Home Breaking Entertainment News Kannada Kantara-2 : ಗುಳಿಗನ ಅಬ್ಬರ, ಕಾಂತಾರ 2 ರ ಗಗ್ಗರದ ಸದ್ದು ನಿಚ್ಚಳ: ಕಾಂತಾರ ಬಿಡುಗಡೆ...

Kantara-2 : ಗುಳಿಗನ ಅಬ್ಬರ, ಕಾಂತಾರ 2 ರ ಗಗ್ಗರದ ಸದ್ದು ನಿಚ್ಚಳ: ಕಾಂತಾರ ಬಿಡುಗಡೆ ದಿನಾಂಕ ಫಿಕ್ಸ್ !

Hindu neighbor gifts plot of land

Hindu neighbour gifts land to Muslim journalist

Kantara-2 : ಬಾಕ್ಸ್ ಆಫೀಸಲ್ಲಿ ಗೆಲುವಿನ ಜಯಭೇರಿ ಬೀರಿ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಂಡ ‘ಕಾಂತಾರ’ದ (kantara) ಆರ್ಭಟ ಇಂದಿಗೂ ಕಮ್ಮಿ ಆಗಿಲ್ಲ. ಕಾಂತಾರ ದಾಖಲೆಗಳ ಮೇಲೆ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ .
ಈ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲೂ ರಿಲೀಸ್ ಆಗಿ, ಹಿಟ್ ಕೂಡ ಆಗಿದೆ. ಕಾಂತಾರ ಬಿಡುಗಡೆಯಾದ ಮೇಲೆ 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ. ಈ ಸಿನೆಮಾದ ಗೆಲುವಿನ ಬಳಿಕ ಇದೀಗ ರಿಷಬ್ ಶೆಟ್ರ (Rishab shetty) ತಂಡ ಕಾಂತಾರ 2 (Kantara-2) ಸಿನಿಮಾ ತಯಾರಿಯಲ್ಲಿದೆ.

ಕಾಂತಾರ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಕಾಂತಾರ-2 ಬಗ್ಗೆ ದೇಶಾದ್ಯಂತ ಜನರಲ್ಲಿ ಕುತೂಹಲ, ನಿರೀಕ್ಷೆ ಹೆಚ್ಚಾಗಿದೆ. ಕಾಂತಾರ ಸಿನಿಮಾ ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಹಿಟ್ ಸಿನಿಮಾಗಳ ಸಾಲಿನಲ್ಲಿ ಇತಿಹಾಸ ಸೃಷ್ಟಿಸಿದೆ. ಕಾಂತಾರ ಇದೀಗ ಪಾರ್ಟ್-2 ಮೂಲಕ ಮೋಡಿ ಮಾಡಲು ರೆಡಿಯಾಗುತ್ತಿದೆ.

ಕಾಂತಾರ -2 ಬಗ್ಗೆ ರಿಷಬ್ ಶೆಟ್ಟಿಗೆ ಪ್ರಶ್ನೆ ಕೇಳಲಾಗಿದ್ದು, ‘ಕಾಂತಾರ 2 ಸಿನಿಮಾದ ಕೆಲಸಗಳು ಎಲ್ಲಿಯವರೆಗೆ ಬಂತು’ ಎಂದು ಕೇಳಲಾಯಿತು. ಇದಕ್ಕೆ ರಿಷಬ್ ವಿಭಿನ್ನ ರೀತಿಯಲ್ಲಿ ಉತ್ತರಿಸಿದ್ದು,
‘ಆಗಸ್ಟ್​ 25ಕ್ಕೆ ಟೋಬಿ (Tobi) ಬರ್ತಿದೆ. ಸೆಪ್ಟೆಂಬರ್ 1ರಂದು ಸಪ್ತ ಸಾಗರದಾಚೆ ಎಲ್ಲೋ ಚಿತ್ರ ರಿಲೀಸ್ ಆಗುತ್ತಿದೆ. ಅದನ್ನು ನೋಡಿ. ನಮ್ಮ ಸಿನಿಮಾ ಬರೋಕೆ ಇನ್ನು ಸಾಕಷ್ಟು ಸಮಯವಿದೆ’ ಎಂದು ಹೇಳಿದರು.

‘ಕಾಂತಾರ’ ಪ್ರೀಕ್ವೆಲ್‌ನ ಸ್ಕ್ರಿಪ್ಟ್‌ ಪೂರ್ಣಗೊಂಡಿದ್ದು, ಪ್ರಿಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದೆ. ಶೂಟಿಂಗ್‌ ಯಾವಾಗಿನಿಂದ ಆರಂಭ ಎನ್ನುವುದನ್ನು ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಘೋಷಿಸಲಿದೆ. ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಕಥೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡು ಮೂರು ಡ್ರಾಫ್ಟ್‌ಗಳನ್ನು ಮಾಡಿದ್ದೇವೆ. ಕಲಾವಿದರು ಹಾಗೂ ಶೂಟಿಂಗ್‌ ಸ್ಥಳಗಳ ಆಯ್ಕೆ ಈ ಕಥೆಯ ಬರವಣಿಗೆಯ ಜೊತೆ ಜೊತೆಗೇ ನಡೆದಿದೆ. ಮಳೆಯಲ್ಲೇ ಸಿನಿಮಾ ಚಿತ್ರೀಕರಣವನ್ನು ಮಾಡುತ್ತೇವೆ. ಫಿಲ್ಮ್ ಗಾಗಿ ಮಾರುದ್ದ ಗಡ್ಡ ಬಿಡುತ್ತೀನಿ. ವಿಶೇಷ ಕಸರತ್ತುಗಳನ್ನು ಕಲಿಯುತ್ತಿದ್ದೇನೆ ಎಂದು ರಿಷಬ್ ಹೇಳಿದ್ದಾರೆ.

ಮೊದಲ ಭಾಗಕ್ಕಿಂತ 2ನೇ ಭಾಗವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಸಿನಿಮಾತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಸಿನಿಮಾದ ಮೊದಲ ಭಾಗ ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ಹಿನ್ನೆಲೆ ಕಾಂತಾರ -2 ಬಗ್ಗೆ ಜನರಿಗೆ ಹೆಚ್ಚಿನ ಮಟ್ಟದ ನಿರೀಕ್ಷೆ ಇದೆ. ‘ಕಾಂತಾರ 2’ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಮೊದಲ ಭಾಗದಲ್ಲಿ ಸಪ್ತಮಿ ಗೌಡ (saptami gowda), ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದರು. ಪ್ರೀಕ್ವೆಲ್​ನಲ್ಲಿ ಯಾರೆಲ್ಲ ನಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Gruhajyothi Scheme: ಇನ್ನೂ ಬೆಳಗದ ಗೃಹಜ್ಯೋತಿ: ನೋಂದಣಿ ಆಗಿದ್ರೂ ಬಿಲ್ ಬಂದ್ರೆ ಏನು ಮಾಡ್ಬೇಕು ?