Home Breaking Entertainment News Kannada Shivraj kumar: ‘ನಾನು ನಂದಿನಿ ಬೆಂಗ್ಳೂರು ಬಂದೀನಿ’ ಎಂದ ವಿಕಾಸ್’ನನ್ನು ಕರೆಸಿ ಖಡಕ್ ವಾರ್ನಿಂಗ್ ಕೊಟ್ಟ...

Shivraj kumar: ‘ನಾನು ನಂದಿನಿ ಬೆಂಗ್ಳೂರು ಬಂದೀನಿ’ ಎಂದ ವಿಕಾಸ್’ನನ್ನು ಕರೆಸಿ ಖಡಕ್ ವಾರ್ನಿಂಗ್ ಕೊಟ್ಟ ಶಿವಣ್ಣ !! ವೈರಲ್ ಆಯ್ತು ವಿಡಿಯೋ

Shivraj kumar

Hindu neighbor gifts plot of land

Hindu neighbour gifts land to Muslim journalist

Shivraj kumar: ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಇಡೀ ಕರ್ನಾಟಕದಲ್ಲಿ ಬಾರಿ ಸದ್ದು ಮಾಡುತ್ತಿರುವ ರೀಲ್ ಎಂದರೆ ‘ನಾನು ನಂದಿನಿ ಬೆಂಗಳೂರು ಬಂದೀನಿ'(Nanu nandini,bengluru bandini) ಸಾಂಗ್. ಇಂದು ಚಿಕ್ಕ ಮಕ್ಕಳ ಬಾಯಿಯಿಂದ ಹಿಡಿದು ದೊಡ್ಡ ದೊಡ್ಡ ವಯಸ್ಸಾದ ಮುದುಕ ಮುದುಕಿಯರ ಬಾಯಲ್ಲೂ ಕೂಡ ಇದೇ ಹಾಡನ್ನು ನಾವು ಕೇಳಬಹುದು. ಈ ಮೂಲಕ ಹಾಡಿನ ಕಂಟೆಂಟ್‌ ಕ್ರೀಯೇಟರ್‌ ವಿಕ್ಕಿ ಹಾಗೂ ಅಮಿತ್ ಸಿಕ್ಕಾಪಟ್ಟೆ ಪ್ರಶಂಸೆಗೆ ಒಳಗಾಗಿದ್ದು, ಕನ್ನಡಿಗರ ಮನೆಮಾತಾಗಿದ್ದಾರೆ. ಆದರೀಗ ಈ ಬೆನ್ನಲ್ಲೇ ಈ ಹಾಡನ್ನು ಮಾಡಿ ಫೇಮಸ್ ಆಗಿರುವ ವಿಕಾಸ್ ಹಾಗೂ ಅವರ ಗೆಳೆಯನನ್ನು ಕರ್ನಾಟಕದ ಹ್ಯಾಟ್ರಿಕ್ ಸ್ಟಾರ್ ಶಿವರಾಜ್ ಕುಮಾರ್(Shivraj kumar) ಅವರು ಮನೆಗೆ ಆಹ್ವಾನಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಹೌದು, ನಾನು ನಂದಿನಿ ಬೆಂಗಳೂರಿಗ್ ಬಂದಿನಿ’ ಹಾಡಿನಿಂದ ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ವಿಕ್ಕಿಪಿಡಿಯಾ ವಿಕಾಸ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಗೊತ್ತೇತಿದೆ. ಈ ಹಾಡು ನಾನಾ ರೂಪದಲ್ಲಿ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ವಿಕಾಸ್ ಅಂಡ್ ಟೀಮ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ‘ನಾನು ನಂದಿನಿ’ ಕ್ರೇಜ್ ಶಿವಣ್ಣವರೆಗೂ ಹೋಗಿ ತಲುಪಿದೆ. ಇದೀಗ ಶಿವಣ್ಣ, ವಿಕಾಸ್ ಹಾಗೂ ಗೌತಮ್ ಅವರನ್ನು ಕರೆದು ಸಖತ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಅಂದಹಾಗೆ ಇದರಲ್ಲಿ ಶಿವಣ್ಣ ಟೀ ಕಪ್ ಹಿಡಿದು ಕುಳಿತಿರುತ್ತಾರೆ. ಅವರ ಎದುರು ವಿಕ್ಕಿ ಹಾಗೂ ಅಮಿತ್ ನಿಂತಿರುತ್ತಾರೆ. ಈ ವೇಳೆ ಶ್ರೀನಿ ಬಂದು ‘ಬೆಳಗ್ಗೆ ನನಗೆ ಆವಾಜ್ ಹಾಕಿದ್ದು ಇವರೇ’ ಎಂದು ಕಂಪ್ಲೇಂಟ್ ಮಾಡುತ್ತಾರೆ. ಮುಂಜಾನೆ ಯಾವ ರೀತಿಯಲ್ಲಿ ಅವರು ಬೆದರಿಕೆ ಹಾಕಿದ್ದರು ಎಂಬುದನ್ನು ಶಿವಣ್ಣನಿಗೆ ಶ್ರೀನಿ ವಿವರಿಸುತ್ತಾರೆ. ಶಿವಣ್ಣನ ನೋಡಿದ್ದೇ ವಿಕ್ಕಿ ಹಾಗೂ ಅಮಿತ್ ಅವರ ಮೀಟರ್ ಆಫ್ ಆಗಿ ಬಿಡುತ್ತದೆ ಮತ್ತು ಸಖತ್ ಭಯ ಬೀಳುತ್ತಾರೆ. ಅವರು ಈ ರೀತಿ ಮಾಡಿಲ್ಲ ಎಂದು ಬೆಳಗ್ಗೆ ಏನಾಯ್ತು ಅನ್ನೋದನ್ನು ಶಿವಣ್ಣನಿಗೆ ಹೇಳುತ್ತಾರೆ. ಆದರೆ ಶಿವಣ್ಣನನ್ನು ನೋಡುತ್ತಿದ್ದಂತೆ ವಿಕ್ಕಿ ಹಾಗೂ ಅಮಿತ್ ಸುಸ್ತಾಗಿರುತ್ತಾರೆ. ‘ಜೈಲರ್’ ಸಿನಿಮಾದಲ್ಲಿ ಶಿವಣ್ಣ ರಮ್ಯಾಕೃಷ್ಣಗೆ ಟಿಶ್ಯೂ ಕೊಟ್ಟಂತೆ ಇಲ್ಲಿ ವಿಕ್ಕಿ, ಅಮಿತ್‌ಗೆ ಕೊಡುತ್ತಾರೆ. ಹೆದರಿಕೊಂಡೇ ನಾವು ಹಾಗೆಲ್ಲಾ ಮಾಡಿಲ್ಲ ಎಂದು ಇಬ್ಬರು ವಿವರಣೆ ನೀಡುತ್ತಾರೆ. ಆದರೂ ಶಿವಣ್ಣ ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ಹಾಗಿದ್ರೆ ಈ ವಿಡಿಯೋದ ಅಸಲಿ ಏನೆಂದು ತಿಳಿಯೋಣ ಬನ್ನಿ.

