Home Breaking Entertainment News Kannada Swathi H V: ನನ್ನ ಬೆಸ್ಟ್ ಫ್ರೆಂಡೇ ನನ್ನ ಲೈಫ್ ಪಾರ್ಟ್ನರ್ ಆಗಿರೋದ್ರಿಂದ ಎಲ್ಲವೂ ಸ್ಮೂತ್...

Swathi H V: ನನ್ನ ಬೆಸ್ಟ್ ಫ್ರೆಂಡೇ ನನ್ನ ಲೈಫ್ ಪಾರ್ಟ್ನರ್ ಆಗಿರೋದ್ರಿಂದ ಎಲ್ಲವೂ ಸ್ಮೂತ್ ಆಗಿ ನಡೆಯುತ್ತಿದೆ – ಕಿರುತೆರೆ ನಟಿ ಸ್ವಾತಿ ಎಚ್.ವಿ. ಹೇಳಿಕೆ ವೈರಲ್!

Swathi H V

Hindu neighbor gifts plot of land

Hindu neighbour gifts land to Muslim journalist

Swathi H V :ಕಿರುತೆರೆಯ ಶುಭ ವಿವಾಹ’, ‘ಪುಟ್ಟಗೌರಿ ಮದುವೆ’, ‘ಗಂಗಾ’, ‘ರಂಗನಾಯಕಿ’, ‘ಸರ್ವಮಂಗಳ ಮಾಗಲ್ಯೇ’, ‘ನಾಗಕನ್ನಿಕೆ”ಗಟ್ಟಿಮೇಳ’, ‘ಬೆಟ್ಟದ ಹೂ’, ‘ಕನ್ಯಾ ಕುಮಾರಿ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಸ್ವಾತಿ ಎಚ್ ವಿ(Swathi H V)ಅವರು ಇತ್ತೀಚಿಗೆ ಮೈಸೂರಿನ(Mysore) ಲ್ಲಿ ನಾಗಾರ್ಜುನ ರವಿ(Nagarjun) ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ಸ್ವಾತಿ ಅವರು 2ನೇ ಮದುವೆ (Wedding) ಆಗಿದ್ದಾರೆ ಎಂಬ ವದಂತಿ ಕೂಡಾ ಹರಿದಾಡಿತ್ತು. ಈ ಸುದ್ದಿಗೆ ಇದೀಗ ನಟಿ ಸ್ಪಷ್ಟನೆ ನೀಡಿದ್ದಾರೆ.

ಹೌದು, ಇದು ಸ್ವಾತಿಗೆ ಇದು ಮೊದಲ ಮದುವೆಯಲ್ಲ, ಅವರು 2ನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದು ಅನೇಕರ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಸಂದರ್ಶನವೊಂದರಲ್ಲಿ 2ನೇ ಮದುವೆ ವದಂತಿ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ವೈವಾಹಿಕ ಜೀವನದಲ್ಲಿ ಖುಷಿಯಾಗಿರುವೆ. ನನ್ನ ಸ್ನೇಹಿತನನ್ನು ಮದುವೆ ಮಾಡಿಕೊಂಡಿರುವೆ ಹೀಗಾಗಿ ನನ್ನ ಬೆಸ್ಟ್ ಫ್ರೆಂಡ್ ನನ್ನ ಲೈಫ್ ಪಾರ್ಟನರ್ ಆಗಿದ್ದಾರೆ. ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವ ಕಾರಣ ಎಲ್ಲವೂ ಸ್ಮೂತ್ ಆಗಿ ನಡೆಯುತ್ತಿದೆ ಎಂದು ನಟಿ ಸ್ವಾತಿ ಮಾತನಾಡಿದ್ದಾರೆ.

ನನ್ನ ಗಂಡನ ಮನೆ ಕಡೆ ತುಂಬಾ ತಪ್ಪು ತಿಳಿದುಕೊಂಡಿದ್ದು, ಹುಡುಗಿಗೆ ಎರಡನೇ ಮದುವೆ ಮೂರನೇ ಮದುವೆ ನಾ ಎಂದು ಕೇಳಿದರು. ಆ ನಂತರ ಅದು ಸೀರಿಯಲ್ ಮದುವೆ ಎಂದು ಕ್ಲಾರಿಟಿ ಕೊಟ್ಟರು. ಮದುವೆ ಫೋಟೋ ಹಾಕಿದಾಗ ಅನೇಕರು ಎರಡನೇ ಮದುವೆ ಎನ್ನುತ್ತಿದ್ದರು ಹೀಗಾಗಿ ಅನೇಕರಿಗೆ ಕ್ಲಾರಿಟಿ ಕೊಡಬೇಕು ಅನಿಸಿತು. ಸೀರಿಯಲ್‌ನಲ್ಲಿ ತಾಯಿ ಪಾತ್ರ ಮಾಡ್ತೀನಿ, ಆದರೆ ರಿಯಲ್ ಲೈಫ್‌ನಲ್ಲಿ ನನಗೆ ಅಷ್ಟೋಂದು ಮದುವೆ ಆಗಿಲ್ಲ. ಇತ್ತೀಚಿಗೆ ನಾನು ಮದುವೆ ಆಗಿದೆ. ಇದು ನನ್ನ ಮೊದಲನೇ ಮದುವೆ ಎಂದು ಸ್ವಾತಿ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ ಡಿಪ್ಲೋಮಾ ಜ್ಯುವೆಲರಿ ಡಿಸೈನ್ ಮಾಡುತ್ತ, ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಾತಿಗೆ ಅಕಾಸ್ಮಾತ್ ಆಗಿ ಮಾಡೆಲಿಂಗ್ ಆಫರ್ ಬಂತು. ಅದಾದ ನಂತರದಲ್ಲಿ ಅವರಿಗೆ ನಟನೆಯಿಂದಲೂ ಅವಕಾಶ ಸಿಕ್ಕಿತು. ಮಿಸ್ ಕರ್ನಾಟಕ 2009 ವಿಜೇತೆ ಸ್ವಾತಿ ಎಚ್ ವಿ ಅವರು 11 ಸಿನಿಮಾ ಮಾಡಿದ ನಂತರದಲ್ಲಿ ಕಿರುತೆರೆಯಲ್ಲಿ ಸದ್ಯ ವಿಲನ್ ಆಗಿ ಮೆರೆಯುತ್ತಿದ್ದಾರೆ. ಸ್ವಾತಿ ಎಚ್‌ ವಿ ಅವರು ‘ದಂಡುಪಾಳ್ಯ’, ‘ಬಿಡಲಾರೆ ನಿನ್ನ’, ‘ವಾರಸ್ದಾರ’, ‘ಉಡ’, ‘ಹುಂಜ’, ‘ವಿಘ್ನೇಶ್ವರ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.