Home Breaking Entertainment News Kannada Jacqueline and Salman Khan : ನಟಿ ಜಾಕ್ವೆಲಿನ್ ಗೆ ಕಿಸ್‌ ಮಾಡಿದ ಸಲ್ಮಾನ್ ಖಾನ್...

Jacqueline and Salman Khan : ನಟಿ ಜಾಕ್ವೆಲಿನ್ ಗೆ ಕಿಸ್‌ ಮಾಡಿದ ಸಲ್ಮಾನ್ ಖಾನ್ ವಿಡಿಯೋ ವೈರಲ್;‌ ಮುಂದೇನಾಯ್ತು ಗೊತ್ತಾ?

Jacqueline and Salman Khan

Hindu neighbor gifts plot of land

Hindu neighbour gifts land to Muslim journalist

Jacqueline and Salman Khan: ಬಿಟೌನ್‌ ನಟ ಸಲ್ಮಾನ್‌ ಖಾನ್‌ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಹುಡಗಿಯರ ವಿಷಯದಲ್ಲೂ ಅಂತೂ ಸಲ್ಮಾನ್‌ ಖಾನ್‌ ಫೇಮಸ್‌ ಆಗಿದ್ದಾರೆ. ಆದ್ರೆ ಅವರು ಬಾಲಿವುಡ್‌’ನ ಅನೇಕ ಮಂದಿ ನಟಿಯರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಆ ಹುಡುಗಿಯನ್ನು ಮದುವೆಯಾಗುತ್ತಾರೆ ಅಂದುಕೊಳ್ಳುವಷ್ಟರಲ್ಲೇ ಬ್ರೇಕಪ್‌ ಮಾಡಿಕೊಳ್ಳುತ್ತಿದ್ದರು. ಆದರೆ ಅವರು ಅನೇಕರ ಜೊತೆ ರಿಲೇಶನ್​ಶಿಪ್​ನಲ್ಲಿದ್ದರೂ ಯಾರನ್ನು ಮದುವೆಯಾಗಿಲ್ಲ. ಈ ಬಗ್ಗೆ ಪ್ರಶ್ನೆ ಕೇಳಿದ್ರೂ ಅವರು ಏನು ಪ್ರತಿಕ್ರಿಯೆ ನೀಡುವುದಿಲ್ಲ. ಇದೀಗ ಸಲ್ಮಾನ್ ಖಾನ್ ಅವರ ಹೊಸ ವಿಡಿಯೋ ಒಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದನ್ನ ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಸಲ್ಮಾನ್ ಖಾನ್ ಖಾನ್ ಮತ್ತು ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಕಿಸ್ಸಿಂಗ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಅವರಿಬ್ಬರೂ ‘ಕಿಕ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು, ಆ ಚಿತ್ರವು 2014ರಲ್ಲಿ ರಿಲೀಸ್ ಆಗಿತ್ತು. ಆ ಚಿತ್ರದ ನಂತರ ಜಾಕ್ವೆಲಿನ್ ಅವರ ಬೇಡಿಕೆ ಹೆಚ್ಚಿತು. ಅಲ್ಲದೆ ಅಲ್ಲಿಂದ ಮುಂದಕ್ಕೆ ಸಲ್ಮಾನ್ ಖಾನ್ (Salman Khan)ಹಾಗೂ ಜಾಕ್ವೆಲಿನ್ (Jacqueline Fernandez) ಮಧ್ಯೆ ಒಳ್ಳೆಯ ಬಾಂಧವ್ಯ ಕೂಡಾ ಬೆಳೆಯಿತು.

 

ಸಲ್ಮಾನ್ ಖಾನ್ ಅವರು ಬಾಲಿವುಡ್​ನಲ್ಲಿ ಬಹು ಬೇಡಿಕೆಯ ಹೀರೋ. ಅವರಿಗೆ ವಯಸ್ಸು 50 ದಾಟಿದರೂ ಇನ್ನೂ ಆತ ಮದುವೆಯಾಗಿಲ್ಲ. ಅನುರೂಪವಾದ ಹುಡುಗಿ ಸಿಕ್ಕಿಲ್ಲ ಎಂದೋ, ಅಥವಾ ಹುಡುಗಿಯರು ಸುಲಭವಾಗಿ ಸಿಗುವಾಗ ಮದುವೆ ಗೊಡವೆ ಯಾಕೆ ಬೇಕು ಎಂದೋ ಗೊತ್ತಿಲ್ಲ, ಒಟ್ಟಾರೆ ಇದುವರೆಗೂ ಸಲ್ಮಾನ್ ಖಾನ್ ಗೆ ಮದುವೆಯಾಗಿಲ್ಲ. ಆತನ ಮದುವೆಯ ಬಗ್ಗೆ ಪತ್ರಕರ್ತರು ಹಲವು ಬಾರಿ ಪ್ರಶ್ನೆಗಳನ್ನು ಕೇಳಿ ಬೈಸಿಕೊಂಡದ್ದೂ ಇದೆ. ಅದೊಂದು ಬಾರಿಯಂತೂ ಪತ್ರಕರ್ತನೊಬ್ಬ ಸಲ್ಮಾನ್ ಖಾನ್ ಅನ್ನು ‘ನಿಮ್ಮ ಮದುವೆ ಯಾವಾಗ ?’ ಎಂದು ಕೇಳಿದ್ದಾನೆ. ಅದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್, ” ಯಾಕೆ ನಾನು ಮದುವೆಯಾದರೆ ನಿನಗೆ ಏನಾದರೂ ಲಾಭ ಇದೆಯಾ ?” ಎಂದು ಕುಟುಕಿ ಮರು ಪ್ರಶ್ನಿಸಿದ್ದ. ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಕ್ಕಿದ್ದರು.

