Home Breaking Entertainment News Kannada Samantha: ಇಲ್ಲಿವೆ ನೋಡಿ ಟಾಲಿವುಡ್ ಬ್ಯೂಟಿ ಸಮಂತಾ ರಿಸ್ಕ್ ತಗೊಂಡು ಮಾಡಿದ ಸಿನಿಮಾಗಳು! ಅಷ್ಟಕ್ಕೂ ಸ್ಯಾಮ್...

Samantha: ಇಲ್ಲಿವೆ ನೋಡಿ ಟಾಲಿವುಡ್ ಬ್ಯೂಟಿ ಸಮಂತಾ ರಿಸ್ಕ್ ತಗೊಂಡು ಮಾಡಿದ ಸಿನಿಮಾಗಳು! ಅಷ್ಟಕ್ಕೂ ಸ್ಯಾಮ್ ತಗೊಂಡ ರಿಸ್ಕ್ ಏನು?

Tollywood Beauty Samantha
Image source- SAEI PVT. I.T.I

Hindu neighbor gifts plot of land

Hindu neighbour gifts land to Muslim journalist

Tollywood Beauty Samantha: ಇತ್ತೀಚೆಗೆ ಹಲವಾರು ಕಾರಣಗಳಿಂದ ಸುದ್ಧಿಯಲ್ಲಿ ಟಾಲಿವುಡ್(Tollywood Beauty Samantha) ಬ್ಯೂಟಿ ಸಮಂತಾ(Samanta) ಅಂದ್ರೆ ಹಲವರಿಗೆ ಫೇವರಿಟ್. ತನ್ನ ನ್ಯಾಚುರಲ್ ನಟನೆಯ ಮೂಲಕ, ಸುಂದರವಾದ ಮೈ ಮಾಟದಿಂದ ಎಂತವರನ್ನೂ ಮೋಡಿ ಮಾಡುವ ಈಕೆ ತನ್ನ ರೀಲ್ ಲೈಫ್ ಕ್ಯಾರೆಕ್ಟರ್‌ಗಿಂತ ರಿಯಲ್ ಲೈಫ್ ಕ್ಯಾರೆಕ್ಟರಿನಲ್ಲಿ ತುಂಬಾನೇ ಬೋಲ್ಡ್ ಆಗಿದ್ದಾರೆ. ಸಮಂತಾ ಒಳ್ಳೆ ನಟಿಯಷ್ಟೇ ಅಲ್ಲ. ತಾನೆಷ್ಟು ಸ್ಟ್ರಾಂಗ್ ಅನ್ನೋದನ್ನು ಈಗಾಗಲೇ ಪ್ರೂವ್ ಮಾಡಿದ್ದಾರೆ. ಅಂತೆಯೇ ಸಮಂತಾ ತನ್ನ ಬದುಕಿನ ಕೆಲವು ಕಷ್ಟದ ಕ್ಷಣಗಳನ್ನು ಎದುರಿಸಿದ ರೀತಿಯನ್ನು ಮೆಚ್ಚಲೇ ಬೇಕು. ಇನ್ನು ಸ್ಯಾಮ್ ಸಿನಿಮಾ ವಿಷಯದಲ್ಲೂ ರಿಸ್ಕ್ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಪ್ರೂವ್ ಆಗಿದೆ. ಹೀಗಾಗಿ ಸಮಂತಾ ರಿಸ್ಕ್ ತೆಗೆದುಕೊಂಡ ಆ 5 ಸಿನಿಮಾಗಳಾವುವು ಅನ್ನೋದನ್ನ ನಾವು ನಿಮಗೆ ಹೇಳ್ತೇವೆ.

ಫ್ಯಾಮಿಲಿ ಮ್ಯಾನ್ 2(Family Man 2): ಸಮಂತಾ ವೃತ್ತಿ ಬದುಕಿನ ಸವಾಲಿನ ಪಾತ್ರವೊಂದಿದೆ. ಅದು ಅಮೆಜಾನ್ ‘ಫ್ಯಾಮಿಲಿ ಮ್ಯಾನ್ 2’ ಸೀರಿಸ್. ಇದರಲ್ಲಿ ಸಮಂತಾ ತಮಿಳು ಟೈಗರ್ ವಾರಿಯರ್ ಆಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಸಮಂತಾ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದರು. ಈ ಬಾರಿ ಕೂಡ ಸಮಂತಾ ರಿಸ್ಕ್‌ಗೆ ಕೈ ಹಾಕಿದ್ದರು. ಈ ಪಾತ್ರದ ಕೇವಲ ನೆಗೆಟಿವ್ ಶೇಡ್ ಅಷ್ಟೇ ಆಗಿರಲಿಲ್ಲ. ಇದು ಬೋಲ್ಡ್ ಪಾತ್ರ ಕೂಡ ಆಗಿತ್ತು. ಈ ಸಿರೀಸ್ ದೇಶ ವಿದೇಶದಲ್ಲೂ ಗಮನ ಸೆಳೆದಿತ್ತು.

