Home Breaking Entertainment News Kannada Asha negi: ಸಿನಿ ರಂಗದಲ್ಲಿ ಫೇಮಸ್ ಆಗ್ಬೇಕಾದ್ರೆ ಅವರೊಂದಿಗೆ ಮಲಗಬೇಕು!! ಮನದ ತೋವನ್ನು ತೆರೆದಿಟ್ಟ ನಟಿ...

Asha negi: ಸಿನಿ ರಂಗದಲ್ಲಿ ಫೇಮಸ್ ಆಗ್ಬೇಕಾದ್ರೆ ಅವರೊಂದಿಗೆ ಮಲಗಬೇಕು!! ಮನದ ತೋವನ್ನು ತೆರೆದಿಟ್ಟ ನಟಿ ಆಶಾ ನೇಗಿ

Asha Negi
Image source- Bolly

Hindu neighbor gifts plot of land

Hindu neighbour gifts land to Muslim journalist

Asha negi: ಸಿನಿರಂಗದಲ್ಲಿ ಹಾಗೂ ಕಿರುತೆರೆ ಲೋಕದಲ್ಲಿ ಖ್ಯಾತಿ ಗಳಿಸಿರೋ ನಟಿಯರೆಲ್ಲರೂ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿ ಜರ್ನಿಯಲ್ಲಿ ಆದಂತಹ ಕೆಲವು ಕಹಿ ಅನುಭಗಳನ್ನ ಬಹಿರಂಗಗೊಳಿಸಿ ಹೆಣ್ಣೊಬ್ಬಳು ಯಶಸ್ಸು ಕಾಣಬೇಕು ಎಂದರೆ ಆಕೆ ಬೇರೆಯ ಮಾರ್ಗವನ್ನೇ ಅನುಸರಿಸಬೇಕು ಎನ್ನುತ್ತ ಎಲ್ಲರನ್ನೂ ಅಚ್ಚರಿಗೊಳಿಸ್ತಿದ್ದಾರೆ. ಅಂತೆಯೇ ಇದೀಗ ಅದೇ ರೀತಿಯ ಹೇಳಿಕೆಯೊಂದನ್ನು ನಟಿ ಆಶಾ ನೇಗಿ(Asha negi) ಹೇಳಿದ್ದು ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.

 

ಹೌದು, ಕಾಸ್ಟಿಂಗ್​ ಕೌಚ್​(casting couch) ಕುರಿತು ಇದಾಗಲೇ ಹಲವಾರು ನಟಿಯರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ನಿರ್ಮಾಪ(Producer)ಕ, ನಿರ್ದೇಶಕ (Director) ಸೇರಿದಂತೆ ಕೆಲ ನಟರು ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಆಹ್ವಾನ ಇತ್ತ ಬಗ್ಗೆ ವಿವರಣೆ ನೀಡಿದ್ದಾರೆ. ಇದೀಗ ಆಶಾ ನೇಗಿಯವರೂ ಕೂಡ ಇಂಡಸ್ಟ್ರಿಯಲ್ಲಿರುವ ಲೈಂಗಿಕತೆಯ ಬಗ್ಗೆ ಮಾತನಾಡಿ, ಹುಡುಗಿ ಯಶಸ್ವಿಯಾದರೆ ಅವಳು ಯಾರೊಂದಿಗಾದರೂ ಮಲಗಿದ್ದಾಳೆ ಎಂದು ಜನರು ಭಾವಿಸುತ್ತಾರೆ ಎಂದಿದ್ದಾರೆ.

 

ಕೆಲವು ಹೆಣ್ಣುಮಕ್ಕಳು ಸಿನಿ ಕ್ಷೇತ್ರ ಅಥವಾ ಕಿರುತೆರೆಯಲ್ಲಿ ಯಶಸ್ವಿಯಾಗಲು ತಪ್ಪು ಹಾದಿ ಹಿಡಿದಿರಬಹುದು. ಕೆಲವರು ಇಂಥ ಆಫರ್​ಗಳನ್ನು ನಿರಾಕರಿಸಿರಬಹುದು. ಆದರೆ ಎಲ್ಲಾ ಯಶಸ್ವಿ ಹೆಣ್ಣುಮಕ್ಕಳೂ ಇದೇ ಹಾದಿ ಹಿಡಿಯುತ್ತಾರೆ ಎನ್ನುವುದು ಎಷ್ಟು ಸರಿಯಲ್ಲವೋ, ಬಣ್ಣದ ಲೋಕದಲ್ಲಿ ಯಶಸ್ವಿಯಾದ ನಟಿಯರನ್ನು (Actress) ನೋಡಿದಾಗ ಇವರೂ ಅಂಥವರೇ ಎಂದು ನಿರ್ಣಯಿಸಲಾಗುತ್ತದೆ ಎನ್ನುವ ನೋವಿನ ಮಾತನ್ನು ಆಶಾ ನೇಗಿ ಹೇಳಿದ್ದಾರೆ.

 

ಅಲ್ಲದೆ ಟಿವಿ ಶೋಗಳಾಗಿರಲಿ(TV Show), ಯಾವುದೇ ಭಾಷೆಯ ಸಿನಿಮಾ ಇಂಡಸ್ಟ್ರಿ ಆಗಿರಲಿ ಜನರು ಮಹಿಳೆಯ ಯಶಸ್ಸನ್ನು ತಮ್ಮದೇ ಶೈಲಿಯಲ್ಲಿ ವಿಮರ್ಶಿಸಿ, ನಿರ್ಣಯಿಸಲು ಪ್ರಾರಂಭಿಸುತ್ತಾರೆ. ಈ ಯಶಸ್ಸನ್ನು ಸಾಧಿಸಲು ಆ ಮಹಿಳೆ ಎಷ್ಟು ಶ್ರಮಿಸಿದ್ದಾರೆಂದು ಯಾರೂ ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ ಎನ್ನುವ ನೋವು ಆಶಾ ಅವರದ್ದು.

 

ಅಂದಹಾಗೆ ಇದು ಆಶಾ ನೇಗಿಯವರ ಹಳೆಯ ವಿಡಿಯೋ ಆಗಿದ್ದು, ಅದು ಪುನಃ ವೈರಲ್​ ಆಗಿದೆ.  ರಿತೇಶ್  ದೇಶ್‌ಮುಖ್ (Retesh Deshmukh) ಮತ್ತು ಜೆನಿಲಿಯಾ ದೇಶ್‌ಮುಖ್ ನಡೆಸಿಕೊಟ್ಟ ಕಾರ್ಯಕ್ರಮವೊಂದರಲ್ಲಿ ಆಶಾ  ಮಾತನಾಡಿದ್ದಾರೆ.

ಇದನ್ನೂ ಓದಿ: Pooja bhatra: ಒಳ ಉಡುಪು ಇಲ್ಲದೆ, ಇಂಚಿಂಚು ದೇಹಸಿರಿ ತೋರಿಸಿ ಫೋಟೋಶೂಟ್ ಮಾಡಿಸಿದ ಪೂಜಾ ಬಾತ್ರಾ! ವೈರಲ್ ಆಯ್ತು ಬಾಲಿವುಡ್ ಬ್ಯೂಟಿಯ ಹೊಸ ವಿಡಿಯೋ!!