Home Breaking Entertainment News Kannada ರಾಯನ್‌ ರಾಜ್‌ ಸರ್ಜಾನನ್ನು ಬಿಟ್ಟು ವಿದೇಶಕ್ಕೆ ತೆರಳಿದ ಚಿರು ಪತ್ನಿ ಮೇಘನಾ ರಾಜ್!!

ರಾಯನ್‌ ರಾಜ್‌ ಸರ್ಜಾನನ್ನು ಬಿಟ್ಟು ವಿದೇಶಕ್ಕೆ ತೆರಳಿದ ಚಿರು ಪತ್ನಿ ಮೇಘನಾ ರಾಜ್!!

Hindu neighbor gifts plot of land

Hindu neighbour gifts land to Muslim journalist

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಮತ್ತೆ ಸಿನಿಮಾ, ರಿಯಾಲಿಟಿ ಶೋ, ಜಾಹಿರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. 2 ವರ್ಷಗಳ ಹಿಂದಿನ ದುರ್ಘಟನೆ ನೋವಿನಿಂದ ನಿಧಾನವಾಗಿ ಹೊರ ಬರುತ್ತಿರುವ ಮೇಘನಾ ರಾಜ್‌, ಮಗ ರಾಯನ್‌ ರಾಜ್‌ ಸರ್ಜಾ ಅವರ ನಗುವಿನಲ್ಲಿ ಖುಷಿ ಕಾಣುತ್ತಿದ್ದಾರೆ.

ಅಂದಹಾಗೆ, ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರದ್ದು 10 ವರ್ಷಗಳ ಪ್ರೀತಿ. 2018 ರಲ್ಲಿ ಈ ಜೋಡಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಗೆ ಹೊಸ ರೂಪ ನೀಡಿದ್ದರು. ಆದರೆ ವಿಧಿ ಇವರ ಸಂತೋಷವನ್ನು ದೂರ ಮಾಡಿತು. 7 ಜೂನ್ 2020 ರಂದು ಚಿರು ಹೃದಯಾಘಾತದಿಂದ ನಿಧನರಾದರು. ಇಂತಹ ದುಃಖದ ಸಮಯದಲ್ಲಿ ಮೇಘನಾ 5 ತಿಂಗಳ ಗರ್ಭಿಣಿಯಾಗಿದ್ದರು. ಅದೇ ವರ್ಷ ಅಕ್ಟೋಬರ್‌ 22ರಂದು ಮೇಘನಾ, ಗಂಡುಮಗುವಿಗೆ ಜನ್ಮ ನೀಡಿ, ಮಗುವಿಗೆ ರಾಯನ್‌ ರಾಜ್‌ ಸರ್ಜಾ ಎಂದು ಹೆಸರಿಟ್ಟರು.

ಆದ್ರೆ, ಮಗನಲ್ಲಿ ಚಿರುವನ್ನು ಕಾಣುತ್ತಿರುವ ಮೇಘನಾ, ರಾಯನ್ ನನ್ನು ಬಿಟ್ಟು ವಿದೇಶಕ್ಕೆ ಹಾರಿದ್ದಾರೆ. ಹೌದು. ಮೇಘನಾ ಸರ್ಜಾ ರಿಯಾಲಿಟಿ ಶೋ, ಜಾಹೀರಾತು,ಸಿನಿಮಾ,ಕಾರ್ಯಕ್ರಮಗಳು ಅಂತೆಲ್ಲ ಸಖತ್ ಬ್ಯುಸಿಯಾಗಿದ್ದರು. ಜೊತೆಗೆ ಮಗನ ಪಾಲನೆಯಲ್ಲೂ ಫುಲ್ ಟೈಂ ಸ್ಪೆಂಡ್ ಮಾಡ್ತಿದ್ದರು. ಈಗ ಇದೆಲ್ಲದರಿಂದ ಬ್ರೇಕ್ ಪಡೆದು ತಮ್ಮ ಪ್ರಾಣ ಸ್ನೇಹಿತೆಯರ ಜೊತೆ ಟ್ರಿಪ್ ಗೆ ಹೋಗಿದ್ದಾರೆ.

ನಟಿ ಮೇಘನಾ, ಹಿಲ್ ಹಾಗೂ ಕೋಸ್ಟಲ್ ಬೆಸ್ಟ್ ಪ್ಲೇಸ್ ಎನ್ನಿಸಿರೋ ಥೈಲ್ಯಾಂಡ್(Meghna flew abroad) ಗೆ ಹೋಗಿದ್ದಾರೆ. ಥೈಲ್ಯಾಂಡ್ ನ ಕೋಶಮಿ ಕಡಲ ತೀರಕ್ಕೆ ಮೇಘನಾ ಸರ್ಜಾ ವೆಕೆಶನ್ ಟ್ರಿಪ್ ಪ್ಲ್ಯಾನ್ ಮಾಡಿದ್ದು, ಈ ಬಗ್ಗೆ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ್ದಾರೆ‌.

ತಮ್ಮ ಸ್ನೇಹಿತೆಯರ ಜೊತೆ ಪಾಸ್ ಪೋರ್ಟ್ ಹಿಡಿದು ಏರ್ ಪೋರ್ಟ್ ನಲ್ಲಿ ನಿಂತಿರೋ ಪೋಟೋ ಹಾಕಿದ ಮೇಘನಾ , ಆ ಪೋಟೋಗೆ #beachnails ಎಂದು ಟ್ಯಾಗ್ ಲೈನ್ ನೀಡಿದ್ದಾರೆ. ಮಾತ್ರವಲ್ಲ ವಿಮಾನದ ವಿಂಡೋಸೀಟ್ ಪೋಟೋ ಜೊತೆಗೆ Ko Samui ಏರ್ಪೋರ್ಟ್ ನ ಪೋಟೋವನ್ನು ಹಂಚಿಕೊಂಡಿದ್ದಾರೆ. ko Samui ಥೈಲ್ಯಾಂಡ್ ನ ಎರಡನೇ ಅತಿದೊಡ್ಡ ದ್ವೀಪ ವಾಗಿದ್ದು, ಇದು ತಿಳಿ ನೀಲ ಕಡಲು, ತೆಂಗಿನ ಮರಗಳು ಹಾಗೂ ತನ್ನ ಐಷಾರಾಮಿ ಸ್ಪಾ‌ಮತ್ತು ರೆಸಾರ್ಟ್ ಗಳಿಂದ ಪ್ರಸಿದ್ಧಿ ಪಡೆದಿದೆ.

ಇದು ಮೇಘನಾ ತಮ್ಮ ಮಗನನ್ನು ಬಿಟ್ಟು ತೆರಳ್ತಿರೋ ಎರಡನೇ ವಿದೇಶ ಪ್ರವಾಸವಾಗಿದ್ದು, ಇತ್ತೀಚಿಗಷ್ಟೇ ಮೇಘನಾ ಅಮೇರಿಕಾಗೆ ಹಾರಿದ್ದರು. ನಟಿ ಮೇಘನಾ ತಮ್ಮ ನೋವುಗಳನ್ನು ಮರೆತು ಹಗುರಾಗಲು, ಹಾಗೆಯೇ ಬ್ಯುಸಿ ಷೆಡ್ಯೂಲ್ ನಿಂದ ಹೊರ ಬರಲು ಸ್ನೇಹಿತೆಯರ ಜೊತೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದಾರೆ.