Home Breaking Entertainment News Kannada Shree Rapaka: ಮದುವೆಗೂ ಮುಂಚೆ ದೇಹ ಹಂಚಿ ಬಿಡಿ: ನಟಿ ರಾಪಕಾ ಹೀಗನ್ನಲು ಇದೆ ಬಲವಾದ...

Shree Rapaka: ಮದುವೆಗೂ ಮುಂಚೆ ದೇಹ ಹಂಚಿ ಬಿಡಿ: ನಟಿ ರಾಪಕಾ ಹೀಗನ್ನಲು ಇದೆ ಬಲವಾದ ವಾದ !

Shree Rapaka
Image source: Teluguvision

Hindu neighbor gifts plot of land

Hindu neighbour gifts land to Muslim journalist

Shree Rapaka: ಚಿತ್ರರಂಗದವರಿಗೆ ಅಭಿಮಾನಿ ಬಳಗ ಬಹಳ ದೊಡ್ಡದಾಗಿಯೇ ಇರುವುದರ ಜೊತೆಗೆ, ಅವರು ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಮನಸೋ ಇಚ್ಛೆ ಏನೇನೋ ಮಾತನಾಡಿ ವಿವಾದವನ್ನು ಸೃಷ್ಟಿಸುತ್ತಲೇ ಇರುತ್ತಾರೆ.

ಇದೀಗ ವಿವಾದಿತ ನಿರ್ದೇಶಕರೆಂದೇ ಖ್ಯಾತಿಯಾಗಿರುವ ರಾಮ್​ ಗೋಪಾಲ್​​ ವರ್ಮಾರ ನಗ್ನ ಸಿನಿಮಾದಲ್ಲಿ ತೆಲುಗು ನಟಿ ಶ್ರೀ ರಾಪಕಾ (Shree Rapaka) ನಟಿಸಿದ್ದು, ಸದ್ಯ ಇತ್ತೀಚೆಗೆ ನಡೆದ ಬಿಗ್​ಬಾಸ್ ಶೋನಲ್ಲೂ ಇವರು ಭಾಗವಹಿಸಿದ್ದಾರೆ.

ಸದ್ಯ ಸಿನಿಮಾಗಳ ಅವಕಾಶ ಕಡಿಮೆ ಇದ್ದರೂ ತಮ್ಮ ಬೋಲ್ಡ್​ ಕಾಮೆಂಟ್​ ಮೂಲಕ ರಾಪಕಾ ಸುದ್ದಿಯಲ್ಲಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ರಾಪಕಾ ಮಾಡಿದ ಕಾಮೆಂಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗಿದೆ.

ಹೌದು, ಸಂದರ್ಶನದಲ್ಲಿ ರಾಪಕಾ ಅವರು ಮದುವೆ ಹಾಗೂ ಸೆಕ್ಸ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆಗೂ ಮುಂಚೆ ಸೆಕ್ಸ್​ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿರುವ ರಾಪಕಾ, ತನ್ನ ಸ್ನೇಹಿತೆಯ ಜೀವನದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದು, ಉದಾಹರಣೆಯನ್ನೂ ಆಧಾರಿಸಿ, ಮದುವೆಯಾದ ಬಳಿಕ ನಿಮ್ಮ ಸಂಗಾತಿ ಗಂಡಸಲ್ಲ ಎಂದು ಗೊತ್ತಾದರೆ ನಿಮ್ಮ ಇಡೀ ಜೀವನವನ್ನು ಕಣ್ಣೀರಿನಲ್ಲಿ ಕಳೆಯಬೇಕಾಗುತ್ತದೆ ಎಂದರು.

ನನ್ನ ಸ್ನೇಹಿತೆ ವೈದ್ಯರೊಬ್ಬರನ್ನು ಮದುವೆ ಆಗಿದ್ದಳು. ಆಕೆಯ ಮೊಲದ ರಾತ್ರಿಯ ಸಮಯದಲ್ಲಿ ತನ್ನ ಗಂಡ ಓರ್ವ ಸಲಿಂಗಕಾಮಿ ಎಂಬುದು ಆಕೆಗೆ ತಿಳಿದು ಬಹಳ ದುಃಖಿತಳಾದಳು. ಹೀಗಾಗಿ ಮದುವೆಗೂ ಮುಂಚೆ ಸೆಕ್ಸ್​ ಮಾಡಿದರೆ ತನ್ನ ಸಂಗಾತಿ ಸಲಿಂಗಕಾಮಿಯೋ? ಇಲ್ಲವೋ? ಎಂಬುದು ತಿಳಿಯುತ್ತದೆ.

ನನ್ನ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸೆಕ್ಸ್​ ತುಂಬಾ ಮುಖ್ಯ. ಅದನ್ನು ಕೊಡಲಾಗದವನನ್ನು ಮದುವೆಯಾಗಿ ಪಶ್ಚತಾಪ ಪಡುವುದು ಸರಿಯಲ್ಲ ಎಂದು ರಾಪಕಾ ಹೇಳಿದ್ದಾರೆ.

ಇದೀಗ ರಾಪಕಾ ಅವರ ಬೋಲ್ಡ್​ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕೆಲವರು ಆಕೆಯನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಆಕೆಯ ಕಾಮೆಂಟ್‌ಗಳನ್ನು ವಿರೋಧಿಸುತ್ತಿದ್ದಾರೆ.

ಒಟ್ಟಿನಲ್ಲಿ ರಾಪಕ ಹೇಳಿದಂತೆ ಮಾಡಿದರೆ ಬಹುಷಃ ನಿಶಿತಾರ್ಥ ಆಗಿರುವ ಎಷ್ಟೋ ಮದುವೆಗಳು ಮುರಿದು ಬೀಳುವ ಸಾಧ್ಯತೆ ಹೆಚ್ಚು ಎಂದು ಹಲವರು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಲವ್ ಜಿಹಾದ್ ತಡೆಗೆ ಬಂತು ಬಲಿಷ್ಠ ಕಾನೂನು! ಏನಿದೆ ಗೊತ್ತಾ ಕೇಂದ್ರದ ಹೊಸ ಕಾನೂನಿನಲ್ಲಿ ?