Home Breaking Entertainment News Kannada ತವರು ನೆಲದಲ್ಲೇ ಜಪಾನ್ ಆಟಗಾರ್ತಿಯನ್ನು ಬಗ್ಗು ಬಡಿದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಸೆಮಿಫೈನಲ್...

ತವರು ನೆಲದಲ್ಲೇ ಜಪಾನ್ ಆಟಗಾರ್ತಿಯನ್ನು ಬಗ್ಗು ಬಡಿದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಸೆಮಿಫೈನಲ್ ಗೆ ಲಗ್ಗೆ | ಒಂದು ಪದಕ ಫಿಕ್ಸ್

Hindu neighbor gifts plot of land

Hindu neighbour gifts land to Muslim journalist

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ.ಸಿಂಧು ಜಪಾನ್ ನ ಅಕಾನೆ ಯಮಾಗುಚಿ ಅವರನ್ನು ಸೋಲಿಸಿದರು. ತವರು ನಾಡಿನ ಆಟಗಾರ್ತಿಯನ್ನು 21-13, 22-20 ಅಂತರದ ನೇರ ಸೆಟ್ ಗಳಿಂದ ಸೋಲಿಸಿದ ಭಾರತದ ಭರವಸೆಯ ಆಟಗಾರ್ತಿ ಸೆಮಿ ಫೈನಲ್ ಗೆ ಪ್ರವೇಶ ಗಿಟ್ಟಿಸಿದರು.

4 ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ. ರಾಚನೋಕ್ ಇಂಟನಾನ್ ಮತ್ತು ತೈ ತ್ಸುಯಿಂಗ್ ನಡುವಿನ ಪಂದ್ಯದಲ್ಲಿ ವಿಜಯಿಯಾದವರ ಜೊತೆ ನಾಳೆ ಸಿಂಧು ಸೆಮಿಫೈನಲ್ ಆಡಲಿದ್ದಾರೆ.

ಬಾಕ್ಸಿಂಗ್ ನಲ್ಲಿ ಲವ್ಲೀನಾ ಬರ್ಗೋಹೈನ್ ಕೂಡ ಸೆಮಿ ಫೈನಲ್ ಹಂತ ತಲುಪಿದ್ದಾರೆ. ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಆರ್ಚರ್ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸಿದ್ದಾರೆ. ಹಾಗೆಯೇ ಪುರುಷರ ಹಾಕಿ ತಂಡ ಇಂದು ಜಪಾನ್ ವಿರುದ್ಧ 5-3 ಅಂತರದಿಂದ ಗೆದ್ದಿದೆ. ವನಿತಾ ಹಾಕಿ ತಂಡ ಇಂದು ಐರ್ಲೆಂಡ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಕನಸು ಜೀವಂತವಾಗಿರಿಸಿಕೊಂಡಿದೆ.