Home Breaking Entertainment News Kannada ದಾಂಪತ್ಯ ಜೀವನಕ್ಕೆ ಕೆ ಎಲ್ ರಾಹುಲ್!! | ಶೆಟ್ರು ಜೊತೆ ಜೋಡಿ ಸೂಪರ್!

ದಾಂಪತ್ಯ ಜೀವನಕ್ಕೆ ಕೆ ಎಲ್ ರಾಹುಲ್!! | ಶೆಟ್ರು ಜೊತೆ ಜೋಡಿ ಸೂಪರ್!

Hindu neighbor gifts plot of land

Hindu neighbour gifts land to Muslim journalist

ಹೌದು, ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಪ್ರಣಯ ಪಕ್ಷಿಗಳು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವರದಿಗಳು ಆಗಾಗ್ಗೆ ಬಿತ್ತರಿಸುತ್ತಲೆ ಇದ್ದವು. ಆದರೀಗ ಈ ಜೋಡಿಗಳ ಮದುವೆಯ ಬಗ್ಗೆ ಸ್ವತಃ ಅಥಿಯಾ ಶೆಟ್ಟಿ ತಂದೆ ಸುನೀಲ್ ಶೆಟ್ಟಿ ಮಾಹಿತಿ ನೀಡಿದ್ದು, ಮದುವೆಯ ತಯಾರಿಯಲ್ಲಿ ತೊಡುಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ವರ್ಷ ಅಥವಾ ಮುಂದಿನ ವರ್ಷ ಮದುವೆಯಾಗಲಿದ್ದು, ಸೂಕ್ತ ವ್ಯವಸ್ಥೆ ಮಾಡುತ್ತಿರುವುದಾಗಿ ವಿಡಿಯೋದಲ್ಲಿ ಸುನೀಲ್ ಶೆಟ್ಟಿ ತಿಳಿಸಿದ್ದಾರೆ.

ಮಗಳ ಪ್ರೇಮ್‌ ಕಹಾನಿಗೆ ಅಪ್ಪನ ಒಪ್ಪಿಗೆ
ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಕಳೆದ ವರ್ಷ ಅಹಾನ್ ಶೆಟ್ಟಿ ಅವರ ಮೊದಲ ಚಿತ್ರ ತಡಪ್ ಬಿಡುಗಡೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೆ.ಎಲ್ ರಾಹುಲ್ ಆಡುವ ಕ್ರಿಕೆಟ್ ಪಂದ್ಯಗಳಲ್ಲಿ ಸುನಿಲ್ ಶೆಟ್ಟಿ ಕೂಡ ಕಾಣಿಸಿಕೊಳ್ಳುವ ಮೂಲಕ ಮಗಳ ಪ್ರೇಮ್ ಕಹಾನಿಗೆ ಒಪ್ಪಿಗೆ ನೀಡಿದ್ದರು.

ಆಗಾಗ್ಗೆ, ಇವರಿಬ್ಬರ ಮದುವೆ ವಿಚಾರ ಮುನ್ನಲೆಗೆ ಬರುತ್ತಲೇ ಇರುತ್ತದೆ. ಇದೇ ವರ್ಷ ಇಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ವರ್ಷ ಇವರಿಬ್ಬರ ಮದುವೆ ಬಹುತೇಕ ಅನುಮಾನ ಎಂದೇ ಹೇಳಲಾಗಿದೆ.