Home Breaking Entertainment News Kannada Pathaan Movie bikini issue : ‘ಪಠಾಣ್’ ನಲ್ಲಿ ದೀಪಿಕಾಗೆ ಕೇಸರಿ ಬಣ್ಣದ ಬಿಕಿನಿ ಹಾಕಿಸಿದ್ದು...

Pathaan Movie bikini issue : ‘ಪಠಾಣ್’ ನಲ್ಲಿ ದೀಪಿಕಾಗೆ ಕೇಸರಿ ಬಣ್ಣದ ಬಿಕಿನಿ ಹಾಕಿಸಿದ್ದು ಯಾಕೆಂದರೆ… ನಿರ್ದೇಶಕ ಸಿದ್ದಾರ್ಥ್​ ಆನಂದ್​ ಹೇಳಿದ್ದೇನು?

Pathaan Movie bikini issue

Hindu neighbor gifts plot of land

Hindu neighbour gifts land to Muslim journalist

Pathaan Movie bikini issue : ಕೆಲವು ಸಿನಿಮಾಗಳೇ ಹಾಗೆ. ಬಿಡುಗಡೆಯಾಗುವ ಮುಂಚಿತವಾಗೇ ಸಾಕಷ್ಟು ಸುದ್ಧಿಮಾಡಿಬಿಡುತ್ತವೆ. ಅದರಲ್ಲೂ ಕೆಲವು ಚಿತ್ರಗಳು ಚಿತ್ರಕಥೆ, ಸಿನಿಮಾ ಮೇಕಿಂಗ್, ಚಿತ್ರ ಗೀತೆಗಳು, ಅದರ ಟೀಸರ್, ಪೋಸ್ಟರ್ ಗಳು ಹೀಗೆ ಬೇರೆ ಬೇರೆ ವಿಚಾರವಾಗಿ ಫೇಮಸ್ ಆದ್ರೆ ಇನ್ನು ಕೆಲವು ಚಿತ್ರಗಳು ವಿರೋಧಗಳನ್ನೆದುರಿಸಿ ಫೇಮಸ್ ಆಗುತ್ತವೆ. ಅಂತರದಲ್ಲಿ ಬಾಲಿವುಡ್ ನ ಪಾಠಣ್(Pathaan) ಸಿನಿಮಾ ಕೂಡ ಒಂದು. ಪ್ರಮುಖವಾಗಿ ಅದರಲ್ಲಿ ಹಿರೋಯಿನ್ ಧರಿಸುವ ಕೇಸರಿ ಬಿಕನಿ(bikini)ವಿಚಾರವಂತೂ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಯ್ತು. ಸಿನಿಮಾ ಓಡೋದೇ ಇಲ್ಲ ಎನ್ನುವ ಮಟ್ಟಿಗೆ ಸುದ್ಧಿಯಾಯ್ತು. ಇದೆಲ್ಲದರ ನಡುವೆಯೊ ಸಿನಿಮಾ ಸೂಪರ್ ಹಿಟ್ ಆಯ್ತು. ಆದರೀಗ ಇಷ್ಟೆಲ್ಲಾ ವಿರೋಧ ಬಂದರೂ ಕೇಸರಿ (Pathaan Movie bikini issue) ಬಿಕಿನಿ ದೃಶ್ಯಕ್ಕೆ ನಿರ್ದೇಶಕರು ಯಾಕೆ ಕತ್ತರಿ ಹಾಕಲಿಲ್ಲ ಎಂಬ ಕುರಿತು ಸಿದ್ದಾರ್ಥ್​ ಆನಂದ್​(Siddarth Anand) ಮಾತನಾಡಿದ್ದಾರೆ.