ರಂಗಸ್ಥಳಂ(Rangasthalam) : 2017ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ಸಿನಿಮಾ ‘ರಂಗಸ್ಥಳಂ’. ಸುಕುಮಾರ್ ನಿರ್ದೇಶಿಸಿದ ಈ ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿತ್ತು. ಇದರಲ್ಲಿ ರಾಮಲಕ್ಷ್ಮಿ ಅನ್ನೋ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಲೋಕಲ್ ಹಳ್ಳಿ ಹುಡುಗಿ ಪಾತ್ರದಲ್ಲಿ ಖಡಕ್ ಆಗಿ ಕಂಡಿದ್ದರು. ಸಮಂತಾ ಡಿ ಗ್ಲಾಮರ್ ರೋಲ್‌ನಲ್ಲೂ ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯಿತು.

ಸೂಪರ್ ಡಿಲಕ್ಸ್(Super Deluxe) : ವಿಜಯ್ ಸೇತುಪತಿ, ಫಹಾದ್ ಫಾಸಿಲ್, ಸಮಂತಾ ಹಾಗೂ ರಮ್ಯಾ ಕೃಷ್ಣ ನಟಿಸಿರೋ ಸಿನಿಮಾ ‘ಸೂಪರ್ ಡಿಲಕ್ಸ್’. ತ್ಯಾಗರಾಜನ್ ಕುಮಾರರಾಜನ್ ನಿರ್ದೇಶನದ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ವಿಶ್ವಾಸದ್ರೋಹಿ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು. ತನ್ನ ಗಂಡನಿಂದ ಬಾಯ್‌ಫ್ರೆಂಡ್ ಅನ್ನು ಮುಚ್ಚಿಡುವಂತಹ ಪಾತ್ರದಲ್ಲಿ ನಟಿಸಿದ್ದರು. ಯಶಸ್ಸಿನ ಉತ್ತುಂಗದಲ್ಲಿರೋ ನಟಿ ಇಂತಹ ಪಾತ್ರವನ್ನು ಒಪ್ಪಿಕೊಳ್ಳುವುದು ತೀರಾ ವಿರಳ. ಆದರೆ, ಸಮಂತಾ ಅಂತಹ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ ಗೆದ್ದಿದ್ದರು. ಇಂದಿಗೂ ಈ ಸಿನಿಮಾ ಸಮಂತಾ ನಟನೆಯ ಬೆಸ್ಟ್ ಸಿನಿಮಾಗಳೊಂದು.

ಯಶೋಧಾ(Yashodha) : ಸಮಂತಾ ದಕ್ಷಿಣ ಭಾರತದಲ್ಲಿ ತನ್ನದೇ ಬ್ರ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋಧಾ’ವನ್ನು ಜನರು ಮೆಚ್ಚಿಕೊಂಡಿದ್ದರು. ಈ ಸಿನಿಮಾದಲ್ಲಿ ಆಕ್ಷನ್, ಸೆಂಟಿಮೆಂಟ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಆದರೆ, ಈ ಸಿನಿಮಾ ಬಳಿಕ ತೆರೆಕಂಡ ‘ಶಾಕುಂತಲಂ’ ಮಾತ್ರ ಹೀನಾಯವಾಗಿ ಸೋಲುಂಡಿದೆ. ಇದು ಕೂಡ ಸಮಂತಾ ತೆಗೆದುಕೊಂಡ ರಿಸ್ಕ್ ಆಗಿತ್ತು.

ಯೂ ಟರ್ನ್(You Turn) : ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ‘ಯೂಟರ್ನ್’ ಸಿನಿಮಾವನ್ನು ತೆಲುಗು, ತಮಿಳಿಗೆ ರಿಮೇಕ್ ಮಾಡಿದ್ದರು. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ಮಾಡಿದ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಎಲ್ಲರೂ ಸೂಪರ್‌ಸ್ಟಾರ್‌ಗಳ ಜೊತೆ ನಟಿಸುತ್ತಿದ್ದರೆ, ಸಮಂತಾ ಮಾತ್ರ ಎಕ್ಸ್‌ಪೆರಿಮೆಂಟ್ ಸಿನಿಮಾ ಮಾಡೋಕೆ ನಿರ್ಧರಿಸಿದ್ದರು. ಸ್ವತ: ಪವನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

 

ಇದನ್ನು ಓದಿ: Lord Shiva Temple: ಈ ಶಿವ ದೇವಾಲಯವು ದೇಶದಲ್ಲೇ ವಿಶಿಷ್ಟ..! ಇಲ್ಲಿನ ನಂದಿ ವಿಗ್ರಹ ದಿನದಿಂದ ದಿನಕ್ಕೆ ಬೆಳೆಯುತ್ತಿದೆ..!! ರಹಸ್ಯವೇನು ಗೊತ್ತಾ?