Home Breaking Entertainment News Kannada Priyanka chopra: ‘ನಾನು ಪ್ರಿಯಾಂಕಾ ಚೋಪ್ರಾಳ ಇನ್ನರ್ವೇರ್ ನೋಡಬೇಕು’ ಎಂದು ಹಟಕ್ಕೆ ಬಿದ್ದಿದ್ನಂತೆ ಆ ನಿರ್ದೇಶಕ!!...

Priyanka chopra: ‘ನಾನು ಪ್ರಿಯಾಂಕಾ ಚೋಪ್ರಾಳ ಇನ್ನರ್ವೇರ್ ನೋಡಬೇಕು’ ಎಂದು ಹಟಕ್ಕೆ ಬಿದ್ದಿದ್ನಂತೆ ಆ ನಿರ್ದೇಶಕ!! ಯಾಕಂತೆ ಗೊತ್ತಾ?

Priyanka Chopra
Image source- Bollywood bubble

Hindu neighbor gifts plot of land

Hindu neighbour gifts land to Muslim journalist

Priyanka Chopra: ಬಾಲಿವುಡ್(Bollywood) ನಲ್ಲಿ ಮಿಂಚಿ ಸದ್ಯ ಹಾಲಿವುಡ್(Hollywood) ನಲ್ಲಿ ಕಮಾಲ್ ಮಾಡುತ್ತಿರೋ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಇತ್ತೀಚೆಗಂತೂ ಸಂದರ್ಶನಗಳ ಮೂಲಕ ಸಕ್ಕತ್ ಸುದ್ಧಿಯಾಗುತ್ತಿದ್ದಾರೆ. ಅದರಲ್ಲೂ ಈಗೀಗಂತೂ ತಮ್ಮ ಸಿನಿ ಜರ್ನಿಯಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ಹೆಚ್ಚಾಗಿ ಮಾತನಾಡಿ, ಅವುಗಳನ್ನು ಬಹಿರಂಗಗೊಳಿಸಿ ಎಲ್ಲರೂ ಅಚ್ಚರಿಪಡುವಂತೆ ಮಾಡುತ್ತಿದ್ದಾರೆ. ಅಂತೆಯೇ ಇದೀಗ ಪ್ರಿಯಾಂಕ ಅವರು ಮತ್ತೊಂದು ಶಾಕಿಂಗ್ ವಿಚಾರವನ್ನು ತೆರೆದಿಟ್ಟು ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.

ಬಾಲಿವುಡ್ ಬೆಡಗಿ ಪ್ರಿಯಾಂಕ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ವಿಚಾರಗಳಿಂದಲೇ ಸೋಷಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗುತ್ತಿದ್ದಾರೆ. ಇತ್ತೀಚೆಗೆ ತಮ್ಮ ಮಾಜಿ ಬಾಯ್ ಫ್ರೆಂಡ್(Ex Boy friends) ಗಳ ಬಗ್ಗೆ, ಅವರು ತಮ್ಮನ್ನು ಯಾವರೀತಿ ಯೂಸ್ ಮಾಡ್ಕೊಂಡ್ರು ಅನ್ನೋದ್ರು ಬಗ್ಗೆ ಹಾಗೂ ಮೊದಲ ಡೇಟ್ ಕುರಿತು ಮತ್ತು ಯಾವ ತರದ ಸಂಭೋಗ ಇಷ್ಟ ಅನ್ನುವ ಕುರಿತೆಲ್ಲ ಮನ ಬಿಚ್ಚಿ ಮಾತಾಡಿದ್ದರು. ಇದೀಗ ನಿರ್ದೇಶಕ(Director) ರೊಬ್ಬರು ತನ್ನ ಅಂಡರ್ವೇರ್(Innarwear) ಅನ್ನು ನೋಡಲೇಬೇಕೆಂದು ಹಟ ಹಿಡಿದ ಕಹಿ ಘಟನೆಯನ್ನು ತೆರೆದಿಟ್ಟಿದ್ದಾರೆ.

