Home Breaking Entertainment News Kannada Bigg Boss: ನಡೆದೇ ಹೋಯ್ತು ಬಿಗ್‌ಬಾಸ್‌ ಮನೆಯೊಳಗೆ ಬೆಲ್ಲಿ ರೊಮ್ಯಾನ್ಸ್‌, ನಟಿಯ ಸೀರೆಯೆತ್ತಿ ಸೊಂಟಕ್ಕೆ ಮುತ್ತಿನ...

Bigg Boss: ನಡೆದೇ ಹೋಯ್ತು ಬಿಗ್‌ಬಾಸ್‌ ಮನೆಯೊಳಗೆ ಬೆಲ್ಲಿ ರೊಮ್ಯಾನ್ಸ್‌, ನಟಿಯ ಸೀರೆಯೆತ್ತಿ ಸೊಂಟಕ್ಕೆ ಮುತ್ತಿನ ಸುರಿಮಳೆ !

Bigg Boss

Hindu neighbor gifts plot of land

Hindu neighbour gifts land to Muslim journalist

Bigg Boss: ರಿಯಾಲಿಟಿ ಟೆಲಿವಿಷನ್ ಶೋ ‘ಬಿಗ್ ಬಾಸ್’ (Bigg Boss) ಈಗಾಗಲೇ ಎಲ್ಲಾ ಭಾಷೆಗಳಲ್ಲೂ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ಜಗತ್ತಿನಲ್ಲೇ ಬಿಗ್ ಬಾಸ್ ಹವಾ ಜೋರಾಗಿದ್ದು, ಮಲಯಾಳಂ, ಹಿಂದಿ, ತೆಲುಗು,ಮರಾಠಿ, ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ಈ ಶೋ ನಡೆಸಲಾಗುತ್ತಿದೆ.

ನಮಗೆಲ್ಲರಿಗೂ ಗೊತ್ತಿರುವ ಪ್ರಕಾರ, ಬಿಗ್‌ಬಾಸ್‌ ಮನೆಯೊಳಗೆ ನಡೆಯೋ ಹೈಡ್ರಾಮಾಗಳು ಒಂದೆರಡಲ್ಲ. ಫ್ರೆಂಡ್‌ಶಿಪ್ ಮಾಡ್ಕೊಳ್ಳೋದು, ಜಗಳವಾಡೋದು, ಲವ್‌ ಸ್ಟೋರಿ, ರೋಮ್ಯಾನ್ಸ್, ಬ್ರೇಕಪ್ ಎಲ್ಲವೂ ಸಾಮಾನ್ಯವಾಗಿದೆ. ಈ ಮಧ್ಯೆ ಬಿಗ್‌ಬಾಸ್‌ ಮನೆಯೊಳಗೆ ಬೆಲ್ಲಿ ರೋಮ್ಯಾನ್ಸ್‌ ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದೆ. ಸ್ಪರ್ಧಿಯೊಬ್ಬ ನಟಿಯ ಸೀರೆಯೆತ್ತಿ ಸೊಂಟಕ್ಕೆ ಮುತ್ತಿಡಲು ಯತ್ನಿಸೋದು ವೈರಲ್ ಆಗಿದೆ.

ಇತ್ತೀಚಿಗೆ ದೊಡ್ಮನೆಯಲ್ಲಿ ಸ್ಪರ್ಧಿಗಳ ಅಶ್ಲೀಲ ನಡವಳಿಕೆ, ರೋಮ್ಯಾನ್ಸ್ ಹೆಚ್ಚಾಗಿದೆ. ಅದರಲ್ಲೂ ಹಿಂದಿ ಬಿಗ್‌ಬಾಸ್ ಮನೆಯೊಳಗಡೆ ಸ್ಪರ್ಧಿಗಳು ಎಲ್ಲೆ ಮೀರಿ ವರ್ತಿಸ್ತಿರೋದಕ್ಕೆ ಪ್ರೇಕ್ಷಕರು ಕಿಡಿ ಕಾರುತ್ತಿದ್ದಾರೆ.

ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಇಶಾ ತಮ್ಮ ಹಳೆಯ ಬಾಯ್‌ಫ್ರೆಂಡ್ ಅಭಿಷೇಕ್ ಜೊತೆ ಹೆಚ್ಚು ಕ್ಲೋಸ್ ಆಗಿದ್ದರು. ಈ ಸಂದರ್ಭದಲ್ಲೇ ಮನೆಗೆ ವೈಲ್ಡ್‌ ಕಾರ್ಡ್‌ನಲ್ಲಿ ಸಮರ್ಥ್ ಎಂಟ್ರಿಯಾಗಿತ್ತು. ನಾನು ಇಶಾ, ಬಾಯ್‌ಫ್ರೆಂಡ್ ಎಂದು ಸಮರ್ಥ್‌ ಪರಿಚಯಿಸಿಕೊಂಡಿದ್ದರು. ಆದರೆ ಇಶಾ ಇದನ್ನು ಅಲ್ಲಗಳೆದಿದ್ದರು. ಸಾಕಷ್ಟು ಹೈಡ್ರಾಮಾದ ನಂತರ ಇಶಾ, ಅಭಿಷೇಕ್‌ ನನ್ನ ಎಕ್ಸ್‌ ಬಾಯ್‌ಫ್ರೆಂಡ್ ಮತ್ತು ಸಮರ್ಥ್‌ ನನ್ನ ಪ್ರಸೆಂಟ್ ಬಾಯ್‌ಫ್ರೆಂಡ್ ಎಂದು ಒಪ್ಪಿಕೊಂಡಿದ್ದರು.

ಆ ನಂತರ ಸಮರ್ಥ್‌ ಹಾಗೂ ಇಶಾ, ಬಿಗ್‌ಬಾಸ್‌ ಮನೆಯಲ್ಲಿ ಯಾವಾಗಲೂ ಜೊತೆಯಾಗಿ ಓಡಾಡುವುದು, ಮಲಗುವುದು ಮಾಡುತ್ತಿದ್ದರು. ಅದರಲ್ಲೂ ಇತ್ತೀಚಿಗೆ ಇವರಿಬ್ಬರ ವರ್ತನೆ (Behaviour) ಮಿತಿ ಮೀರ್ತಿದೆ ಅಂತಿದ್ದಾರೆ ಪ್ರೇಕ್ಷಕರು. ಇಬ್ಬರೂ ಹೋದಲ್ಲಿ, ಬಂದಲ್ಲಿ ಕಿಸ್ ಮಾಡಿಕೊಳ್ಳುವುದು, ಹಗ್ ಮಾಡುವುದು ಮಾಡುತ್ತಿದ್ದಾರೆ. ಅದಲ್ಲದೆ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಹೊಸ ವೀಡಿಯೊ ಕ್ಲಿಪ್‌ನಲ್ಲಿ, ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಸಮರ್ಥ್ ಇಶಾ ಅವರ ಸೀರೆಯನ್ನೆತ್ತಿ ಸೊಂಟಕ್ಕೆ ಕಿಸ್ ಮಾಡಲು ಯತ್ನಿಸುವುದನ್ನು ನೋಡಬಹುದು.

ಸಮರ್ಥ್‌ ಹಾಗೂ ಇಶಾ ಇಬ್ಬರೂ ಬೆಡ್ ಮೇಲೆ ಕುಳಿತಿರುತ್ತಾರೆ. ಸಮರ್ಥ್‌, ಇಶಾಗೆ ಯಾವುದೋ ವಿಚಾರಕ್ಕಾಗಿ ಸಮಾಧಾನ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಆಕೆಯ ಮುಖ, ಭುಜವನ್ನು ಚುಂಬಿಸುತ್ತಾನೆ. ಸೀರೆಯನ್ನು ಸರಿಸಿ ಸೊಂಟಕ್ಕೆ ಕಿಸ್ ಮಾಡಲು ಸಹ ಪ್ರಯತ್ನಿಸುವುದನ್ನು ವೀಡಿಯೋದಲ್ಲಿ ನೋಡಬಹುದು. ಒಟ್ಟಿನಲ್ಲಿ ಫ್ಯಾಮಿಲಿಯಾಗಿ ಕುಳಿತು ಬಿಗ್‌ಬಾಸ್ ರಿಯಾಲಿಟಿ ಶೋವನ್ನು ನೋಡೋಕೆ ಸಾಧ್ಯಾನೇ ಇಲ್ಲಪ್ಪ ಅಂತಿದ್ದಾರೆ.

ಇದನ್ನು ಓದಿ: ಒಂದೇ ಕುಟುಂಬದ ಆರು ಸದಸ್ಯರ ಮೇಲೆ ಶೂಟೌಟ್: ಇಬ್ಬರ ಸ್ಥಿತಿ ಗಂಭೀರ!! ಕಾದು ಕುಳಿತು ಶೂಟ್‌ ಮಾಡಲು ಕಾರಣವೇನು ಗೊತ್ತೇ?