Home Breaking Entertainment News Kannada Weekend with ramesh: ಈ ವಾರ ವೀಕೆಂಡ್ ಕುರ್ಚಿ ಏರೋ ಸಾಧಕರು ಯಾರು ಗೊತ್ತಾ? ಜೀ...

Weekend with ramesh: ಈ ವಾರ ವೀಕೆಂಡ್ ಕುರ್ಚಿ ಏರೋ ಸಾಧಕರು ಯಾರು ಗೊತ್ತಾ? ಜೀ ಕನ್ನಡ ಶೇರ್ ಮಾಡಿದ ಪೋಸ್ಟ್ ನೋಡಿ, ಗೆಸ್ ಮಾಡಿ!

Weekend with Ramesh

Hindu neighbor gifts plot of land

Hindu neighbour gifts land to Muslim journalist

Weekend with Ramesh: ವೀಕೆಂಡ್ ವಿತ್ ರಮೇಶ್ ಸೀಸನ್ 5(Weekend with Ramesh) ನ ಈ ವಾರದ ಅತಿಥಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಕಳೆದ ವಾರ ಮೊದಲ ಸಿನಿಮಾದಿಂದಲೇ ಕನ್ನಡಿಗರ ಮನ ಗೆದ್ದ ಲವ್ಲಿಸ್ಟಾರ್ ನೆನಪಿರಲಿ ಪ್ರೇಮ್(lovely Star prem) ಅವರು ಭಾಗಿಯಾಗಿದ್ದರು. ಈ ವಾರದ ಅತಿಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಯಾರು ಅಂತ ರಿವೀಲ್ ಆಗಿದೆ.

ಹೌದು, ಜೀ ಕನ್ನಡ(Zee Kannada) ವಾಹಿನಿ ಈ ವಾರ ಸಾಧಕರ ಕುರ್ಚಿ ಏರುವ ಅತಿಥಿಗಳು ಯಾರೆಂದು ಗೆಸ್ ಮಾಡಿ ಅಂತ ಪೋಸ್ಟ್ ಶೇರ್ ಮಾಡಿದೆ. ಮುಂದಿನ ವಾರ ಕೆಂಪು ಕುರ್ಚಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ‘ಒಬ್ಬರು ಡಾನ್ಸ್ ಲೋಕದ ಚಿನ್ನ, ಮತ್ತೊಬ್ಬರು ಇವರ ಮಾತು ಕೋಳೋದೆ ಚೆನ್ನ’ ಯಾರೆಂದು ಗೆಸ್ ಮಾಡಿ ಅಂತ ಜೀ ವಾಹಿನಿ ಬ್ಲರ್ ಫೋಟೋ ಶೇರ್ ಮಾಡಿದೆ.

ಅಂದಹಾಗೆ ಇವರು ಮಾತ್ಯರು ಅಲ್ಲ ಒಬ್ಬರು ಭಾರತ ಚಿತ್ರ ರಂಗದ ಅನೇಕ ನಟ ನಟಿಯರನ್ನು ಕುಣಿಸಿದ, ಖ್ಯಾತ ನೃತ್ಯ ನಿರ್ದೇಶಕ ಚಿನ್ನ ಪ್ರಕಾಶ್(Chinni Prakash) ಹಾಗೂ ಮತ್ತೊಬ್ಬರು ಥಟ್ ಅಂತ ಹೇಳಿ ಎನ್ನುತ್ತಲೇ ಕನ್ನಡಿಗರ ಮನೆ ಮಾತಾದ, ಅದೇ ಕಾರ್ಯಕ್ರಮದ ನಿರೂಪಕ ಡಾ.ನಾ.ಸೋಮೇಶ್ವರ್(Dr. Na. Someshwara). ಒಟ್ಟಿನಲ್ಲಿ ಜೀ ಕನ್ನಡ ಹಂಚಿಕೊಂಡಿರೋ ಬ್ಲರ್ ಬ್ಲರ್ ಫೋಟೋದಲ್ಲಿ ಈ ಇಬ್ಬರು ಸಾಧಕರನ್ನು ಗುರುತಿಸಿದ ಅಭಿಮಾನಿಗಳು ಇಬ್ಬರ ಹೆಸರನ್ನು ಸರಿಯಾಗಿ ಗುರುತಿಸಿ ಕಾಮೆಂಟ್ ಮಾಡುತ್ತಿದ್ದಾರೆ.

