Home Breaking Entertainment News Kannada Suchendra Prasad: ನರೇಶ್ ಮದ್ವೆ ಆಗಲು ಪವಿತ್ರ ಅದೊಂದು ಪ್ಲಾನ್​ ಮಾಡಿದ್ಲು: ಪವಿತ್ರಾ ಲೋಕೇಶ್​ ವಿರುದ್ಧ...

Suchendra Prasad: ನರೇಶ್ ಮದ್ವೆ ಆಗಲು ಪವಿತ್ರ ಅದೊಂದು ಪ್ಲಾನ್​ ಮಾಡಿದ್ಲು: ಪವಿತ್ರಾ ಲೋಕೇಶ್​ ವಿರುದ್ಧ ಹೊಸ ಬಾಂಬ್ ಸಿಡಿಸಿದ ಮಾಜಿ ಪತಿ ಸುಚೇಂದ್ರ ಪ್ರಸಾದ್!

Sucendra prasad

Hindu neighbor gifts plot of land

Hindu neighbour gifts land to Muslim journalist

Suchendra Prasad :ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್​ವುಡ್​(Sandalwood) ಹಾಗೂ ಟಾಲಿವುಡ್​(Tollywood) ನಲ್ಲಿ ತಮ್ಮ ವೈಯಕ್ತಿಕ ವಿಚಾರಗಳಿಂದ ಸಾಕಷ್ಟು ಸುದ್ಧಿಯಾಗ್ತಿರೋರಂದ್ರೆ ಟಾಲಿವುಡ್​ನ ಹೆಸರಾಂತ ನಟ ನರೇಶ್​(Naresh) ಹಾಗೂ ಬಹುಭಾಷಾ ನಟಿ ಪವಿತ್ರಾ ಲೋಕೇಶ್​(Pavitra lokesh) ಅವರು. ತಮ್ಮ ಕುರಿತಂತೆ ಹಬ್ಬಿದ ವದಂತಿಗಳಿಗೆ ಮದುವೆಯಾಗೋ ಮೂಲಕ ಅವುಗಳಿಗೆಲ್ಲ ಈ ನವ ದಂಪತಿಗಳು ತೆರೆ ಎಳೆದಿದ್ದರು. ಜೊತೆಗೆ ಹನಿಮೂನ್ ಕೂಡ ಮುಗಿಸಿದ್ದರು. ಈ ಕುರಿತ ವಿಡಿಯೋಗಳು ಸಾಕಷ್ಟು ವೈರಲ್ ಆಗಿ, ಅನೇಕ ಚರ್ಚೆಗಳನ್ನು ಸಹ ಹುಟ್ಟು ಹಾಕಿತ್ತು.

