Home Breaking Entertainment News Kannada Puneeth Rajkumar : ವೀಕೆಂಡ್‌ ವಿತ್‌ ರಮೇಶ್‌ ಶೋ ಗೆ ಪುನೀತ್‌ ರಾಜ್‌ಕುಮಾರ್‌ ಪಡೆದ ಸಂಭಾವನೆ...

Puneeth Rajkumar : ವೀಕೆಂಡ್‌ ವಿತ್‌ ರಮೇಶ್‌ ಶೋ ಗೆ ಪುನೀತ್‌ ರಾಜ್‌ಕುಮಾರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

Power Star Puneeth Rajkumar

Hindu neighbor gifts plot of land

Hindu neighbour gifts land to Muslim journalist

Power Star Puneeth Rajkumar : ಅಪ್ಪು ಎಂದ ಕೂಡಲೇ ಎಲ್ಲರಿಗೂ ಮೊದಲು ನೆನಪಾಗುವುದು ನಿಷ್ಕಲ್ಮಶ ನಗು. ಎಲ್ಲರ ಮನದಲ್ಲಿ ಅಚ್ಚಳಿಯದೆ ಸ್ಥಾನ ಪಡೆದಿರುವ ಪುನೀತ್ ರಾಜಕುಮಾರ್ (Power Star Puneeth Rajkumar) ದೈಹಿಕವಾಗಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಆ ಸತ್ಯವನ್ನು ಒಪ್ಪಿಕೊಳ್ಳಲು ಅಭಿಮಾನಿಗಳು ತಯಾರಿಲ್ಲ. ಕಾಣದ ಜೀವ ಎಂದೆಂದಿಗೂ ಜೀವಂತ ಎಂಬ ಮಾತು ಪ್ರತಿಯೊಬ್ಬ ಕನ್ನಡಿಗನ ಬಾಯಲ್ಲೂ ಕೇಳಿ ಬರುತ್ತಿದೆ.

 

ರಾಜಕುಮಾರ್(Dr.Rajkumar) ಅವರ ಪುತ್ರನಾದ ಪುನೀತ್ ರಾಜಕುಮಾರ್ ಬಾಲನಟನಾಗಿ ಬಣ್ಣ ಹಚ್ಚಿದ್ದು, ಸಮಾಜ ಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ನಮ್ಮ ಜೀವನದ ಸಾಧನೆಗಳನ್ನು ಮತ್ತೊಬ್ಬರಿಗೆ ಪ್ರೇರಣೆಯಾಗಿ ಸಾಧಕರ ಕಥೆಗಳನ್ನು ಹೇಳುವ ವಿಶೇಷ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್ ರಾಜಕುಮಾರ್ ಅವರು ಪಡೆದುಕೊಂಡಿದ್ದಂತಹ ಸಂಭಾವನೆ ಎಷ್ಟು ಗೊತ್ತಾ?

ಪುನೀತ್ ರಾಜಕುಮಾರ್ ಕೇವಲ ಎರಡು ದಿನಗಳ ಎಪಿಸೋಡಿಗಾಗಿ ಭರ್ಜರಿ 25 ರಿಂದ 30 ಲಕ್ಷ ಸಂಭಾವನೆ ಗಳಿಸಿದ್ದಾರೆ ಎಂದು ತಿಳಿದುಬಂದಿದೆ. ಪುನೀತ್ ರಾಜಕುಮಾರ್ ಹಣಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರೂ ಕೂಡ ತನ್ನಂತಾಗಬೇಕು ಎನ್ನುವ ರೀತಿಯಲ್ಲಿ ಬಾಳಿ ಬದುಕಿದ ಅವರ ಜೀವನ ಉಳಿದವರಿಗೆ ಮಾದರಿಯಾಗಿದೆ. ತನ್ನ ಸಿನಿ ಜೀವನದಲ್ಲಿಯೂ ಸಾಧನೆಯ ಮೂಲಕ ಹೆಸರು ಪಡೆದಿದ್ದಾರೆ. ಕನ್ನಡ ಚಿತ್ರರಂಗದ ರಾಜಕುಮಾರ ಬೆಟ್ಟದ ಹೂವು ಎಂಬುದಾಗಿ ಬಿರುದು ಪಡೆದ ಪುನೀತ್ ರಾಜಕುಮಾರ್ ಅವರ ಆದರ್ಶ, ನಡೆನುಡಿ, ಜೀವನಶೈಲಿ ಅನೇಕ ಮಂದಿಗೆ ಸ್ಪೂರ್ತಿ ಎಂದರೇ ತಪ್ಪಾಗದು. ಹೀಗಾಗಿ, ಸಾಕಷ್ಟು ಮಂದಿ ಅಭಿಮಾನಿಗಳನ್ನು ಅಗಲಿರುವ ಸ್ಟಾರ್ ನಟ ಪುನೀತ್ ರಾಜಕುಮಾರ್ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.