ತಿದ್ದಳು. ಇದಕ್ಕೆ ಶಿವು ಸಹಕಾರ ನೀಡುತ್ತಿದ್ದ.

ಪತಿ ಗಜೇಂದ್ರಗೆ ಈ ವಿಷಯ ತಿಳಿದು ಆತ ಪೊಲೀಸರಿಗೆ ದೂರು ನೀಡಿದ್ದಾನೆ. ವಿಚಾರಣೆ ಬಳಿಕ ಪೊಲೀಸರು ಚೈತ್ರಾಳನ್ನು ಬಂಧನ ಮಾಡಿದ್ದಾನೆ. ಬೇಲೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.