ಈ ಹಿಂದೆ ಶಿವರಾಜ್‌ಕುಮಾರ್‌ ಅಭಿನಯದ ‘ಘೋಸ್ಟ್‌’ ಚಿತ್ರತಂಡ ‘ಬಿಗ್‌ ಡ್ಯಾಡಿ’ ಝಲಕ್‌ ರಿಲೀಸ್‌ ಮಾಡಿದ್ದರು. ಅದರಲ್ಲಿ ಸೆಂಚುರಿಸ್ಟಾರ್‌ ಪಾನಿಪೂರಿಯಲ್ಲಿ ಆಲ್ಕೋಹಾಲ್‌ ಉಪಯೋಗಿಸಿ ತಿನ್ನುತ್ತಿದ್ದರು. ಈ ಝಲಕನ್ನು ಪ್ರೇರಣೆಯಾಗಿ ಇಟ್ಟುಕೊಂಡು ವಿಕ್ಕಿಪೀಡಿಯಾ ತಂಡ ರೀಲ್ಸ್‌ ಮಾಡಿದ್ದರು. ಆ ವಿಡಿಯೋದಲ್ಲಿ ವಿಕಾಸ್‌ ಹಾಗೂ ಅಮಿತ್‌ ಪಾನಿ ಪೂರಿ ತಿನ್ನಲು ಹೋಗಿದ್ದರು. ಆಗ ಪಾನಿಪೂರಿ ಮಾರುವವನು ಪೂರಿಯಲ್ಲಿ ಪಾನಿಯ ಬದಲು ವಿಸ್ಕಿ ಹಾಕಿಕೊಟ್ಟಿರುತ್ತಾನೆ. ಆಗ ವಿಕಾಸ್‌ ಹಾಗೂ ಅಮಿತ್‌ ತಿಳಿಯದೆ ಗಾಡಿಯಲ್ಲಿ ಹೋಗುತ್ತಿರುವ ಪೋಲೀಸರ ಕೈಯಲ್ಲಿ ಸಿಕ್ಕಿಕೊಳ್ಳುತ್ತಾರೆ. ಇದರ ಮುಂದುವರೆದ ಭಾಗವಾಗಿ ವಿಕಾಸ್‌ ಆಂಡ್‌ ಟೀಂ ಜೊತೆ ಶಿವಣ್ಣ ಅವರು ವಿಡಿಯೋ ಮಾಡಿದ್ದಾರೆ. ಅಂದರೆ ಘೋಸ್ಟ್’ ಸಿನಿಮಾ ಪ್ರಚಾರಕ್ಕಾಗಿ ವಿಕಾಸ್ ಜೊತೆ ಶಿವಣ್ಣ ಸ್ಪೆಷಲ್ ರೀಲ್ಸ್ ಮಾಡಿ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋವನ್ನು ವಿಕ್ಕಿಪೀಡಿಯಾ ಹಾಗೂ ಶಿವರಾಜ್‌ಕುಮಾರ್‌ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ವಿಕಾಸ್ ಜೊತೆ ‘ಘೋಸ್ಟ್’ ಟೀಂ ಸಣ್ಣ ಕಾಮಿಡಿ ಸ್ಕಿಟ್ ಮಾಡಿದ್ದರು. ಇದು ಸಹ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಈ ವಿಡಿಯೋಗೆ ಮೆಚ್ಚುಗೆ ಜೊತೆ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೈಕ್ಸ್ ಪಡೆದಿದೆ.

ಇನ್ನು ಘೋಸ್ಟ್’ ಚಿತ್ರದಲ್ಲಿ ಶಿವಣ್ಣ 3 ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಬಲ್ ರೋಲ್ ಮಾಡಿದ್ದಾರಾ? ಎನ್ನುವ ಅನುಮಾನವೂ ಮೂಡಿದೆ. ಇನ್ನು 30 ವರ್ಷಗಳ ಹಿಂದಿನ ಲುಕ್‌ನಲ್ಲಿ ಅಭಿಮಾನಿಗಳಿಗೆ ಥ್ರಿಲ್ ಕೊಡೋಕೆ ಶಿವಣ್ಣ ಬರ್ತಿದ್ದಾರೆ. ಡೀ ಏಜಿಂಗ್ ತಂತ್ರಜ್ಞಾನ ಬಳಸಿ ಈ ರೀತಿ ಅವರನ್ನು ಯಂಗ್ ಲುಕ್‌ನಲ್ಲಿ ತೋರಿಸಲಾಗಿದೆ.

 

ಇದನ್ನು ಓದಿ: ಮೆಂತ್ಯ ಬೀಜಗಳು ತಲೆಕೂದಲಿಗೆ ಹೇಗೆಲ್ಲಾ ಪ್ರಯೋಜನಕಾರಿ ?! ಇಲ್ಲಿದೆ ನೋಡಿ ಡೀಟೇಲ್ಸ್