ಡಾ. ಸೋಮೇಶ್ವರ್ : ಚಂದನ ವಾಹಿನಿಯಲ್ಲಿ(Chandana Channel) ಪ್ರಸಾರವಾಗುವ ಥಟ್ ಅಂತ ಹೇಳಿ ಕನ್ನಡ ಕ್ವಿಜ್(Tat anta heli quiz Program) ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾಗಿರೋ ಇವರು, ಫ್ರತಿದಿನ ತಪ್ಪದೆ ‘ಉತ್ಸಾಹ ಹಾಗೂ ಕ್ರಮಬದ್ಧತೆ’ಯಿಂದ ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮ 4000 ಕಂತುಗಳನ್ನು ದಾಟಿ ಮುಂದೆ ಸಾಗುತ್ತಿದೆ. ಇದು ಭಾರತದ ಟೆಲಿವಿಷನ್ ಇತಿಹಾಸದಲ್ಲೇ ಒಂದು ದಾಖಲೆಯನ್ನು ಸೃಷ್ಟಿಸಿದೆ. ವೃತ್ತಿಯಿಂದ ವೈದ್ಯರಾಗಿರುವ ಸೋಮೇಶ್ವರ ಅವರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ವೈದ್ಯ ವೃತ್ತಿ ಜೊತೆಗೆ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.

ಚಿನ್ನಿ ಪ್ರಕಾಶ್ : 1962 ರ ರಾಕಿ ಹಿಂದಿ ಸಿನಿಮಾ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಚಿನ್ನಿ ಪ್ರಕಾಶ್ ಅನೇಕ ಭಾಷೆಯಗಳಲ್ಲಿ ಕೆಲಸ ಮಾಡಿದ್ದಾರೆ. ಹಿಂದಿ, ತೆಲುಗು , ತಮಿಳು ಹಾಗೂ ಕನ್ನಡ ಸೇರಿದಂತೆ ಅನೇಕ ಘಾಟಾನುಘಟಿ ಕಲಾವಿದರಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ನೃತ್ಯ ನಿರ್ದೇಶಕರಾಗಿ ಕೆಲಸ ಮಾಡುವ ಜೊತೆಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೂ ಒಂದು ಸಿನಿಮಾಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

ಇನ್ನು ಇಬ್ಬರನ್ನು ವೀಕೆಂಡ್ ಕಾರ್ಯಕ್ರಮದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಲ್ಲದೇ ಇವರಿಬ್ಬರನ್ನು ಆರಿಸಿದ್ದಕ್ಕೆ ಮೆಚ್ಚುಗೆಯ ಕಾಮೆಂಟ್ ಹರಿದು ಬರುತ್ತಿದೆ. ಈಗ ಕುರ್ಚಿಗೊಂದು ಘನತೆ ಬಂತು ಎಂದು ಹೇಳಿದ್ದಾರೆ. ಈ ಇಬ್ಬರ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಮುಂದಿನ ಶನಿವಾರ ಮತ್ತು ಭಾನುವಾರದವರೆಗೂ ಕಾಯಲೇ ಬೇಕು.

 

https://www.instagram.com/reel/CsA9PDJBnHG/?igshid=NjZiM2M3MzIxNA==

 

ಇದನ್ನು ಓದಿ: Karnataka Election 2023: ವೋಟಿಂಗ್ ಗಾಗಿ ಅಲಂಕೃತಗೊಂಡ ಮತಗಟ್ಟೆಗಳು!