Home Breaking Entertainment News Kannada Prabhas: ಅಯ್ಯೋ ದೇವ್ರೇ! ಈ ಬಾಹುಬಲಿ ಪ್ರಭಾಸ್ ಗೆ ಏನಾಯ್ತು? ಇವರ್ಯಾಕೆ ಹಿಂಗೆ ನೋಡಲಾಗದ ಸ್ಥಿತಿಯಲ್ಲಿದ್ದಾರೆ?

Prabhas: ಅಯ್ಯೋ ದೇವ್ರೇ! ಈ ಬಾಹುಬಲಿ ಪ್ರಭಾಸ್ ಗೆ ಏನಾಯ್ತು? ಇವರ್ಯಾಕೆ ಹಿಂಗೆ ನೋಡಲಾಗದ ಸ್ಥಿತಿಯಲ್ಲಿದ್ದಾರೆ?

Prabhas

Hindu neighbor gifts plot of land

Hindu neighbour gifts land to Muslim journalist

Prabhas : ಟಾಲಿವುಡ್‌(Tollywood) ನ ಬಾಹುಬಲಿ, 6 ಅಡಿ ಹೀರೋ ಪ್ರಭಾಸ್‌(Prabhas) ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರೋ ನಟ. ಈ ಬಾಹುಬಲಿಯ ಬಗ್ಗೆ ಏನೇ ಪೋಸ್ಟ್‌ ಆದರೂ ಅದು ಕ್ಷಣದಲ್ಲಿ ವೈರಲ್ ಆಗುತ್ತದೆ. ಸದಾ ಅಭಿಮಾನಿಗಳು ಪರ ನಿಲ್ಲೋ ನಟನಾಯಕ ಇವರು. ಹೀಗಾಗಿ ಅಪಾರ ಸಂಖ್ಯೆಯಲ್ಲಿ ವಿಶ್ವಾದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪ್ರಮುಖ ನಟರಲ್ಲಿ ಪ್ರಭಾಸ್ ಕೂಡ ಒಬ್ಬರು. ಸೋ ಮಾಧ್ಯಮಗಳಲ್ಲಿ ಪ್ರಭಾಸ್ ಬಗ್ಗೆ ಏನೇ ವಿಚಾರ ಡಿಸ್ಕಶನ್ ಆದ್ರೂ ಪ್ರಭಾಸ್‌ಗೂ ಮೊದಲು ಅಭಿಮಾನಿಗಳು ರಿಯಾಕ್ಟ್‌ ಮಾಡುತ್ತಾರೆ.

ಈ ವಿಚಾರ ಎಲ್ಲರಿಗೂ ಗೊತ್ತಿರೋದು. ಅದ್ರಲ್ಲೇನು ವಿಶೇಷವಪ್ಪಾ ಅಂತ ನೀವು ಯೋಚಿಸಬಹುದು. ಅದಕ್ಕೂ ಒಂದು ಕಾರಣ ಇದೆ. ಯಾಕೆಂದರೆ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಭಾಸ್ ಅವರ ಪೋಟೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಪ್ರಭಾಸ್ ಅವರ ಈ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಪ್ರಭಾಸ್ ಅಭಿಮಾನಿಗಳು ಬಿಡಿ, ಪ್ರಭಾಸ್‌ ಯಾರೆಂದು ಗೊತ್ತಿಲ್ಲದವರೂ ಕೂಡ ಇದೊಂದು ಪೋಟೋ ನೋಡಿ ಗಾಬರಿ ಬೀಳ್ತಿದಾರೆ.

ಹೌದು, ಟಾಲಿವುಡ್ ತಲೈವಾ ಸೂಪರ್ ಸ್ಟಾರ್ ರಜನಿಕಾಂತ್(Rajanikanth) ಮತ್ತು ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್(Shivrajmukar) ನಡುವೆ ಪ್ರಭಾಸ್ ನಿಂತುಕೊಂಡಿರುವ ಪೋಟೋವೊಂದು ಇತ್ತೀಚೆಗೆ ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಸಿಕ್ಕಾಪಟ್ಟೆ ದಪ್ಪ, ವಿಚಿತ್ರ ಆಕಾರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಅಯ್ಯೋ ದೇವ್ರೇ! ಪ್ರಭಾಸ್ ಗೆ ಇದೇನಾಯ್ತು. ಇಲ್ಲಿವರೆಗೂ ಇಷ್ಟೊಂದು ಚೆನ್ನಾಗಿದ್ದರು. ಇದ್ದಕ್ಕಿದ್ದಂತೆ ಈ ದಢೂತಿ ದೇಹ ಬರಲು ಏನು ಕಾರಣ? ಇವರ್ಯಾಕೆ ರೀತಿ ಆಗಿದ್ದಾರೆ ಎಂದು ಅಭಿಮಾನಿಗಳು ಗಾಬರಿಬಿದ್ದಿದ್ದಾರೆ.

