Home Crime Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನು ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನು ಕೊಂದ ತಾಯಿ!

Crime News Bangalore

Hindu neighbor gifts plot of land

Hindu neighbour gifts land to Muslim journalist

Amaravathi: ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ ಘಟನೆಯಿಂದ ಬೇಸತ್ತ ತಾಯಿಯೊಬ್ಬಳು ಆಕೆಯ ಮಗನನ್ನೇ ಹತ್ಯೆಗೈದಿರುವ ಘಟನೆಯೊಂದು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಲಕ್ಷ್ಮೀದೇವಿ (57) ಅವರು ತಮ್ಮ ಮಗ ಕೆ.ಶ್ಯಾಮ್‌ ಪ್ರಸಾದ್‌ (35) ಎಂಬಾತನನ್ನು ಫೆ.13 ರಂದು ಕೊಲೆ ಮಾಡಿದ್ದು, ಈ ಕೊಲೆಯಲ್ಲಿ ಲಕ್ಷ್ಮೀ ಅವರ ಸಂಬಂಧಿಕರು ಸಹಾಯ ಮಾಡಿದ್ದಾರೆ ಎಂದು ಎಸ್ಪಿ ದಾಮೋದರ್‌ ತಿಳಿಸಿದ್ದಾರೆ.

“ಶ್ಯಾಮ್‌ ಅವಿವಾಹಿತನಾಗಿದ್ದು, ಬೆಂಗಳೂರು, ಖುಮ್ಮಂ ಮತ್ತು ಹೈದರಾಬಾದ್‌ನಲ್ಲಿರುವ ತನ್ನ ಸಂಬಂಧಿಗಳ ಜೊತೆಗೆ ಹಾಗೂ ಚಿಕ್ಕಮ್ಮನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅವರ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ. ಇದನ್ನು ಸಹಿಸದೆ ಲಕ್ಷ್ಮೀ ತನ್ನ ಮಗನನ್ನು ಹತ್ಯೆ ಮಾಡಿದ್ದಾರೆ. ಹರಿತವಾದ ವಸ್ತುವಿನಿಂದ ಶ್ಯಾಮ್‌ನನ್ನು ಹತ್ಯೆ ಮಾಡಿ, ಬಳಿಕ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ, ಚೀಲಗಳಲ್ಲಿ ತುಂಬಬಲಾಗಿದೆ. ನಂತರ ಅದನ್ನು ಕಾಲುವೆಯಲ್ಲಿ ಎಸೆದಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.