Home Breaking Entertainment News Kannada Sourav Ganguly : ಈ ನಟನೇ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಬಯೋಪಿಕ್ ಗೆ ನಾಯಕ...

Sourav Ganguly : ಈ ನಟನೇ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಬಯೋಪಿಕ್ ಗೆ ನಾಯಕ ; ಏನ್ ಖದರ್, ಏನ್ ಲುಕ್, ಸೂಪರ್!!!

Sourav Ganguly

Hindu neighbor gifts plot of land

Hindu neighbour gifts land to Muslim journalist

Sourav Ganguly : ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡುಲ್ಕರ್ (Sachin Tendulkar)ಹಾಗೂ ಎಂಎಸ್​ ಧೋನಿ (MS Dhoni) ಕುರಿತು ಈ ಹಿಂದೆ ಸಿನಿಮಾ ಮಾಡಲಾಗಿತ್ತು. ಧೋನಿ ಕುರಿತ ಚಿತ್ರದಲ್ಲಿ ಧೋನಿಯಾಗಿ ಸುಶಾಂತ್ ಸಿಂಗ್ ರಜಪೂತ್‌ (Sushant Singh Rajput) ಅವರು ನಟಿಸಿದ್ದರು. ಚಿತ್ರವೂ ಸೂಪರ್​ ಹಿಟ್ ಆಗಿ, ಎಲ್ಲೆಡೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಇದೀಗ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ (Sourav Ganguly) ಅವರ ಬಯೋಪಿಕ್​ ಬೆಳ್ಳಿಪರದೆಯ ಮೇಲೆ ಬರಲಿದೆ. ಸದ್ಯ ಹೀರೋ ಫಿಕ್ಸ್ ಆಗಿದ್ದಾರೆ. ಯಾರಿರಬಹುದು? ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಪಾತ್ರಕ್ಕೆ ಬಣ್ಣ ಹಚ್ಚುವ ಹೀರೋ ಯಾರು?

ಭಾರತೀಯ ‌‌‌‌‌ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ನಾಯಕ ಸೌರವ್​ ಗಂಗೂಲಿ. ಇದೀಗ ಅವರ ಜೀವನಚರಿತ್ರೆ ಆಧರಿಸಿ ಸಿನಿಮಾ ಮೂಡಿಬರಲಿದೆ. ಹಲವು ದಿನಗಳ ಚರ್ಚೆಗೆ ಇದೀಗ ತೆರೆ ಬಿದ್ದಿದೆ.
ಕೊನೆಗೂ ಸೌರವ್ ಪಾತ್ರಧಾರಿ ಸಿಕ್ಕಿದ್ದಾರೆ. ಸೌರವ್​ ಅವರ ಪಾತ್ರಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆಗೆ ಭಾರೀ ಚರ್ಚೆಗಳು ನಡೆದಿತ್ತು. ಕೊನೆಗೂ ಇದೀಗ ಸೂಕ್ತ ನಾಯಕ ಸಿಕ್ಕಿದ್ದಾರೆ.

ಸೌರವ್ ಗಂಗೂಲಿಯವರ ಬಯೋಪಿಕ್ ತಯಾರಿಸುವ ಬಗ್ಗೆ 2019ರಲ್ಲಿ ಘೋಷಿಸಲಾಗಿತ್ತು. ಕಳೆದ ತಿಂಗಳು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ (Dona Ganguly) ಸಿನಿಮಾದ ಬಗ್ಗೆ ಮಾತನಾಡಿ, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೆ ಸೌರವ್ ಪಾತ್ರಕ್ಕೆ ಹೃತಿಕ್ ರೋಷನ್ (Hrithik Roshan) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಸೇರಿದಂತೆ ಹಲವಾರು ನಟರ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಸೌರವ್ ಪಾತ್ರಕ್ಕೆ ಬಣ್ಣ ಹಚ್ಚಲಿರುವ ನಟನ ಆಯ್ಕೆಯಾಗಿದ್ದು, ಬೆಳ್ಳಿ ಪರದೆಯ ಮೇಲೆ ಸೌರವ್​ ಪಾತ್ರದಲ್ಲಿ ರಣಬೀರ್ ಕಪೂರ್ ( Ranbir Kapoor) ಮಿಂಚಲಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆಯೇ ರಣಬೀರ್ ಸಿನಿಮಾ ತಯಾರಿಗಾಗಿ ಶೀಘ್ರದಲ್ಲೇ ಕೋಲ್ಕತಾಗೆ ಭೇಟಿ ನೀಡಲಿದ್ದಾರೆ. ಕೋಲ್ಕತಾದಲ್ಲಿ ರಣಬೀರ್ ಕಪೂರ್​ ಈಡನ್ ಗಾರ್ಡನ್, ಸಿಎಬಿ ಕಚೇರಿ ಮತ್ತು ಸೌರವ್ ಗಂಗೂಲಿ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇದು ದೊಡ್ಡ ಬಜೆಟ್ ಚಿತ್ರವಾಗಿದ್ದು, 200-250 ಕೋಟಿ ರೂಪಾಯಿ ಹೂಡಿಕೆ ಮಾಡಲು ಸಂಸ್ಥೆಯೊಂದು
ಮುಂದೆ ಬಂದಿದೆ ಎನ್ನಲಾಗುತ್ತಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ (Script) ಕೆಲಸಗಳು ಮುಗಿದಿದ್ದು, ಸಿನಿಮಾದಲ್ಲಿ ರಣಬೀರ್ ನಟನೆ ಹಾಗೂ ಸೌರವ್ ಆತ್ಮಚರಿತ್ರೆಯ ಸಿನಿಮಾ ನೋಡಲು ಎಲ್ಲರೂ ಕಾತುರದಿಂದ ಕಾದು ಕುಳಿತಿದ್ದಾರೆ.