ಅಲ್ಲದೆ ಈ ಫೋಟೋಗೆ ಬಗೆ ಬಗೆಯಾಗಿ ಕಮೆಂಟ್ಗಳು ಬಂದಿದ್ದು, ಪ್ರಭಾಸ್‌ಗೆ ಏನಾಯ್ತು? ಇಷ್ಟೊಂದು ವಿಚಿತ್ರ ಆಕಾರ ಪಡೆದಿರುವುದು ಯಾಕೆ? ಪ್ರಭಾಸ್ ಮುಖ ನೋಡಿ, ವಯಸ್ಸಾದಂತೆ ಕಾಣುತ್ತಾರೆ, ಆದ್ರೆ ಅವರಿಗಿಂತ ತುಂಬಾ ದೊಡ್ಡೋರಾದ ರಜನಿ ಮತ್ತು ಶಿವಣ್ಣ ಮಿಂಚುತ್ತಿದ್ದಾರೆ. ಪ್ರಭಾಸ್ ಕೆಟ್ಟದಾಗಿದ್ದಾರೆ ಎಂದೆಲ್ಲ ಕಮೆಂಟಿಸಿದ್ದಾರೆ. ಸಾಕಷ್ಟು ಕಾಮೆಂಟ್‌ಗಳು ವೈರಲ್ ಆಗತ್ತಿದೆ. ಆದರೆ ಅಭಿಮಾನಿಗಳು ಇದರ ಸತ್ಯ ಹುಡುಕಲು ಶುರು ಮಾಡಿದಾಗ ಅದರ ಅಸಲಿ ಕಥೆ ಬೇರೆಯೇ ಇದೆ ಎಂಬುದು ಗೊತ್ತಾಗಿದೆ.

ಅಂದಹಾಗೆ ರಜನಿಕಾಂತ್, ಪ್ರಭಾಸ್ ಮತ್ತು ಶಿವಣ್ಣ ಯಾವಾಗ ಮತ್ತು ಎಲ್ಲಿ ಭೇಟಿ ಮಾಡಿದರು ಎಂದು ಅಭಿಮಾನಿಗಳು ಮಾಹಿತಿ ಹುಡುಕಲು ಆರಂಭಿಸಿದಾಗ, ಇದು ಜೈಲರ್ ಸಿನಿಮಾ ಶೂಟ್‌ನ ವೇಳೆ ಸೆರೆ ಹಿಡಿದಿರುವ ಚಿತ್ರ. ಆದರೆ ಅದು ಪ್ರಭಾಸ್ ಅಲ್ಲ ಎಂಬ ಸತ್ಯ ಗೊತ್ತಾಗಿದೆ.

ಹೌದು ರಜನಿಕಾಂತ್ ಮತ್ತು ಶಿವಣ್ಣ ಜೈಲರ್(Jilar) ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ನೆಲ್ಸನ್ ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದ್ದು ಚಿತ್ರೀಕರಣದ ವೇಳೆ ಸೆಟ್‌ಗೆ ಆಗಮಿಸಿದ ಅತಿಥಿಗಳನ್ನು ಭೇಟಿ ಮಾಡಿ ಅವರೊಟ್ಟಿಗೆ ಕ್ಲಿಕ್ಕಿಸಿದ ಚಿತ್ರವಿದು. ಹೀಗಾಗಿ ಇದು ಪಕ್ಕಾ ಎಡಿಟ್ ಮಾಡಿರುವ ಪೋಟೋ, ಪ್ರಭಾಸ್ ಅಲ್ಲ ಅನ್ನೋದು ಕನ್ಫರ್ಮ್ ಆಗಿದೆ.

2023ರ ಬಹುನಿರೀಕ್ಷಿತ ಸಿನಿಮಾ ಜೈಲರ್‌ನಲ್ಲಿ ರಜನಿಕಾಂತ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಎರಡು ವರ್ಷಗಳ ನಂತರ ರಜನಿ ಬಿಗ್ ಕಮ್ ಬ್ಯಾಕ್ ಕಾಣಲಿದ್ದಾರೆ. ತಲೈವಾ ಕೊನೆಯದಾಗಿ ಕಾಣಿಸಿಕೊಂಡಿದ್ದು, 2021ರಲ್ಲಿ ನವೆಂಬರ್ 4ರಂದು ಬಿಡುಗಡೆ ಕಂಡ ಅನ್ನತ್ತೆ ಸಿನಿಮಾದಲ್ಲಿ. ಅದಾದ ಬಳಿಕ ಸೂಪರ್ ಸ್ಟಾರ್ಈ ಜೈಲರ್ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.