ಅಂದಹಾಗೆ ನರೇಶ್​ಗೆ ಇದು ನಾಲ್ಕನೇ ಮದುವೆಯಾದರೆ, ಪವಿತ್ರಾ ಲೋಕೇಶ್​ಗೆ ಇದು ಮೂರನೇ ಮದುವೆ. ಯಾವಾಗ ಮದುವೆ ವಿಡಿಯೋ ಹೊರಬಂತೋ ಎಲ್ಲಡೆ ಇವರಿಬ್ಬರ ಮದುವೆ ಬಗ್ಗೆ ಚರ್ಚೆಯಾಗುತ್ತಿದೆ. ಆದರೀಗ ಮದುವೆ ವಿಚಾರದ ಬಗ್ಗೆ ಪವಿತ್ರಾ ಲೋಕೇಶ್​ ಅವರ ಮಾಜಿ ಪತಿ ಸುಚೇಂದ್ರ ಪ್ರಸಾದ್​(Suchendra Prasad) ಅವರು ಪ್ರತಿಕ್ರಿಯೆ ನೀಡಿದ್ದು, ಮಾಧ್ಯಮದವರು ಮದುವೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಪವಿತ್ರಾ ಲೋಕೇಶ್​ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಇದರ ಹಿಂದೆ ದೊಡ್ಡ ಪ್ಲಾನ್ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಪವಿತ್ರಳ ಬಗ್ಗೆ ನನಗೆ ಮೊದಲಿಂದಲೂ ಗೊತ್ತು. ನಾನು ಮತ್ತು ಅವಳು ಹಲವು ವರ್ಷ ಜೊತೆಗಿದ್ದವರು. ಐಷಾರಾಮಿ ಜೀವನಕ್ಕಾಗಿ ಆಕೆ ಏನು ಬೇಕಾದರೂ ಮಾಡುತ್ತಾಳೆ. ಸದ್ಯ ಆಸ್ತಿಗೋಸ್ಕರ ನರೇಶ್​ ಜೊತೆ ಪ್ರೀತಿಯ ನಾಟಕವಾಡುತ್ತಿದ್ದಾಳೆ ಮತ್ತು ಆಕೆಗೆ ಹಣದಾಹವಿದೆ. ಹೀಗಾಗಿ ಆಕೆ ತನ್ನ ಪ್ಲಾನ್​ ಪ್ರಕಾರವೇ, ನರೇಶ್​ ಅವರನ್ನು ಮದುವೆ ಆಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಹಿಂದೆಯೂ ಹಣಕ್ಕಾಗಿ ಆಕೆ ಡಿವೋರ್ಸ್​ ಮಾಡಿಕೊಂಡಿದ್ದಾಳೆ. 1500 ಕೋಟಿ ರೂ. ಆಸ್ತಿಯನ್ನು ಕಬಳಿಸಲು ನರೇಶ್​ ಜೊತೆ ಸಲುಗೆ ಬೆಳೆಸಿಕೊಂಡಿದ್ದಾಳೆ. ನರೇಶ್​ ಆಕೆಯ ಬಗ್ಗೆ ಪೂರ್ತಿಯಾಗಿ ಅರ್ಥ ಮಾಡಿಕೊಂಡಿಲ್ಲ. ಶೀಘ್ರದಲ್ಲೇ ನರೇಶ್​ಗೆ ಪವಿತ್ರಾ ಬಗ್ಗೆ ಅರಿವಾಗಲಿದೆ ಎಂದು ಸುಚೇಂದ್ರ ಪ್ರಸಾದ್​ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪವಿತ್ರ ಲೋಕೇಶ್ ಅವರು ‘ಸುಚೇಂದ್ರ ಪ್ರಸಾದ್(Suchendra Prasad)ಏನಾದರೂ ಹೀಗೆ ಹೇಳಿದ್ದರೆ ನಾನು ಕೂಡ ಅದಕ್ಕೆ ಪ್ರತಿಕ್ರಿಯಿಸುತ್ತೇನೆ. ಸುಚೇಂದ್ರ ಜೊತೆ ನಾನು ಸುಮಾರು 11 ವರುಷಗಳ ಕಾಲ ಒಟ್ಟಿಗಿದ್ದೆ. ಆದರೆ ಅವರು ನನ್ನನ್ನು ಮದುವೆಯಾಗಿರಲಿಲ್ಲ. ಅದು ಬಿಡಿ ಅಷ್ಟು ವರ್ಷಗಳಲ್ಲಿ ಅವರ ಬಳಿ ಒಂದು ಕಾರಲ್ಲ, ನಯಾ ಪೈಸೆ ದುಡ್ಡು ಕೂಡ ಇರಲಿಲ್ಲ. ಇಂತಹ ಸಮಯದಲ್ಲೇ ನಾನು ಅವರೊಂದಿಗೆ 11 ವರ್ಷ ಜೋತೆಗಿದ್ದೆ. ದುಡ್ಡಿಗೆ ಆಸೆ ಪಡುವವಳಾದರೆ ಯಾವಾಗಲೋ ಅವರನ್ನು ಬಿಟ್ಟು ಬರಬಹುದಿತ್ತು. ಆದರೆ ನಾನು ಅವರ ವ್ಯಕ್ತಿತ್ವಕ್ಕೆ, ಅವರಿಗಿರುವ ಜ್ಞಾನಕ್ಕೆ ಬೆಲೆಕೊಟ್ಟು ಅವರೊಂದಿಗಿದ್ದೆ’ ಎಂದು ಹೇಳಿದ್ದಾರೆ.

ಅಲ್ಲದೆ ಈ ಹಿಂದೆ ಇವರಿಬ್ಬರ ಸಂಬಂಧದ ಬಗ್ಗೆ ಮಾತನಾಡಿದ್ದ ಸುಚೇಂದ್ರ ಅವರು ನಾನು ಈಗಾಗಲೇ ಪವಿತ್ರ ಜೊತೆ ಮಾತನಾಡಿದ್ದೇನೆ. ಆದರೆ ಆ ರೀತಿ ಏನಿಲ್ಲಾ ಎಂದು ವಾದ ಮಾಡಿದ್ದಾರೆ. ಇದರಿಂದ ಯಾರಿಗೋ ಅನ್ಯಾಯವಾಗುತ್ತಿರುವುದನ್ನ ನೋಡಲು ಸಾಧ್ಯವಾಗುತ್ತಿಲ್ಲ, ಕರುಳು ಹಿಂಡುತ್ತಿದೆ. ಅಸಹಾಯಕ ಸ್ಥಿತಿ ತಲುಪಿದೆ. ರಮ್ಯಾ ಅವರ ಕಷ್ಟ ನನಗೆ ಅರ್ಥವಾಗುತ್ತದೆ. ನಾನು ಕೂಡ ಎನೂ ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ನನ್ನ ಮಕ್ಕಳಿಗೂ ಅರ್ಥ ಮಾಡಿಸಿದ್ದೇನೆ. ಆತನದ್ದು ಲಂಪಟ ಈಕೆಯದ್ದು ಲಪಟಾಯಿಸುವ ಬುದ್ದಿ ಎಂದು ಟಾಂಗ್ ಕೊಡುವುದರೊಂದಿಗೆ ಇದು ಮನೆಹಾಳು ಬುದ್ದಿ ಎಂದು ಪವಿತ್ರಾ ಲೋಕೇಶ್ ವಿರುದ್ದ ಕಿಡಿಕಾರಿದ್ದರು.

ಇದನ್ನೂ ಓದಿ: Flying Bike: ರಸ್ತೆಯ ಮೇಲಲ್ಲ, ಆಕಾಶದಲ್ಲಿ ಚಲಿಸುವ ಬೈಕ್ ಇದು; ವೈರಲ್ ಆಯ್ತು ಈ ವಿಡಿಯೋ