Home Breaking Entertainment News Kannada ದೇವಸ್ಥಾನದೊಳಗೆ ಚಪ್ಪಲಿ ಧರಿಸಿ ಓಡಾಡಿದ ನಟಿ | ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ, ಬಂಧನ ಭೀತಿ...

ದೇವಸ್ಥಾನದೊಳಗೆ ಚಪ್ಪಲಿ ಧರಿಸಿ ಓಡಾಡಿದ ನಟಿ | ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ, ಬಂಧನ ಭೀತಿ ಎದುರಿಸುತ್ತಿದ್ದಾರೆ ತ್ರಿಷಾ ಕೃಷ್ಣನ್ !!

Hindu neighbor gifts plot of land

Hindu neighbour gifts land to Muslim journalist

ಕನ್ನಡ ಚಿತ್ರರಂಗದಲ್ಲೂ ಮಿಂಚಿರುವ ಕಾಲಿವುಡ್‌ನ ಖ್ಯಾತ ನಟಿ ತ್ರಿಷಾ ಕೃಷ್ಣನ್ ಇದೀಗ ವಿವಾದವೊಂದಕ್ಕೆ ಸಿಲುಕಿದ್ದು, ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಸಿನಿಮಾ ಶೂಟಿಂಗ್ ವೇಳೆ ನಟಿ ತ್ರಿಷಾ ಕೃಷ್ಣನ್ ಮಾಡಿದ ಎಡವಟ್ಟಿನಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ ತ್ರಿಷಾ ಕೃಷ್ಣನ್ ಅವರನ್ನು ಬಂಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿವೆ. ಪರಿಣಾಮ, ನಟಿ ತ್ರಿಷಾ ಕೃಷ್ಣನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆದದ್ದಾದರೂ ಏನು?

ನಟಿ ತ್ರಿಷಾ ‘ಪೊನ್ನಿಯಾನ್​ ಸೆಲ್ವನ್‘ ಸಿನಿಮಾದಲ್ಲಿ ನಟಿಸುತ್ತಿದ್ದು, ಸದ್ಯ ಶೂಟಿಂಗ್​ನಲ್ಲಿ ತೊಡಗಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ತಮಿಳುನಾಡಿನ ಐತಿಹಾಸಿಕ ದೇವಸ್ಥಾನವೊಂದರ ಒಳಗಡೆ ಶೂಟಿಂಗ್​ ಮಾಡಲಾಗುತ್ತಿದೆ. ಹಾಗಾಗಿ ನಟಿ ತ್ರಿಷಾ ಕೃಷ್ಣನ್​ ಮತ್ತು ಐಶ್ವರ್ಯ ರೈ ಬಚ್ಚನ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ.

ಆದರೆ ಶೂಟಿಂಗ್​ ನಡುವೆ ತ್ರಿಷಾ ಕೃಷ್ಣನ್​ ಧಾರ್ಮಿಕ ಸ್ಥಳದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. ಚಿತ್ರೀಕರಣ ವೇಳೆ ಚಪ್ಪಲಿ ಹಾಕಿಕೊಂಡು ತ್ರಿಷಾ ದೇವಸ್ಥಾನದ ಒಳಗೆ ಓಡಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಶಿವಲಿಂಗ ಮತ್ತು ನಂದಿ ದೇವರಿರುವ ಈ ಧಾರ್ಮಿಕ ಸ್ಥಳದಲ್ಲಿ ತ್ರಿಷಾ ಚಪ್ಪಲಿ ಹಾಕಿರುವ ದೃಶ್ಯ ವೈರಲ್​ ಆಗಿದೆ. ಅನೇಕರು ಇದನ್ನು ಕಂಡು ಕೆಂಡಾಮಂಡಲರಾಗಿದ್ದಾರೆ. ಅದರಲ್ಲೂ ತಮಿಳುನಾಡಿನ ಹಿಂದೂ ಸಂಘಟನೆಗಳು ತ್ರಿಷಾ ಮತ್ತು ಮಣಿರತ್ನಂ ಅವರನ್ನು ಬಂಧಿಸುವಂತೆ ಒತ್ತಾಯ ಮಾಡುತ್ತಿವೆ.

ದೇವಸ್ಥಾನದೊಳಗೆ ಚಪ್ಪಲಿ ಧರಿಸಿರುವ ನಟಿ

ದೇವಸ್ಥಾನದಲ್ಲಿ ಚಪ್ಪಲಿ ಹಾಕಿಕೊಂಡಿರುವ ದೃಶ್ಯಗಳನ್ನು ಕಂಡ ಅನೇಕರು ಸಾಮಾಜಿಕ ಜಾಲರಾಣದಲ್ಲಿ ತ್ರಿಷಾ ಬಂಧನವಾಗಬೇಕು ಎಂಬ ಒತ್ತಾಯ ಮಾಡುತ್ತಿದ್ದಾರೆ. ಹಾಗಾಗಿ ನಟಿಗೆ ಬಂಧನದ ಭೀತಿ ಕಾಡುತ್ತಿದೆ.

ಚಿತ್ರೀಕರಣದ ವೇಳೆ ಕುದುರೆ ಸಾವು

ಕೆಲವೇ ದಿನಳ ಹಿಂದೆಯಷ್ಟೇ ‘ಪೊನ್ನಿಯಾನ್ ಸೆಲ್ವನ್’ ಚಿತ್ರದ ಚಿತ್ರೀಕರಣದ ವೇಳೆ ಕುದುರೆಯೊಂದು ಸಾವಿಗೀಡಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ವಿರುದ್ಧ ಪೆಟಾ ದೂರು ನೀಡಿತ್ತು. ಪರಿಣಾಮ, ಮದ್ರಾಸ್ ಟಾಕೀಸ್ ಪ್ರೊಡಕ್ಷನ್ ಹೌಸ್ ಮತ್ತು ಕುದುರೆಯ ಮಾಲೀಕರ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪೊನ್ನಿಯಾನ್​ ಸೆಲ್ವಾನ್​ ಸಿನಿಮಾದ ಮೇಲೆ ಬಹುನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ಚಿಯಾನ್​ ವಿಕ್ರಂ, ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್, ಜಯಂ ರವಿ, ಕಾರ್ತಿ, ಪ್ರಕಾಶ್​ ರಾಜ್​, ಜಯರಾಮ್​ , ಪ್ರಭು, ಐಶ್ವರ್ಯ ಲಕ್ಷ್ಮೀ, ಶೋಬಿತಾ ಧುಲಿಪಲ, ಲಾಲ್​ ಸೆರಿದಂತೆ ಬಹುತಾರಾಗಣವನ್ನು ಹೊಂದಿದೆ. ಮಾಹಿತಿಗಳು ಪ್ರಕಾರ 2022ರಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.