Home Breaking Entertainment News Kannada ತುಳುನಾಡಲ್ಲಿ ಮತ್ತೆ ಸದ್ದು ಮಾಡಲಿದೆ ತುಳು ನಟನ ವರ್ಲ್ಡ್ ಫೇಮಸ್ ಡೈಲಾಗ್!! ಎರಡು ವರ್ಷಗಳಿಂದ ತಯಾರಿಯಲ್ಲಿದ್ದ...

ತುಳುನಾಡಲ್ಲಿ ಮತ್ತೆ ಸದ್ದು ಮಾಡಲಿದೆ ತುಳು ನಟನ ವರ್ಲ್ಡ್ ಫೇಮಸ್ ಡೈಲಾಗ್!! ಎರಡು ವರ್ಷಗಳಿಂದ ತಯಾರಿಯಲ್ಲಿದ್ದ ಚಿತ್ರಕ್ಕೆ ಟೈಟಲ್ ಯಾವುದು ಗೊತ್ತಾ!??

Hindu neighbor gifts plot of land

Hindu neighbour gifts land to Muslim journalist

ಹಳೆಯ ತುಳು ಚಿತ್ರವೊಂದರ ಫೇಮಸ್ ‘ಏರೆಗಾವಿಯೆ ಕಿರಿಕಿರಿ ‘ ಎಂಬ ತುಳು ನಟನ ವರ್ಲ್ಡ್ ಫೇಮಸ್ ಡೈಲಾಗ್ ಅನ್ನೇ ಟೈಟಲ್ ಮಾಡ್ಕೊಂಡ ಚಿತ್ರ ಇದೀಗ ಕರಾವಳಿಯಲ್ಲಿ ಒಡ್ತಿದೆ.ತುಳು ಸಿನಿಮಾ ಒಂದರಲ್ಲಿ ನವೀನ್ ಡಿ. ಪಡೀಲ್ ಹಾಗೂ ಸತೀಶ್ ಬಂದಳೆ ಅವರ ಮಾತಿನ ‘ಎರೆಗಾವುಯೇ ಕಿರಿಕಿರಿ ಉಂದು ರಗಾಳೆ ಇಜ್ಜಿ’ ಎಂಬ ತಮಾಷೆಯ ಡೈಲಾಗ್ ನ್ನೆ ಟೈಟಲ್ ಮಾಡಿಕೊಂಡು ಎರಡು ವರ್ಷಗಳಿಂದ ತಯಾರಿಯಲ್ಲಿದ್ದ ತುಳು ಚಿತ್ರವೊಂದು ಬಿಡುಗಡೆಗೆ ತಯಾರಾಗಿದ್ದು, ಕೊನೆಯ ಹಂತದ ಎಡಿಟಿಂಗ್ ಕಾರ್ಯ ನಡೆಸುತ್ತಿದೆ.

