Home Breaking Entertainment News Kannada ಮಗಳನ್ನು ಬಾಲಿವುಡ್‌ಗೆ ಕರೆ ತರ್ತಿದ್ದಾರಂತೆ ಕೆಜಿಎಫ್‌-2 ಲೀಡ್‌ ಆಕ್ಟರ್‌.. ಯಾರವರು ?

ಮಗಳನ್ನು ಬಾಲಿವುಡ್‌ಗೆ ಕರೆ ತರ್ತಿದ್ದಾರಂತೆ ಕೆಜಿಎಫ್‌-2 ಲೀಡ್‌ ಆಕ್ಟರ್‌.. ಯಾರವರು ?

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್‌ನಲ್ಲಿ ಬಹಳ ಹಿಂದಿನಿಂದಲೂ ನೆಪೋಟಿಸಂ ಸುದ್ದಿ ಸದ್ದು ಮಾಡುತ್ತಿದೆ. ಕೆಲವರು ಸ್ಟಾರ್‌ ಕಿಡ್‌ಗಳ ಸಿನಿಮಾಗಳನ್ನು ಬಾಯ್ಕಾಟ್‌ ಮಾಡಿದ್ದಾರೆ. ಈಗಾಗಲೇ ಅನೇಕ ಸ್ಟಾರ್‌ ಕಿಡ್‌ಗಳು ಬಾಲಿವುಡ್‌ ಎಂಟ್ರಿ ಕೊಟ್ಟಿದ್ದಾರೆ. ಈಗ ಮತ್ತೊಬ್ಬ ಸ್ಟಾರ್‌ ನಟಿಯ ಪುತ್ರಿ ಕೂಡಾ ಬಾಲಿವುಡ್‌ಗೆ ಬರ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಅವರೇ ಕೆಜಿಎಫ್-2 ಖ್ಯಾತಿಯ ರವೀನಾ..! ತಮ್ಮ ಮಗಳನ್ನು ಬಾಲಿವುಡ್‌ಗೆ ಕರೆ ತರ್ತಿದ್ದಾರಂತೆ. ಬಾಲಿವುಡ್‌ನ ಬೆಡಗಿ ಹಾಟ್ ಸುಂದರಿ ಆದ ರವೀನಾ ಟಂಡನ್ ಅವರ ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾರೆ. ನಿರ್ದೇಶಕರಾದ ಅಭಿಷೇಕ್ ಕಪೂರ್ ಅವರ ಮುಂದಿನ ಚಿತ್ರದ ಮೂಲಕ ರವೀನಾ ಟಂಡನ್ ಅವರ 17 ವರ್ಷದ ಪುತ್ರಿ ರಾಶಾ ಶೀಘ್ರದಲ್ಲಿ ಬಾಲಿವುಡ್‌ಗೆ ಕಾಲಿಡಲಿದ್ದಾರೆ. ಈ ಚಿತ್ರದಲ್ಲಿ ರಾಶಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಬೇಸಿಗೆಯಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ರಾಶಾ ತದಾನಿ, ಯಾವ ಹೀರೋಯಿನ್‌ಗೆ ಕೂಡಾ ಕಡಿಮೆ ಇಲ್ಲ ರ್ರೀ. ರಾಶಾಗೆ ಈಗ 17 ವರ್ಷ ವಯಸ್ಸು, ರಾಶಾಗೆ ಸಂಗೀತ ಎಂದರೆ ಬಹಳ ಇಷ್ಟವಂತೆ. ಡ್ಯಾನ್ಸ್‌, ಥಿಯೇಟರ್‌ ಆರ್ಟಿಸ್ಟ್‌ ಆಗಿ ಕೂಡಾ ಗುರುತಿಸಿಕೊಂಡಿರುವ ರಾಶಾ ತದಾನಿ, ಮಾರ್ಷಲ್‌ ಆರ್ಟ್ಸ್‌ನಲ್ಲಿ ಬ್ಲಾಕ್‌ ಬೆಲ್ಟ್‌ ಕೂಡಾ ಪಡೆದಿದ್ದಾರೆ. ರಾಶಾ, ನೋಡಲು ಬಹಳ ಸುಂದರವಾಗಿದ್ದು ಈ ಚೆಲುವೆ ಬಾಲಿವುಡ್‌ಗೆ ಬಂದರೂ ಆಶ್ಚರ್ಯವಿಲ್ಲ. ಹಾಗೆಯೇ ನಿರ್ದೇಶಕ ಅಭಿಷೇಕ್‌ ಕಪೂರ್‌, ರಾಶಾ ತದಾನಿಯನ್ನು ತಮ್ಮ ಮುಂದಿನ ಸಿನಿಮಾ ಮೂಲಕ ಬಾಲಿವುಡ್‌ಗೆ ಪರಿಚಯ ಮಾಡುತ್ತಿದ್ದಾರಂತೆ. ಈ ಚಿತ್ರದಲ್ಲಿರ ರಾಶಾಗೆ ಜೋಡಿಯಾಗಿ ‘ದೃಶ್ಯಂ 2’ ನಟ ಅಜಯ್ ದೇವಗನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೆ ಅಜಯ್‌ ದೇವ್ಗನ್‌ ಸೋದರಳಿಯ ಅಮನ್‌ ದೇವ್ಗನ್‌ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅಜಯ್‌ ದೇವ್ಗನ್‌, ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ರಾಶಾ, ಬೆಳ್ಳಿ ತೆರೆ ಮೇಲೆ ಯಾವ ರೀತಿ ಮಿಂಚಲಿದ್ದಾರೆ ಅನ್ನೋದನ್ನು ನೋಡಲು ಬಾಲಿವುಡ್‌ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ರಾಶಾ ಬಾಲಿವುಡ್‌ ಎಂಟ್ರಿ ವಿಚಾರವಾಗಿ ರವೀನಾ ಆಗಲೀ, ರಾಶಾ ಆಗಲೀ ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ.

