Home Breaking Entertainment News Kannada Karan Johar: ನಷ್ಟ ಆಗದಂತೆ ಸಿನಿಮಾ ನಿರ್ಮಾಣ ಮಾಡುವುದು ಹೇಗೆ? ಕರಣ್ ಜೋಹಾರ್ ಫಾಲೋ ಮಾಡೋ...

Karan Johar: ನಷ್ಟ ಆಗದಂತೆ ಸಿನಿಮಾ ನಿರ್ಮಾಣ ಮಾಡುವುದು ಹೇಗೆ? ಕರಣ್ ಜೋಹಾರ್ ಫಾಲೋ ಮಾಡೋ ಸೂತ್ರ ಇಲ್ಲಿದೆ!

Karan Johar
Image source : kannada News

Hindu neighbor gifts plot of land

Hindu neighbour gifts land to Muslim journalist

Karan Johar: ಸಿನಿಮಾ ನಿರ್ದೇಶನ, ನಿರ್ಮಾಣ ನಟನೆಯ ಜೊತೆಗೆ ತಮ್ಮ ಟಾಕ್‌ ಶೋ, ಫ್ಯಾಷನ್ ಸೆನ್ಸ್, ಹಾಸ್ಯ ಮತ್ತು ಡೋಂಟ್ ಕೇರ್ ಮಾತುಗಳಿಂದಾಗಿಯೂ ಕರಣ್ ಜೋಹರ್ ಬಹಳ ಖ್ಯಾತರು.

ಮುಖ್ಯವಾಗಿ ಬ್ಯೂಸಿನೆಸ್ ವಿಷಯಕ್ಕೆ ಬಂದರೆ ಕರಣ್ ಜೋಹರ್ ಬಹಳ ಕಟ್ಟುನಿಟ್ಟು. ಸದ್ಯ ಲಾಭದಾಯಕ ಚಿತ್ರೋದ್ಯಮ ಬಗ್ಗೆ, ಸಿನಿಮಾ ನಿರ್ಮಾಣ ಮಾಡುವ ಬಗ್ಗೆ, ನಷ್ಟ ರಹಿತವಾಗಿ ಸಿನಿಮಾ ನಿರ್ಮಿಸುವ (Movie Production)ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಕರಣ್ ಜೋಹರ್ (Karan Johar) ಯಾವುದೇ ಸಿನಿಮಾ ನಿರ್ಮಾಣ ಮಾಡಬೇಕಾದರೂ ಆ ಸಿನಿಮಾ ಸೋತರೆ ಏನಾಗಬಹುದು ಎಂಬ ಲೆಕ್ಕಾಚಾರದಲ್ಲಿಯೇ ಆ ಸಿನಿಮಾದ ಮೇಲೆ ಹಣ ಹೂಡುತ್ತಾರಂತೆ. ಅಂದರೆ ಸಿನಿಮಾ ನಿರ್ಮಾಣ ಮಾಡುವಾಗಲೇ ಆ ಸಿನಿಮಾದ ಡಿಜಿಟಲ್ ಹಕ್ಕು ಸ್ಯಾಟಲೈಟ್ ಹಕ್ಕು, ಆಡಿಯೋ ಹಕ್ಕುಗಳು ಎಷ್ಟು ವ್ಯಾಪಾರ ಆಗಬಹುದು ಎಂಬ ಲೆಕ್ಕಾಚಾರ ಹಾಕಿ ಅದಕ್ಕೆ ತಕ್ಕಂತೆ ಅಷ್ಟೆ ಆ ಸಿನಿಮಾಕ್ಕೆ ಬಂಡವಾಳ ಹೂಡುತ್ತಾರೆ.

“ಯಾವುದೇ ಸಿನಿಮಾ ಆಗಲಿ ಸೋಲುವುದಿಲ್ಲ, ಸೋಲುವುದು ಬಜೆಟ್” ಎಂದು ಬಹುವಾಗಿ ನಂಬಿರುವ ಸಿನಿಮಾ ಹೇಳಿರುವ ಕರಣ್ ಜೋಹರ್, ಸಿನಿಮಾದ ಕತೆ, ಸ್ಟಾರ್ ಗಳ ಆಧಾರದಲ್ಲಿ ಸೂಕ್ತವಾಗಿ ಬಜೆಟ್ ಹಾಕಿದರೆ ಪ್ರತಿ ಸಿನಿಮಾ ಕೂಡ ಹಿಟ್ ಆಗುತ್ತದೆ ಎನ್ನುತ್ತಾರೆ.