ರೋಶನ್ ವೇಗಸ್ ನಿರ್ಮಾಣದ, ರಾಮ್ ಶೆಟ್ಟಿ ನಿರ್ದೇಶದಲ್ಲಿ ಮೂಡಿಬಂದಿರುವ ಚಿತ್ರವು 2019 ರಲ್ಲೇ ಚಿತ್ರದ ಶೂಟಿಂಗ್ ಪ್ರಾರಂಭವಾಗಿತ್ತು.ಆದರೆ ಲಾಕ್ ಡೌನ್ ಹಾಗೂ ಇನ್ನಿತರ ಅಡಚಣೆಗಳಿಂದಾಗಿ ದಿನ ದೂಡುವಂತಾಗಿತ್ತು. ಚಿತ್ರದ ಎರಡು ಹಂತದ ಶೂಟಿಂಗ್ ಬ್ರಹ್ಮಾವರದಲ್ಲಿ ನಡೆದಿದ್ದು,ಸದ್ಯ ತುಳುನಾಡಿನ ಜನತೆಗೆ ಕಾಮಿಡಿ ಜೊತೆಗೆ ಉತ್ತಮ ಸಂದೇಶವನ್ನು ನೀಡವ ಈ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ.ಅರವಿಂದ ಬೋಳಾರ್, ನವೀನ್ ಡಿ. ಪಡೀಲ್ ಹಾಗೂ ಇನ್ನಿತರ ಹಾಸ್ಯ ಕಲಾವಿದರು ಚಿತ್ರ ತಂಡದಲ್ಲಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಮಹಮ್ಮದ್‌ ನಹೀಮ್‌ ಉದ್ಯಾವರ, ಐಶ್ವರ್ಯ ಹೆಗ್ಡೆ, ರೋಶನ್‌ ವೇಗಸ್‌, ಶ್ರದ್ಧಾ ಸಾಲ್ಯಾನ್‌, ಹರೀಶ್‌ ವಾಸು ಶೆಟ್ಟಿ-ಸಾಯಿಕೃಷ್ಣ ಕುಡ್ಲ, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ಉಮೇಶ್‌ ಮಿಜಾರ್‌, ಸುಂದರ ರೈ ಮಂದಾರ, ದಿನೇಶ್‌ ಕೋಡಪದವು, ಪ್ರದೀಪ್‌ ಚಂದ್ರ, ಸುನೀಲ್ ನೆಲ್ಲಿಗುಡ್ಡೆ, ರಘು ಪಾಂಡೇಶ್ವರ, ಸರೋಜಿನಿ ಶೆಟ್ಟಿ, ಶೇಖರ್‌ ಭಂಡಾರಿ, ಶ್ರೀಜಿತ್‌ ವಸಂತ ಮುನಿ ಯಾಲ್, ಪ್ರಿಯಾಮಣಿ, ಪವಿತ್ರ ಶೆಟ್ಟಿ- ಡಿಬಿಸಿ ಶೇಖರ್‌, ಕುಶಿ ಚಂದ್ರಶೇಖರ್‌ ಮೊದಲಾದವರು ಸಿನೆಮಾದಲ್ಲಿದ್ದಾರೆ. ರಾಮ್‌ದಾಸ್‌ ಸಸಿಹಿತ್ಲು ಚಿತ್ರದ ಸಹನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಛಾಯಾಗ್ರಹಣ ರವಿಚಂದನ್‌ ಅವರದ್ದು. ಚಿತ್ರಕ್ಕೆ ವಿ. ಮನೋಹರ್‌ ಸಂಗೀತ ನೀಡಿದ್ದಾರೆ. ಚಿತ್ರಕತೆ ಸಚಿನ್‌ ಶೆಟ್ಟಿ ಕುಂಬ್ಳೆ ಅವರದ್ದಾಗಿದ್ದು, ಸಂಭಾಷಣೆ-ಸಾಹಿತ್ಯ ಡಿಬಿಸಿ ಶೇಖರ್‌ ಅವರು ನೀಡಿದ್ದಾರೆ. ಸಂಕ ಲನ ನಾಸಿರ್‌ ಹಕೀಮ್‌, ಮದನ್‌ ಹರಿಣಿ ನೃತ್ಯ ಸಂಯೋಜಿಸಿದ್ದರೆ, ಮಾಸ್‌ಮಾದ ಸಾಹಸ ನಿರ್ದೇಶಕರು. ಸಹ ನಿರ್ದೇಶನ ರಾಮ್‌ ದಾಸ್‌ ಸಸಿಹಿತ್ಲು, ಕಲಾ ನಿರ್ದೇಶನ ದೇವಿ ಪ್ರಕಾಶ್‌, ಮೇಕಪ್‌ ಜೆ.ಎನ್‌. ಅಶೋಕ್‌, ವಸ್ತ್ರಾಲಂಕಾರ ರಾಮ್‌ ಕುಮಾರ್‌, ಸ್ಟಿಲ್ ರಾಮ್‌ಪ್ರಸಾದ್‌, ನಿರ್ಮಾಣ ನಿರ್ವಹಣೆ -ಶಿವಾರ್ಜುನ್‌ ದಿನೇಶ್‌ ಜೋಗಿ, ಕಾರ್ಯಕಾರಿ ನಿರ್ಮಾ ಪಕರು -ನಿಕ್ಷಿತ್‌ರಾವ್‌ ನಿಧಿರಾವ್‌ ಚಿತ್ರತಂಡದ ಜತೆಗಿದ್ದಾರೆ.