ರವೀನಾ ಟಂಡನ್‌ ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ವಿತರಕ ಅನಿಲ್‌ ತದಾನಿ ಅವರನ್ನು ಮದುವೆಯಾದರು. ಈ ದಂಪತಿಗೆ ನಾಲ್ವರು ಮಕ್ಕಳು. ಅವರಲ್ಲಿ ಇಬ್ಬರು ದತ್ತು ಮಕ್ಕಳು. ರವೀನಾ ಟಂಡನ್‌ 1995 ರಲ್ಲಿ ಪೂಜಾ ಹಾಗೂ ಛಾಯಾ ಎಂಬ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. 2005 ರಲ್ಲಿ ಈ ದಂಪತಿಗೆ ಹೆಣ್ಣು ಮಗು ಹಾಗೂ 2008 ರಲ್ಲಿ ಗಂಡು ಮಗು ಜನಿಸಿದರು.

ಪಂಜಾಬ್‌ ಕುಟುಂಬಕ್ಕೆ ಸೇರಿದ ರವೀನಾ ಟಂಡನ್‌ 1991 ರಲ್ಲಿ ‘ಪತ್ತರ್‌ ಕೆ ಫೂಲ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಕ್ಷತ್ರಿಯ, ದಿಲ್‌ ವಾಲೇ, ಅಂಜಾದ್‌ ಅಪ್ನಾ ಅಪ್ನಾ, ಮೊಹರ, ರಕ್ಷಕ್‌, ಆಂಟಿ ನಂ 1, ದುಲ್ಹಾಯ್‌ ರಾಜಾ, ಅನಾರಿ ನಂ 1 ಸೇರಿ ಈ ಚೆಲುವೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಕನ್ನಡಕ್ಕೆ ಬಂದ ರವೀನಾ, ಉಪ್ಪಿ ಜೊತೆ ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದರು. ಮಸ್ತ್‌ ಮಸ್ತ್‌ ಹುಡುಗಿ ಬಂದ್ಲು ಎಂದು ರಿಯಲ್‌ ಸ್ಟಾರ್‌ ಜೊತೆ ಹೆಜ್ಜೆ ಹಾಕಿದ್ದರು . ಬಹಳ ವರ್ಷಗಳ ನಂತರ ಕಳೆದ ವರ್ಷ ತೆರೆ ಕಂಡಿದ್ದ ‘ಕೆಜಿಎಫ್‌ 2’ ಚಿತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ರವೀನಾ ‘ಗುಡ್‌ಚಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.