Home Breaking Entertainment News Kannada Superstar Rajanikanth: ರಜನಿಕಾಂತ್ ಗೂ ಎಫೆಕ್ಟ್ ಕೊಟ್ಟ ‘ಮೈಚಾಂಗ್’ ಚಂಡಮಾರುತ – ಸೂಪರ್ ಸ್ಟಾರ್ ಗೂ...

Superstar Rajanikanth: ರಜನಿಕಾಂತ್ ಗೂ ಎಫೆಕ್ಟ್ ಕೊಟ್ಟ ‘ಮೈಚಾಂಗ್’ ಚಂಡಮಾರುತ – ಸೂಪರ್ ಸ್ಟಾರ್ ಗೂ ಎಂತಾ ಸ್ಥಿತಿ ಬಂತು ನೀವೇ ನೋಡಿ

Superstar Rajanikanth house

Hindu neighbor gifts plot of land

Hindu neighbour gifts land to Muslim journalist

Superstar Rajanikanth house : ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಮನೆಯನ್ನೂ ಕೂಡಾ ಮಿಚಾಂಗ್‌ ಚಂಡಮಾರುತದ ಬಿಟ್ಟಿಲ್ಲ. ಹೌದು, ಚೆನ್ನೈಯ ಅತ್ಯಂತ ಶ್ರೀಮಂತ ಪ್ರದೇಶದಲ್ಲಿ ತಲೈವಾ ಮನೆ ಇದ್ದು, ಅಭಿಮಾನಿಯೊಬ್ಬರು ಚಿತ್ರೀಕರಿಸಿದ ವಿಡಿಯೊದಲ್ಲಿ ಅವರ ಮನೆಯ ಮುಂದೆ ನೀರು(Superstar Rajanikanth house )ನಿಂತ ರಸ್ತೆ ಕಂಡು ಬರುತ್ತಿದೆ. ಕಾಂಪೌಂಡ್‌ ಒಳಗೂ ನೀರು ನುಗ್ಗಿದೆ. ಮಳೆಯ ಬಳಿಕ ಇಡೀ ರಸ್ತೆ ನೀರಿನಲ್ಲಿ ಮುಳುಗಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೊ ವೈರಲ್‌ (Viral Video) ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಈಗಾಗಲೇ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಮಿಚಾಂಗ್‌ ಚಂಡಮಾರುತದ (Cyclone Michaung) ಪರಿಣಾಮ ತಮಿಳುನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಚೆನ್ನೈ ಸೇರಿದಂತೆ ವಿವಿಧ ಕಡೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ.

ಇದನ್ನು ಓದಿ: Inter Caste Marriage: ಅಂತರ್ಜಾತಿ ವಿವಾಹಕ್ಕೆ ಒಪ್ಪಿಗೆ ನೀಡಿದ ಸಿಎಂ!!!

ಸೋಷಿಯಲ್‌ ಮೀಡಿಯಾದಲ್ಲಿ ತಲೈವ ಅಭಿಮಾನಿಗಳಾದ ಒಬ್ಬರಂತೂ ‘ತಲೈವರ್‌ಗೂ ಎಂತಹ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವರದಿ ಪ್ರಕಾರ, ಟಿ.ಜೆ.ಜ್ಞಾನವೇಲ್ ನಿರ್ದೇಶನದ ಮುಂಬರುವ ಚಿತ್ರ ‘ತಲೈವರ್ 170’ರ ಚಿತ್ರೀಕರಣಕ್ಕಾಗಿ ರಜನಿಕಾಂತ್ (Rajinikanth) ತಿರುನೆಲ್ವೇಲಿಗೆ ಹೋಗಿದ್ದಾರೆ. ಅವರ ಕುಟುಂಬವು ನೆರೆ ಬಾಧಿತ ಪೋಯೆಸ್ ಗಾರ್ಡನ್ ಮನೆಯಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಆದರೆ ರಜನಿಕಾಂತ್‌ ಈ ಸಮಸ್ಯೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ರಜನಿಕಾಂತ್‌ ಸದ್ಯ ʼತಲೈವರ್ 170ʼ ಚಿತ್ರದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ಮತ್ತು ರಾಣಾ ದಗ್ಗುಬಾಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ: RBI ಬಡ್ಡಿದರಲ್ಲಿ ಬದಲಾವಣೆಯೋ ಇಲ್ಲಾ ಯಥಾಸ್ಥಿಯೋ?! ಇಲ್ಲಿದೆ ನೋಡಿ ಬಿಗ್ ಅಪ್ಡೇಟ್