Home Breaking Entertainment News Kannada Aryan Khan: ತಂಗಿಯನ್ನು ತಬ್ಬಿ ಹಿಡಿಯದಿದ್ದಕ್ಕೆ ಟ್ರೋಲ್ ಆದ ಶಾರುಖ್ ಮಗ! ಅಷ್ಟಕ್ಕೂ ಆದದ್ದೇನು ಗೊತ್ತಾ?

Aryan Khan: ತಂಗಿಯನ್ನು ತಬ್ಬಿ ಹಿಡಿಯದಿದ್ದಕ್ಕೆ ಟ್ರೋಲ್ ಆದ ಶಾರುಖ್ ಮಗ! ಅಷ್ಟಕ್ಕೂ ಆದದ್ದೇನು ಗೊತ್ತಾ?

Aryan Khan

Hindu neighbor gifts plot of land

Hindu neighbour gifts land to Muslim journalist

Aryan Khan and suhana  :ಯಾವುದಾದರೂ ಸಿನಿಮಾ ಇವೆಂಟ್ಗಳು ಇದ್ದಾಗ, ದೊಡ್ಡ ದೊಡ್ಡ ಕಾರ್ಯಕ್ರಮಗಳು ಆಯೋಜನೆ ಆದಾಗ ಇವುಗಳಲ್ಲಿ ಪಾಲ್ಗೊಳ್ಳುವ ಸಿನಿಮಾ ಸೆಲಬ್ರೇಟಿಗಳು ವಿಭಿನ್ನವಾದ, ವಿಶಿಷ್ಟವಾದ ಉಡುಪುಗಳನ್ನು ಧರಿಸಿ, ಸುಂದರವಾದ ಮೈಮಾಟ ಪ್ರದರ್ಶಿಸುತ್ತ ಕ್ಯಾಮೆರಾಗೆ ಪೋಸ್ ಕೊಡುವುದು ಸಾಮಾನ್ಯ. ಅಂತೆಯೇ ಇತ್ತೀಚೆಗೆ ಇತ್ತೀಚೆಗೆ ನಡೆದ ನೀತಾ ಮುಕೇಶ್ ಅಂಬಾನಿ(Neeta mukesh ambani) ಕಲ್ಚರಲ್ ಸೆಂಟರ್(Cultural center opening) ಓಪನಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾರುಖ್ ಖಾನ್ ಮಗ ಮತ್ತು ಮಗಳು ಈ ಫೋಟೋಗೆ ಫೋಸ್ ಕೊಡೊ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ಹೌದು, ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಓಪನಿಂಗ್ ಹಾಗೂ ಎರಡನೇ ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಸ್ಟಾರ್ ಕಲಾವಿದರು ಭಾಗಿಯಾಗಿದ್ದರು. ಇದರಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್(Sharuk Khan) ಅವರ ಫ್ಯಾಮಿಲಿಯೂ ಇತ್ತು. ಶಾರುಖ್, ಗೌರಿ ಖಾನ್(Gowri Khan), ಸುಹಾನಾ(Suhana) , ಆರ್ಯನ್(Aryan) ಅವರೂ ಈ ಇವೆಂಟ್​ನಲ್ಲಿ ಭಾಗಿಯಾಗಿದ್ದರು. ಎರಡನೇ ದಿನ ಎನ್​ಎಂಎಸಿಸಿ ಗಾಲಾದಲ್ಲಿ ಶಾರುಖ್ ಅವರ ಮಕ್ಕಳಾದ ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ಸ್ಟೈಲಿಷ್ ಆಗಿ ರೆಡಿಯಾಗಿ ಬಂದಿದ್ದರು. ಅಲ್ಲದೆ ಅಣ್ಣ-ತಂಗಿ ಇಬ್ಬರೂ ಜೊತೆಯಾಗಿ ಕ್ಯಾಮೆರಾಗೂ ಪೋಸ್ ಕೊಟ್ಟಿದ್ದಾರೆ.

ಆದರೀಗ ಇದೀಗ ಅಣ್ಣ-ತಂಗಿಯ ವಿಡಿಯೋ ಹಾಗೂ ಫೋಟೋಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಯಾಕೆಂದರೆ ಆರ್ಯನ್ ತಂಗಿ ಸುಹಾನಾ ಜೊತೆ ಪೋಸ್ ಕೊಡುವಾಗ ಅವರನ್ನು ಬಳಸಿ ಹಿಡಿಯದೆ ಡಿಸ್ಟೆನ್ಸ್ ಮೆಂಟೇನ್ ಮಾಡಿದ್ದಾರೆ. ತಂಗಿಯ ಸುತ್ತ ತನ್ನ ಕೈಯನ್ನು ಇಟ್ಟರೂ, ಆರ್ಯನ್ ಅವರು ತಮ್ಮ ತಂಗಿಯನ್ನು ಟಚ್ ಮಾಡಿರುವುದನ್ನು ವೈರಲ್ ಆದ ಫೋಟೋಗಳಲ್ಲಿ ನಾವು ಸ್ಪಷ್ಟವಾಗಿ ಕಾಣಬಹುದು.

ಸೋಷಿಯಲ್ ಮೀಡಿಯಾಗಳಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರೆಲ್ಲರೂ ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದು ಜಂಟಲ್​ಮ್ಯಾನ್ ನಡವಳಿಕೆ ಎಂದು ಹೊಗಳಿದರೆ, ಇನ್ನು ಕೆಲವರು ನಿನ್ನ ತಂಗಿ ಕಣೋ ಅವಳು, ಅವಳೊಂದಿಗೆ ಅಷ್ಟು ಸೌಜನ್ಯ ಏಕೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಅಯ್ಯೋ ಒಂದು ಫೋಟೋಗೆ ಪೋಸ್ ಕೊಡುವಾಗ ತಂಗಿಯನ್ನು ಹಿಡಿಯಲಾಗದಿದ್ದರೆ ಇದೆಂಥಾ ಶೋ ಆಫ್? ನೀವು ಆರ್ಯನ್ ಖಾನ್ ಅಲ್ಲ, ಶೋ ಆಫ್ ಖಾನ್ ಎಂದು ನೆಟ್ಟಿಗರು ಸ್ಟಾರ್ ಕಿಡ್ ಆರ್ಯನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.