ಸಿದ್ದಾರ್ಥ್​ ಆನಂದ್ ನಿರ್ದೇಶನದ ಶಾರುಖ್​ ಖಾನ್​(Sharuk Khan) ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್​’ ಸಿನಿಮಾದ (Pathaan Movie) ಬಿಡುಗಡೆಗೂ ಮುನ್ನ ಪರಿಸ್ಥಿತಿ ಬೇರೆಯದೇ ರೀತಿ ಇತ್ತು. ‘ಪಠಾಣ್​’ ಸಿನಿಮಾವನ್ನು ಒಂದು ವರ್ಗದ ನೆಟ್ಟಿಗರು ಬಹಿಷ್ಕಾರ ಮಾಡಲು ಮುಂದಾಗಿದ್ದರು. ಅದಕ್ಕೆ ಕಾರಣ ದೀಪಿಕಾ ಧರಿಸಿದ್ದ ಕೇಸರಿ ಬಣ್ಣ ಬಿಕಿನಿ. ಈ ಬಿಕಿನಿ ಧರಿಸಿ ‘ಬೇಷರಂ ರಂಗ್​..’ ಎಂದು ದೀಪಿಕಾ ಹಾಡಿ ಕುಣಿದಿದ್ದನ್ನು ಕೆಲವು ಹಿಂದೂ ಪರ ಸಂಘಟನೆಗಳು ವಿರೋಧಿಸಿದ್ದವು. ಆದರೀಗ ಸಿನಿಮಾ ರಿಲೀಸ್ ಆಗಿ ಸೂಪರ್​ ಹಿಟ್​ ಆಗಿದೆ. ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಸಿ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ. ಅಂದಹಾಗೆ ಸಿನಿಮಾದಲ್ಲಿ ದೀಪಿಕಾ ಪಡುಕೋಣೆಗೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು ಯಾಕೆ ಅನ್ನೋದರ ಬಗ್ಗೆ ನಿರ್ದೇಶಕ ಸಿದ್ದಾರ್ಥ್​ ಆನಂದ್ (Siddharth Anand)​ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ನೂಸ್​18 ರೈಸಿಂಗ್​ ಇಂಡಿಯಾ ಸಮಿಟ್​ 2023’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಾರ್ಥ್​ ಆನಂದ್​ ಅವರು ಬಿಕಿನಿ ಕಾಂಟ್ರವರ್ಸಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಯಾವುದೇ ಉದ್ದೇಶ ಹೊಂದಿ ಕೇಸರಿ ಬಿಕನಿಯನ್ನು ಆಯ್ಕೆ ಮಾಡಲಿಲ್ಲ. ಹಾಗೇ ಸುಮ್ಮನೆ ಕಾಸ್ಟ್ಯೂಮ್​ ಸೆಲೆಕ್ಟ್​ ಮಾಡಿದೆವು ಅಷ್ಟೆ. ಸೆಲೆಕ್ಟ್ ಆದಮೇಲೂ ಆ ಬಗ್ಗೆ ಹೆಚ್ಚೇನೂ ಯೋಚಿಸಿರಲಿಲ್ಲ. ಶೂಟಿಂಗ್ ಸ್ಪಾಟ್ ಅಲ್ಲಿ ಸೂರ್ಯನ ಬೆಳಕು ಚೆನ್ನಾಗಿತ್ತು. ಹುಲ್ಲು ಹಚ್ಚ ಹಸಿರಾಗಿತ್ತು. ನೀರು ನೀಲಿಯಾಗಿ ಕಾಣುತ್ತಿತ್ತು. ಅದರ ನಡುವೆ ಕೇಸರಿ ಬಣ್ಣ ತುಂಬ ಚೆನ್ನಾಗಿ ಕಾಣಿಸುತ್ತಿತ್ತು. ಒಂದು ಒಳ್ಳೆಯ ಸೀನ್ ನಮಗೆ ಸಿಕ್ತು. ಧಾರ್ಮಿಕ ವಿಚಾರಗಳೇನೂ ನಮ್ಮ ತಲೆಯಲ್ಲಿರಲೇ ಇಲ್ಲ. ತೆರೆ ಮೇಲೆ ಅದನ್ನು ನೋಡಿದಾಗ ಪ್ರೇಕ್ಷಕರು ಈ ರೀತಿ ಇದನ್ನು ಸ್ವೀಕರಿಸುತ್ತಾರೆ ಅನೋ ಸಣ್ಣ ಕಲ್ಪನೆ ಕೂಡ ನಮ್ಮಲ್ಲಿರಲಿಲ್ಲ. ಅಲ್ಲದೆ ಕೆಟ್ಟ ಉದ್ದೇಶವೂ ನಮ್ಮದಾಗಿರಲಿಲ್ಲ ಎಂದು ಹೇಳಿದ್ದಾರೆ.

ಬಿಡುಗಡೆಗೂ ಮುನ್ನ ಎಷ್ಟೇ ವಿರೋಧ ವ್ಯಕ್ತವಾದರೂ ಕೂಡ ‘ಪಠಾಣ್​’ ಸಿನಿಮಾದಲ್ಲಿ ಕೇಸರಿ ಬಿಕಿನಿ ದೃಶ್ಯಕ್ಕೆ ನಿರ್ದೇಶಕರು ಕತ್ತರಿ ಹಾಕಲಿಲ್ಲ. ಅಂದುಕೊಂಡಂತೆಯೇ ಸಿನಿಮಾ ಬಿಡುಗಡೆ ಬಳಿಕ ಯಾವುದೇ ವಿವಾದ ಆಗಲಿಲ್ಲ. ಇದು ರಾಷ್ಟ್ರ ಭಕ್ತಿ ಕಥಾಹಂದರದ ಸಿನಿಮಾ ಆದ್ದರಿಂದ ಜನರು ಸಖತ್​ ಬೆಂಬಲ ಸೂಚಿಸಿದರು. ಅಂತಿಮವಾಗಿ ‘ಪಠಾಣ್​’ ಸಿನಿಮಾ ಗೆದ್ದು ಬೀಗಿತು. ಇಷ್ಟು ವರ್ಷಗಳ ಕಾಲ ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್​ ಖಾನ್​ ಅವರು ಈ ಚಿತ್ರದಿಂದ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದರು.

ಅಂದಹಾಗೆ ಸಿದ್ದಾರ್ಥ್​ ಆನಂದ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ. ‘ವಾರ್​’, ‘ಪಠಾಣ್​’ ಸಿನಿಮಾಗಳಿಂದಾಗಿ ಅವರ ಖ್ಯಾತಿ ಹೆಚ್ಚಿದೆ. ಸಾಹಸಮಯ ಸಿನಿಮಾಗಳನ್ನು ಮಾಡುವಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ: Radhika pandit : ‘ಅತ್ತಿಗೆ, Yash19 ಅಪ್​ಡೇಟ್ ಕೊಡಿ, ಇಲ್ದಿದ್ರೆ ಸ್ಟ್ರೈಕ್ ಮಾಡ್ತೀವಿ’ – ನಟಿಗೆ ಅಭಿಮಾನಿಗಳ ಬೇಡಿಕೆ!!