Home Crime Crime: 15 ವರ್ಷದ ಬಾಲಕಿಯನ್ನು ರೆಸಾರ್ಟ್ ಗೆ ಕರೆದೊಯ್ದು ಅತ್ಯಾಚಾರ: ಪೊಲೀಸ್‌ ಅಧಿಕಾರಿಯ ಮಗನ ಶಾಮೀಲು!

Crime: 15 ವರ್ಷದ ಬಾಲಕಿಯನ್ನು ರೆಸಾರ್ಟ್ ಗೆ ಕರೆದೊಯ್ದು ಅತ್ಯಾಚಾರ: ಪೊಲೀಸ್‌ ಅಧಿಕಾರಿಯ ಮಗನ ಶಾಮೀಲು!

Uttar Pradesh

Hindu neighbor gifts plot of land

Hindu neighbour gifts land to Muslim journalist

Crime: ಬೆಳಗಾವಿ ನಗರದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಮೂರು ಜನ ಅಪ್ತಾಪ್ತ ಬಾಲಕರು 15 ವರ್ಷದ ಬಾಲಕಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿರುವ ಘಟನೆ ನಡೆದಿದೆ. ಹತ್ತು ದಿನಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಮನೆಗೆ ಬಾಲಕಿ ವಾಪಾಸ್‌ ಆದಾಗ ಹೊಟ್ಟೆ ನೋವು ಎಂದಿದ್ದಳು. ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಮಗನೊಬ್ಬ ಶಾಮಿಲಾಗಿದ್ದಾನೆ. ಅವನನ್ನು ಹೊರತು ಪಡಿಸಿ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಸಾಕೀಬ್ ಎಂಬಾತ ತನ್ನ ಹೆಸರಲ್ಲಿ ರೂಮ್ ಬುಕ್ ಮಾಡಿದ್ದರು. ಬಾಲಕಿಯ ಸ್ನೇಹಿತ ಅಪ್ರಾಪ್ತ ಆಕೆಯನ್ನ ಕರೆದುಕೊಂಡು ಹೋಗಿದ್ದ.

ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಫೋಕ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಸಾಕೀಬ್‌ ಹಾಗೂ ಮತ್ತೊಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಮತ್ತೋರ್ವ ಅಪ್ರಾಪ್ತ ಬಾಲಕನಿಗೆ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