Home Breaking Entertainment News Kannada Gufi paintal death: ‘ಮಹಾಭಾರತ’ದ ‘ಶಕುನಿ ಮಾಮಾ’ ಖ್ಯಾತಿಯ ಹಿರಿಯ ನಟ ಗೂಫಿ ಪೈಂಟಾಲ್ ನಿಧನ!

Gufi paintal death: ‘ಮಹಾಭಾರತ’ದ ‘ಶಕುನಿ ಮಾಮಾ’ ಖ್ಯಾತಿಯ ಹಿರಿಯ ನಟ ಗೂಫಿ ಪೈಂಟಾಲ್ ನಿಧನ!

Gufi paintal passed away
Image source: Zee news

Hindu neighbor gifts plot of land

Hindu neighbour gifts land to Muslim journalist

Gufi Paintal passed away: ‘ಮಹಾಭಾರತ’ (Mahabharat) ಧಾರಾವಾಹಿಯಲ್ಲಿ ‘ಶಕುನಿ ಮಾಮ’ ಪಾತ್ರದಲ್ಲಿ ನಟಿಸಿ ಅಪಾರ ಖ್ಯಾತಿ ಗಳಿಸಿದ್ದ ಹಿರಿಯ ನಟ ಗೂಫಿ ಪೈಂಟಲ್ (Gufi paintal passed away) ಅವರು ವಯೋಸಹಜ ಸಮಸ್ಯೆಗಳಿಂದ ಇಂದು ಸಾವನ್ನಪ್ಪಿದ್ದಾರೆ.

 

Gufi paintal passed away
Image source: Filmfare.com

 

ಗೂಫಿ ಪೈಂಟಲ್ ಅವರು ಕಳೆದ ಕೆಲ ದಿನಗಳ ಹಿಂದೆ ತೀವ್ರ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು. ಸದ್ಯ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದಿಬಂದಿದೆ.

90 ರ ದಶಕದಲ್ಲಿ ನಟ ಗೂಫಿ ಪೈಂಟಲ್ ಟಿವಿ ಲೋಕದಲ್ಲಿ ‘ಶಕುನಿ ಮಾಮ’ ಎಂದೇ ಖ್ಯಾತಿಗಳಿಸಿದ್ದರು. ಗೂಫಿ ಪೈಂಟಲ್ ಸುಹಾಗ್, ದಿಲ್ಲಗಿ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ದೂರದರ್ಶನ ಕಾರ್ಯಕ್ರಮಗಳಾದ CID ಮತ್ತು ಹಲೋ ಇನ್ ಸ್ಪೆಕ್ಟರ್ ನಲ್ಲಿ ನಟಿಸಿದ್ದಾರೆ. ಹಾಗೇ 1988 ರಲ್ಲಿ ಬಿ.ಆರ್. ಚೋಪ್ರಾ ನಿರ್ಮಾಣದ ಮಹಾಭಾರತ ಧಾರವಾಹಿಯಲ್ಲಿ ಅವರು ಶಕುನಿ ಪಾತ್ರದಿಂದ ಹೆಚ್ಚು ಖ್ಯಾತಿ ಗಳಿಸಿದರು.

ಇದನ್ನೂ ಓದಿ: Fertilizer Price: ರಿಯಾಯಿತಿ ದರದಲ್ಲಿ ರಸಗೊಬ್ಬರ: ದರ ನಿಗದಿ ಮಾಡಿ ಸರ್ಕಾರದ ಆದೇಶ!