Home Breaking Entertainment News Kannada ದುಬಾರಿ ಕಾರ್ ಕೊಡಿಸಿದ ರವೀಂದರ್, ಖುಷಿಯ ಪಾರದಲ್ಲಿ ಮಹಾಲಕ್ಷ್ಮಿಯ ಫೋಟೋಸ್ ವೈರಲ್!

ದುಬಾರಿ ಕಾರ್ ಕೊಡಿಸಿದ ರವೀಂದರ್, ಖುಷಿಯ ಪಾರದಲ್ಲಿ ಮಹಾಲಕ್ಷ್ಮಿಯ ಫೋಟೋಸ್ ವೈರಲ್!

Hindu neighbor gifts plot of land

Hindu neighbour gifts land to Muslim journalist

ತೆಲುಗು ನಟಿ ಮಹಾಲಕ್ಷ್ಮಿ ಮತ್ತು ದಕ್ಷಿಣ ಚಲನಚಿತ್ರ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ರೀಸೆಂಟ್ ಆಗಿ ಸಖತ್ ಟ್ರೆಂಡಿಂಗ್ ಅಲ್ಲಿ ಇದ್ದ ಜೋಡಿ. ಮದುವೆ, ಹನಿಮೂನ್ ಅಂತೆಲ್ಲ ವಿಷ್ಯಗಳಲ್ಲಿ ಸಖತ್ ಸೌಂಡ್ ಕ್ರಿಯೇಟ್ ಮಾಡಿದ್ರು. ತದನಂತರ ಬಿಗ್ ಬಾಸ್ ಗೂ ಕೂಡ ಹೋಗುವುದಾಗಿ ಹರಿದಾಡುತ್ತಿದ್ದು. ಇದೀಗ ದೀಪಾವಳಿಯ ಪ್ರಯುಕ್ತ ರವಿಂದ್ರ ಮಹಾಲಕ್ಷ್ಮಿಗೆ ಕಾರ್ ಕೊಡಿಸಿದ್ದಾರೆ ಅಂತೆ.

ಹೌದು. ದೀಪಾವಳಿಯ ಪ್ರಯುಕ್ತ ಭಾರಿ ಮೊತ್ತದ ಕಾರ್ ರವಿಂದ್ರ ಮಹಾಲಕ್ಷ್ಮಿಗೆ ಕೊಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ  ಫೋಟೋ ಹಂಚಿಕೊಂಡಿದ್ದು ‘ಪ್ರತಿ ದಿನವೂ ನಿಮ್ಮೊಂದಿಗೆ ದೀಪಾವಳಿ. ಆದ್ದರಿಂದ ನಾವು ಯಾವಾಗಲೂ ಹೀಗೆ ಒಟ್ಟಿಗೆ ಇರುತ್ತೇವೆ ಎಂಬ ಭರವಸೆ ಇದೆ. ಲವ್ ಯೂ ಮೈ ಮ್ಯಾನ್’ ಅಂತ ಮಹಾಲಕ್ಷ್ಮೀ ಬರೆದಿದ್ದಾರೆ.

ಇನ್ನು ರವೀಂದರ್ ಕೂಡ ಹೊಸ ಪೋಸ್ಟ್ ಅನ್ನು ಬರೆದಿದ್ದಾರೆ, ‘ನನ್ನನ್ನು ಪ್ರೀತಿಸುವವರನ್ನು ನೋಡಲು ನನಗೆ ಪ್ರತಿದಿನ ದೀಪಾವಳಿಯಾಗಿದೆ. ಸಂತೋಷವಾಗಿರು’  ಅಂತ ಹಾರೈಸಿದ್ದಾರೆ.

ಇನ್ನು ಹೊಸ ಕಾರ್ ಮತ್ತು ಅದಕ್ಕೆ ಪೂಜೆ ಮಾಡುವ ವಿಡಿಯೋ ಮತ್ತು ಫೋಟೋಗಳನ್ನು ಹರಿಬಿಟ್ಟಿದ್ದಾರೆ. ‘ನಮ್ಮ ಜೀವನದುದ್ದಕ್ಕೂ ನಾವು ಪ್ರೀತಿಸುವ ವ್ಯಕ್ತಿಯನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ನಾವು ಪ್ರೀತಿಸುವ ವ್ಯಕ್ತಿ ನಿಮ್ಮನ್ನು ಅದೇ ರೀತಿ ಪ್ರೀತಿಸಿದರೆ, ಅದು ದೊಡ್ಡ ಸವಲತ್ತು. ಕಾರಿನ ಸಹಾಯದಿಂದ ನಾವು ಶುದ್ಧ ಸ್ವರ್ಗದಂತಹ ಕಾರನ್ನು ಪಡೆಯಬಹುದೆಂದು ನಾನು ಬಯಸುತ್ತೇನೆ, ಹೊಸ ಹೆಂಡತಿ, ಹೊಸ ಜೀವನ, ಹೊಸ ಕಾರು,ಈಸಿ ಡ್ರೈವ್ ಮತ್ತು ಹುಚ್ಚು’ ಅಂತ ರವೀಂದರ್ ಬರೆದಿದ್ದಾರೆ.

ಒಟ್ಟಿನಲ್ಲಿ ಈ ನವ ಜೋಡಿ ಯಾವ ಗಾಸಿಪ್ ಗಳಿಗು ಕಿವಿ ಕೊಡದೆ ಬಿಂದಾಸ್ ಆಗಿ ಜೀವನ ಸಾಗಿಸುತ್ತಿದ್ದಾರೆ ಅಂತಾನೆ ಹೇಳಬಹುದು.