ಹೌದು, ದಿ ಜೋ ರಿಪೋರ್ಟ್‌ಗೆ(The joo report) ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಮುಕ್ತವಾಗಿ ಮಾತನಾಡಿದ್ದಾರೆ. “ಈ ಘಟನೆ ಬಹುಶಃ 2002 ಅಥವಾ 2003 ರಲ್ಲಿ ಅನ್ಸುತ್ತೆ, ಆಗ ನಾನು ಅಂಡರ್ ಕವರ್ ನಲ್ಲಿದ್ದೆ, ಆಗ ನಾನು ಹುಡುಗನನ್ನು ಮೊಹಿಸುತ್ತಿದ್ದೆ, ನಿಸ್ಸಂಶಯವಾಗಿ, ಹುಡುಗಿಯರು ಅಂಡರ್ ಕವರ್(Under cover) ನಲ್ಲಿದ್ದಾಗ ಅದನ್ನೇ ಮಾಡುತ್ತಾರೆ. ಆದರೆ ಈ ವೇಳೆ ನಾನು ನನ್ನ ಮೈಮೇಲಿದ್ದ ಬಟ್ಟೆಯನ್ನು ತೆಗೆಯಬೇಕಾಗಿತ್ತು. ಆಗ ನಾನು ಲೇಯರ್ ಅಪ್ ಮಾಡಲು ಬಯಸಿದ್ದೆ, ಆದರೆ ನಿರ್ದೇಶಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ‘ನಾನು ಆಕೆಯ ಅಂಡರ್ವೇರ್ ನೋಡಬೇಕು ಇಲ್ಲದಿದ್ದರೆ ಈ ಸಿನಿಮಾ ನೋಡಲು ಬರುವವರಾದರೂ ಯಾರು? ಎಂದು ಪ್ರಶ್ನಿಸಿದ್ದರು” ಎಂದು ಪ್ರಿಯಾಂಕ ಚೋಪ್ರಾ ತಾವು ಎದುರಿಸಿದ ಕರಾಳ ಅನುಭವನ್ನು ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದ ಅವರು ” ಆ ಪುಣ್ಯಾತ್ಮ ಅದನ್ನು ನನ್ನೊಂದಿಗೆ ಹೇಳಲಿಲ್ಲ. ನನ್ನ ಮುಂದೆ ಇರುವ ಸ್ಟೈಲಿಸ್ಟ್‌ಗೆ ಹೇಳಿದರು. ಆದರೆ ಇದು ನಿಜವಾಗಿಯೂ ಒಂದು ಅಮಾನವೀಯ ಕ್ಷಣವಾಗಿತ್ತು. ಇದು ಒಂದು ಭಾವನೆಯಾಗಿತ್ತು, ನನ್ನನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಹೊರತಾಗಿ ನಾನು ಬೇರೇನೂ ಅಲ್ಲ. ಅವರಿಗೆ ನನ್ನ ಕಲೆ ಮುಖ್ಯವಲ್ಲ, ನಾನು ಏನು ಕೊಡುಗೆ ನೀಡುತ್ತೇನೆ ಎಂಬುದು ಮುಖ್ಯವಲ್ಲ ಎಂಬುದು ಸಾಭೀತಾಯಿತು. ಹೀಗಾಗಿ ಎರಡು ದಿನ ಕೆಲಸ ಮಾಡಿದ ನಂತರ ಸಿನಿಮಾದಿಂದ ನಿರ್ಗಮಿಸಿದೆ” ಎಂದು ಹೇಳಿದ್ದಾರೆ.

ಅಂದಹಾಗೆ 2002 ರ ತಮಿಳು ಚಿತ್ರ ‘ತಮಿಝನ್’ ಮೂಲಕ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ಚೋಪ್ರಾ ಅವರು 2003 ರಲ್ಲಿ ‘ಅಂದಾಜ್’ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಅದರ ನಂತರ ಅವರು ‘ಐತ್ರಾಜ್’, ‘ಮುಜ್ಸೆ ಶಾದಿ ಕರೋಗಿ’, ‘ಫ್ಯಾಷನ್’, ‘ಡಾನ್’, ‘ಬರ್ಫಿ!’, ‘ಬಾಜಿರಾವ್ ಮಸ್ತಾನಿ’, ‘ಮೇರಿ ಕೋಮ್’, ‘ದಿ ವೈಟ್ ಟೈಗರ್’ ಮತ್ತು ಅನೇಕ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಹಾಲಿವುಡ್ ಸಿನೆಮಾ ಹಾಗೂ ಸೀರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Textbook Controversy: ಸರ್ಕಾರ ರಚನೆ ಬೆನ್ನಲ್ಲೇ ಮತ್ತೆ ಶುರುವಾಯ್ತು ಪಠ್ಯ ಪರಿಷ್ಕರಣೆ ವಾರ್; ಶಾಲಾ ಆರಂಭಕ್ಕೂ ಮುನ್ನವೇ ಹೆಡ್ಗೆವಾರ್ ಪಾಠಕ್ಕೆ ಕತ್ತರಿ?