ತಾನು ಮದುವೆಯಾಗಿಲ್ಲ ಮಾತ್ರವಲ್ಲ, ತಾನಿನ್ನೂ ಬ್ರಹ್ಮಚಾರಿ ಎಂದು ಒಂದು ಬಾರಿ ಸಲ್ಮಾನ್ ಹೇಳಿಕೆ ನೀಡಿದ್ದ. ಯಾರನ್ನು ಸುಲಭವಾಗಿ ನಂಬದ ಪತ್ರಕರ್ತರು ಮುಖಕ್ಕೆ ಕೈ ಅಡ್ಡ ಇಟ್ಟು ನಕ್ಕಿದ್ದರು. ಯಾಕೆಂದರೆ, ಸಲ್ಮಾನ್ ಖಾನ್ ಗೆ ಹಲವು ದಶಕಗಳಿಂದ ಇರುವ ಹಲವು ನಟಿಯರ ಜೊತೆಗಿನ ಒಡನಾಟ ಯಾರಿಗೂ ತಿಳಿಯದ ವಿಷಯವಲ್ಲ.

ಅವರಿಗೆ ಅನೇಕ ಹೀರೋಯಿನ್​ಗಳ ಜೊತೆ ಒಳ್ಳೆಯ ಒಡನಾಟ ಇದೆ. ಅಲ್ಲದೆ ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಕೂಡಾ ಅವರಿಗೆ ಇದೆ. ಸಲ್ಮಾನ್ ಖಾನ್ ಅನೇಕರ ಜೊತೆ ರಿಲೇಶನ್​ಶಿಪ್​ನಲ್ಲಿದ್ದರು ಜಾಹೀರು ಆದ ವಿಷ್ಯ. ಈಗ ಸಲ್ಮಾನ್ ಖಾನ್ ಅವರ ರಿಲೇಶನ್ ಶಿಪ್ ಸಂಬಂಧಿತ ಹೊಸ ವಿಡಿಯೋ ಒಂದು ವೈರಲ್ ಆಗಿದೆ.

 

ಹೌದು ಜಾಕ್ವೆಲಿನ್ ಫರ್ನಾಂಡೀಸ್ ಅವರು ಕೆಲವು ಸಮಯಗಳಿಂದ ವಿವಾದಗಳಿಂದ ಸುತ್ತುವರೆದಿದ್ದಾರೆ. ಸುಕೇಶ್ ಚಂದ್ರಶೇಖರ್ ಸುಲಿಗೆ ಹಣದಿಂದ ನಟಿಗೆ ದುಬಾರಿ ಉಡುಗೊರೆ ನೀಡಿದ್ದು ಇದರ ಬಗ್ಗೆ ಕೊನೆಗೂ ನಟಿ ಬಾಯಿ ಬಿಟ್ಟಿದ್ದಾರೆ. ಈ ವಿವಾದಗಳ ನಡುವೆ ನಟಿ ಇದೀಗ ಸಲ್ಮಾನ್‌ ಖಾನ್‌ ಜೊತೆ ಕಾಣಿಸಿಕೊಂಡಿದ್ದಾರೆ.
2014ರಲ್ಲಿ ಸಲ್ಮಾನ್ ಖಾನ್ ನಟನೆಯ ‘ಕಿಕ್’ ಚಿತ್ರದಲ್ಲಿ ಜಾಕ್ವೆಲಿನ್ ಅಭಿನಯಿಸಿದ್ದರು. ಅಲ್ಲಿಂದ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ನಡುವೆ ಉತ್ತಮ ಬಾಂಧವ್ಯ ಮೂಡಿತು. ಸಲ್ಲು ನಟನೆಯ ‘ರೇಸ್ 3’ ಚಿತ್ರದಲ್ಲಿ ಅವರು ನಟಿಸಿದರೆ, ‘ರಾಧೆ’ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರು. ಕೋವಿಡ್ ಸಂದರ್ಭದಲ್ಲಿ ಉಂಟಾದ ಲಾಕ್​​ಡೌನ್ ವೇಳೆ ಸಲ್ಲು ಫಾರ್ಮ್​ಹೌಸ್​ನಲ್ಲಿ ಜಾಕ್ವೆಲಿನ್ ಉಳಿದುಕೊಂಡಿದ್ದರು.

ಹೀಗಿರುವಾಗಲೇ ಮತ್ತೊಂದು ಸಲ್ಮಾನ್‌ ಖಾನ್‌(Jacqueline and Salman Khan viral video) ವಿಡಿಯೋ ವೈರಲ್‌ ಆಗಿದೆ. ಜಾಕ್ವೆಲಿನ್ ಅವರು ನಿಂತುಕೊಂಡಿದ್ದರು. ಅಲ್ಲಿಗೆ ಬಂದು ಸಲ್ಲು ಅವರು ಜಾಕ್ವೆಲಿನ್ ಕೆನ್ನೆಗೆ ಕಿಸ್ ಮಾಡಿದ್ದಾರೆ. ನಂತರ ಅವರು ವೇದಿಕೆ ಮೂಲೆಯಲ್ಲಿ ಬಂದು ಬಾಯಿ ಒರೆಸಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಹಾಕುತ್ತಿದ್ದಾರೆ. ಜಾಕ್ವೆಲಿನ್ ಮೇಕಪ್ ಸಲ್ಲು ಬಾಯಿಗೆ ಅಂಟಿದೆ’ ಎಂದು ಕಮೆಂಟ್‌ ಹಾಕುತ್ತಿದ್ದಾರೆ.