Home Crime CRIME: ಬೆಂಗಳೂರಲ್ಲಿ ಎಟಿಎಂ ವಾಹನದ ಜೊತೆ 7 ಕೋಟಿ ದರೋಡೆ

CRIME: ಬೆಂಗಳೂರಲ್ಲಿ ಎಟಿಎಂ ವಾಹನದ ಜೊತೆ 7 ಕೋಟಿ ದರೋಡೆ

Hindu neighbor gifts plot of land

Hindu neighbour gifts land to Muslim journalist

CRIME: ಬೆಂಗಳೂರಿನ ಜಯದೇವ ಬಳಿಯ ಡೈರಿ ಸರ್ಕಲ್‌ನಲ್ಲಿ ಎಟಿಎಂಗೆ (ATM Van) ಹಣ ತುಂಬುವ ವಾಹನವನ್ನು ಅಡ್ಡಗಟ್ಟಿದ ದರೋಡೆಕೋರರು 7 ಕೋಟಿ 11 ಲಕ್ಷ ಹಣ ದರೋಡೆ ಮಾಡಿದ್ದಾರೆ.

HDFC ಬ್ಯಾಂಕ್‌ನಿಂದ ಹಣ ತರುತ್ತಿದ್ದ CMS ವಾಹನಕ್ಕೆ ಇನೋವಾದಲ್ಲಿ ಬಂದ ದರೋಡೆಕೋರರು ಅಡ್ಡಗಟ್ಟಿದ್ದಾರೆ. CMS ವಾಹನದಲ್ಲಿದ್ದ 7 ಕೋಟಿ 11 ಕೋಟಿ ದರೋಡೆ ಮಾಡಿದ್ದಾರೆ.

7 ಕೋಟಿ 11 ಲಕ್ಷ ಹಣ ದರೋಡೆ ಮಾಡಿದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. KA 03 8052 ನಂಬರಿನ ಇನ್ನೋವಾ ಕಾರು ಮಾಲೀಕರಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಸಿಎಂಎಸ್ ವಾಹನ ಎಟಿಎಂಗೆ ಹಣ ತುಂಬಲು ಹೋಗುತ್ತಿತ್ತು. ಆಗ KA 03 8052 ನಂಬರಿನ ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರು, ನಾವು ಸೆಂಟ್ರಲ್ ಟ್ಯಾಕ್ಸ್ ಆಫೀಸರ್ಸ್ ಎಂದು ಹೇಳಿದ್ದಾರೆ. ಅವ್ರ ವೇಷಭೂಷಣ ನೋಡಿದ ಸಿಎಂಎಸ್ ಸಿಬ್ಬಂದಿ, ಒಂದು ಕ್ಷಣ ಮರುಳಾಗಿದ್ದಾರೆ. ತಕ್ಷಣವೇ ಎಟಿಎಂಗೆ ಹಣ ತುಂಬೋದನ್ನು ನಿಲ್ಲಿಸಿದ್ದಾರೆ.ಹಣದ ಸಮೇತ ಸಿಬ್ಬಂದಿಯನ್ನು ತಮ್ಮ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡ ರಾಬರ್ಸ್, ಡಾಕ್ಯುಮೆಂಟ್ ವೆರಿಫೈ ಮಾಡಬೇಕು ಎಂದಿದ್ದಾರೆ. ಡೈರಿ ಸರ್ಕಲ್ ಬಳಿ ಕರೆದೋಯ್ದು ಸಿಎಂಎಸ್‌ ಸಿಬ್ಬಂದಿಯನ್ನು ಕೆಳಗಿಳಿಸಿ ಹಣದ ಸಮೇತ ರಾಬರ್ಸ್ ಎಸ್ಕೆಪ್ ಆಗಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.