Home Breaking Entertainment News Kannada Prabhas: ನಟ ಪ್ರಭಾಸ್ ಸಿನಿಮಾದಲ್ಲಿ ಸಕ್ಸಸ್, ಆದರೆ ಎಜುಕೇಶನ್ ಎಷ್ಟು ಅಂತ ಗೊತ್ತಾದ್ರೆ ನಿಜಕ್ಕೂ...

Prabhas: ನಟ ಪ್ರಭಾಸ್ ಸಿನಿಮಾದಲ್ಲಿ ಸಕ್ಸಸ್, ಆದರೆ ಎಜುಕೇಶನ್ ಎಷ್ಟು ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ!

Prabhas Educational Qualification
image source: Siasat. Com

Hindu neighbor gifts plot of land

Hindu neighbour gifts land to Muslim journalist

Prabhas Educational Qualification: ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ಮೂಲಕ ಪ್ರಭಾಸ್ ಪ್ಯಾನ್‌ ಇಂಡಿಯಾ ಸ್ಟಾರ್ ಆಗಿ ಇಡೀ ಪ್ರಪಂಚಕ್ಕೆ ಪರಿಚಿತರಗಿದ್ದಾರೆ. ಅಲ್ಲದೆ ಪ್ರಭಾಸ್ ಅದಕ್ಕೂ ಮೊದಲು ನಟಿಸಿದ ಡಬ್ಬಿಂಗ್ ಸಿನಿಮಾಗಳಿಂದ ಹಿಂದಿ ಪ್ರೇಕ್ಷಕರಿಗೆ ಹಾಗೂ ಬೇರೆ ಭಾಷೆಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

ಒಟ್ಟಿನಲ್ಲಿ ‘ರೆಬೆಲ್ ಸ್ಟಾರ್’ ಎಂದು ಪ್ರೀತಿಯಿಂದ ಕರೆಯಲಾಗುವ ಪ್ರಭಾಸ್ ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿರುವುದು ನೂರಕ್ಕೆ ನೂರು ಸತ್ಯ. ಅದಲ್ಲದೆ ಇವರು ಭಾರತದ ಅತ್ಯಂತ ಜನಪ್ರಿಯ ಬಹುಮುಖ ನಟರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಇದೀಗ ಪ್ರಭಾಸ್ ಅಭಿನಯದ ಸಿನಿಮಾ ಆದಿಪುರುಷ ಬಿಡುಗಡೆಯಾಗಿದ್ದು, ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸಂತಸ ತಂದಿದೆ.

ಹೌದು, ಬಾಹುಬಲಿ ನಂತರ ಅವರು ಸಾಹೋ ಮತ್ತು ರಾಧೆ ಶ್ಯಾಮ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸಿದರು. ಇದೀಗ ಪ್ರಭಾಸ್ ರಾಮಾಯಣ ಆಧಾರಿತ ಸಿನಿಮಾ ಆದಿಪುರುಷದಲ್ಲಿ ರಾಮನಾಗಿ ಪಾತ್ರ ಮಾಡಿದ್ದಾರೆ. ಇದೀಗ ಸಿನಿಮಾ ರಿಲೀಸ್‌ ಕೂಡ ಆಗಿದ್ದು, ಜನರು ಮೆಚ್ಚುಕೊಂಡಿದ್ದಾರೆ. ಈ ಹಿನ್ನೆಲೆ ಪ್ರಭಾಸ್ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಚರ್ಚೆಯಾಗುತ್ತಿವೆ.

ಮುಖ್ಯವಾಗಿ ಪ್ರಭಾಸ್ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಉಪ್ಪಲಪತಿ ಸೂರ್ಯ ನಾರಾಯಣ ರಾಜು ಅವರ ಮಗ. ತಂದೆಯೇ ನಿರ್ಮಾಪಕರಾದ ಕಾರಣ ಅನಾದಿ ಕಾಲದಿಂದಲೂ ಪ್ರಭಾಸ್‌ ಅವರಿಗೆ ಚಿತ್ರದೊಂದಿಗೆ ನಂಟು ಇದೆ. ಆದರೆ ಅವರ ಶಿಕ್ಷಣ ಮಟ್ಟ (Prabhas Educational Qualification) ಹೇಗಿತ್ತು ನೋಡೋಣ.

ವರದಿಗಳ ಪ್ರಕಾರ, ಪ್ರಭಾಸ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಭೀಮಾವರಂನ ಡಿಎನ್ಆರ್ ಶಾಲೆಯಲ್ಲಿ ಮುಗಿಸಿದ್ದಾರೆ. ಆ ನಂತರ ನಳಂದ ಕಾಲೇಜಿನಲ್ಲಿ ಮಧ್ಯಂತರ ಶಿಕ್ಷಣ ಪಡೆದರು. ಮುಂದಿನ ವ್ಯಾಸಂಗಕ್ಕಾಗಿ ಅವರು ಹೈದರಾಬಾದ್‌ಗೆ ಬಂದರು. ಹೈದರಾಬಾದ್‌ನ ಶ್ರೀ ಚೈತನ್ಯ ಕಾಲೇಜಿನಲ್ಲಿ ಪದವಿ ಪಡೆದರು. ಬಿ.ಟೆಕ್ ನಲ್ಲಿ ಪ್ರಭಾಸ್‌ ಪದವಿ ಕೂಡ ಪಡೆದಿದ್ದಾರೆ.

ಅದರ ನಂತರ ಅವರು ಟಾಲಿವುಡ್‌ಗೆ ಪ್ರವೇಶಿಸುವ ಮೊದಲು ವಿಶಾಖಪಟ್ಟಣಂನ ಸತ್ಯಾನಂದ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾ ಅಧ್ಯಯನ ಮಾಡಿದರು. ಪ್ರಭಾಸ್ 2002 ರಲ್ಲಿ ‘ಈಶ್ವರ’ ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡಿದರು. ನಂತರ ಆಕ್ಷನ್ ರೋಮ್ಯಾನ್ಸ್ ಚಿತ್ರ ವರ್ಷಮ್ (2004) ನೊಂದಿಗೆ ಸೂಪರ್ ಹಿಟ್ ಪಡೆದರು.

ಒಟ್ಟಿನಲ್ಲಿ ನಟನಾಗುವ ಕನಸು ಕಂಡಿದ್ದ ಪ್ರಭಾಸ್‌, ಓದಿನಲ್ಲೂ ಹಿಂದೆ ಬಿದ್ದಿಲ್ಲ. ನಟನಾಗುವ ಕನಸು ಅವರ ಅಧ್ಯಯನಕ್ಕೆ ಅಡ್ಡಿಯಾಗಲಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.