ಅಂದರೆ, ನಾನು ಮಾಡುವ ಒಂದು ಸಿನಿಮಾಕ್ಕೆ ಅದರ ಸ್ಟಾರ್ ವ್ಯಾಲ್ಯು ಆಧಾರದ ಮೇಲೆ ಡಿಜಿಟಲ್ ಹಕ್ಕು 40 ಕೋಟಿಗೆ, ಸ್ಯಾಟಲೈಟ್ ಹಕ್ಕು 20 ಕೋಟಿಗೆ ಹಾಗೂ ಆಡಿಯೋ ಹಕ್ಕು 15 ಕೋಟಿಗೆ ವ್ಯಾಪಾರ ಆಗಲಿದೆ ಎಂದು ಅನಿಸಿದರೆ ನಾನು ಆ ಸಿನಿಮಾಕ್ಕೆ ಸುಮಾರು 70 ರಿಂದ 80 ಕೋಟಿಬಂಡವಾಳ ಹಾಕುತ್ತೇನೆ. ಒಂದೊಮ್ಮೆ ಸಿನಿಮಾ ಅಟ್ಟರ್ ಫ್ಲಾಪ್ ಆದರೂ ಸಹ ನಾನು ಹಾಕಿದ ಬಂಡವಾಳದ ಬಹುಪಾಲು ಭಾಗ ನನಗೆ ಮರಳಿಸುತ್ತೇನೆ. ಬಂಡವಾಳ ವಾಪಸ್ ಪಡೆಯುವ ಬಗ್ಗೆ ನಾನು ಸದಾ ಜಾಗೃತೆ ವಹಿಸುತ್ತೇನೆ.

ಯಾವುದೇ ಸಿನಿಮಾ ಆಗಲಿ ಅದರ ನಿರ್ಮಾಣ ವೆಚ್ಚ ಹಾಗೂ ಪ್ರಚಾರದ ವೆಚ್ಚವನ್ನು ನಾವು ಸೇಫ್ ಮಾಡಿದಷ್ಟು ಸಿನಿಮಾ ಲಾಭ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಸಿನಿಮಾ ಸಾಧಾರಣವಾಗಿ ಓಡಿಸಿದರೂ ಒಟ್ಟು ಕಲೆಕ್ಷನ್ ನ ಸುಮಾರು 50% ನಿರ್ಮಾಪಕನಿಗೆ ಸಿಗುತ್ತದೆ. ಆದ್ದರಿಂದ ನಿರ್ಮಾಪಕ ಸೇಫ್ ಆಗಿರುತ್ತಾನೆ.

ಇದೇ ಸಂದರ್ಶನದಲ್ಲಿ ಯುವಸ್ಟಾರ್ ನಟರ ಬಗ್ಗೆ ಮಾತನಾಡಿರುವ ಕರಣ್ ಜೋಹರ್, ಕೆಲವು ಅದ್ಭುತ ನಟರು ಇದ್ದಾರೆ. ಅವರು, ಶಾರುಖ್ ಖಾನ್, ಸಲ್ಮಾನ್, ಆಮಿರ್, ಹೃತಿಕ್, ಅಜಯ್ ದೇವಗನ್, ಅಕ್ಷಯ್ ಅವರಿಗಿಂತ ಚಾರ್ಮಿಂಗ್ ಇರಬಹುದು, ಇವರಿಗೆ ಜನಪ್ರಿಯತೆ ಇರಬಹುದೇನೋ ಆದರೆ ಸ್ಟಾರ್ ವ್ಯಾಲ್ಯೂ ಎಂಬುದು ಸಿನಿಮಾ ನಿರ್ಮಾಣಕ್ಕೆ ಮುಖ್ಯವಾಗುತ್ತದೆ.

ಜನಪ್ರಿಯ ಯಾರು ಬೇಕಾದರೂ ಆಗಬಹುದು. ಯೂಟ್ಯೂಬ್ ವಿಡಿಯೋ ಮಾಡುವವನು ಸಹ ಜನಪ್ರಿಯ ಆಗುತ್ತಾನೆ. ಇದನ್ನು ಯುವನಟರು ಮಾಡಬೇಕು. ಥಿಯೇಟರ್‌ಗೆ ಜನರನ್ನು ಯಾರು ಕರೆದುಕೊಂಡು ಬರುತ್ತಾರೋ ಅವರಿಗೆ ಸ್ಟಾರ್ ಎನ್ನುತ್ತಾರೆ ಅವರಿಗೆ ಪ್ರತ್ಯೇಕವಾದ ಸ್ಟಾರ್ ವಾಲ್ಯೂ ಇದೆ” ಎಂದು ವಿವರವಾಗಿ ಕರಣ್ ಜೋಹರ್ ತಮ್ಮ ಸಿನಿಮಾ ಸಕ್ಸಸ್ ಬಗ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ:Mohammed Shami : ವೇಶ್ಯೆಯರ ಜೊತೆ ಲೈಂಗಿಕ ಸಂಬಂಧ- ಖ್ಯಾತ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ ಪತ್ನಿ ಹಸಿನ್!