Home Breaking Entertainment News Kannada Vinod raj: ಕೊನೆಗೂ ತನ್ನ ನಿಜವಾದ ಅಪ್ಪ ಯಾರೆಂದು ಸತ್ಯ ಬಿಚ್ಚಿಟ್ಟ ವಿನೋದ್ ರಾಜ್ –...

Vinod raj: ಕೊನೆಗೂ ತನ್ನ ನಿಜವಾದ ಅಪ್ಪ ಯಾರೆಂದು ಸತ್ಯ ಬಿಚ್ಚಿಟ್ಟ ವಿನೋದ್ ರಾಜ್ – ರಟ್ಟಾಯ್ತು ಹಲವು ವರ್ಷಗಳ ಗುಟ್ಟು!!

Vinod raj

Hindu neighbor gifts plot of land

Hindu neighbour gifts land to Muslim journalist

Vinod raj: ಕನ್ನಡ ಖ್ಯಾತ ಹಿರಿಯ ನಟಿ ಲೀಲಾವತಿ ಅವರು ಇದೀಗ ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಅನೇಕ ಅಭಿಮಾನಿಗಳು, ಸಿನಿ ನಟ-ನಟಿಯರು, ರಾಜಕೀಯ ನಾಯಕರು ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಈ ನಡುವೆ ಲೀಲಾವತಿ(Leelavati) ಅವರ ಗಂಡನ ವಿಚಾರ ಬಹಳಷ್ಟು ಚರ್ಚೆಯಾಗಿತ್ತಿದ್ದು, ಅವರು ಗಂಡನ(Actress Leelavati husband) ಜೊತೆ ಇರುವ ಹಳೇ ಫೋಟೋ ಒಂದು ವೈರಲ್ ಆಗಿದೆ. ಈ ಬೆನ್ನಲ್ಲೇ ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ತಮ್ಮ ಅಪ್ಪನ ವಿಚಾರ ಕುರಿತು ಖಡಕ್ ಉತ್ತರವೊಂದನ್ನು ನೀಡಿದ್ದಾರೆ.

ಹೌದು, ಲೀಲಾವತಿ ಅವರು ಹಾಸಿಗೆ ಹಿಡಿದ ಮೇಲೆ ಅವರ ಗಂಡನ ವಿಚಾರ, ವಿನೋದ್ ರಾಜ್(Vinod raj) ತಂದೆಯ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಕುರಿತು ಸ್ವತಃ ವಿನೋದ್ ರಾವ್ ಅವರೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಚಾರವನ್ನು ತಿಳಿಯುವುದರಿಂದ ಏನಾದ್ರು ಜಿಎಸ್​ಟಿ ಕಡಿಮೆ ಆಗುತ್ತಾ? ಪೆಟ್ರೋಲ್​​ ಬೆಲೆ ಕಡಿಮೆ ಆಗುತ್ತಾ? ಯಾವ ಸಮಸ್ಯೆ ಪರಿಹಾರವಾಗುತ್ತದೆ? ಹೇಳಿ. ಈತರ ಪ್ರಶ್ನೆ ಕೇಳುವವರು ಅವರ ಮನೆಯ ಸಮಸ್ಯೆ ಅವರು ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಕನ್ನಡಿಗರೇ…ಗುರು ಮೂಲ.. ನದಿ ಮೂಲ ಹುಡುಕಿ ಎನೋ ಮಾಡಿ.. ಮತ್ತೊಂದು ಮಾಡಬೇಡಿ. ನಾನು ಈ ಕುರಿತಾಗಿ ಕಾಮೆಂಟ್ಸ್​​ ಮಾಡಲ್ಲ.. ನೋ ಕಾಮೆಂಟ್ಸ್​​ ಎಂದ ಅವರು ನಾನು ನನ್ನ ತಾಯಿಗೆ ಮಾತು ಕೊಟ್ಟಿದ್ದೇನೆ.. ತನ್ನ ತಾಯಿ ಬೇರೆಯವರಿಗೆ ಮಾತು ಕೊಟ್ಟಿದ್ದಾರೆ. ನೀವೆ ಅರ್ಥ ಮಾಡಿಕೊಳ್ಳಿ. ಈ ವಿಚಾರ ನನ್ನ ಜತೆಗೆ ಮಣ್ಣಾಗಲಿ ಎಂದು ಅಚ್ಚರಿ ಸ್ಟೇಟ್ಮೆಂಟ್ ನೀಡಿದ್ದಾರೆ.

ಅಂದಹಾಗೆ ಲೀಲಾವತಿ ಅವರ ನಿಜವಾದ ಗಂಡ ಎಂದು ಇತ್ತೀಚೆಗೆ ಒಂದು ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ಫೋಟೋದಲ್ಲಿ ನಟಿ ಲೀಲಾವತಿಯವರ ಪಕ್ಕದಲ್ಲಿರುವ ವ್ಯಕ್ತಿಯೇ ಅವರ ಪತಿ ಮಹಾಲಿಂಗ ಭಾಗವತರ್ . ನಟಿ ಲೀಲಾವತಿಯವರನ್ನು ಗುರುತಿಸಿ ರಂಗಭೂಮಿಗೆ ಕರೆ ತಂದವರು ಇವರೇ. ಸ್ವತಃ ನಟರಾಗಿದ್ದ ಮಹಾಲಿಂಗ ಭಾಗವತರ್ ಅವರು ಒಂದು ನಾಟಕದ ಕಂಪನಿ ನಡೆಸುತ್ತಿದ್ದರು. ಒಂದು ದಿನ ನಾಟಕ ಕಂಪನಿ ನಷ್ಟದಿಂದ ಮುಚ್ಚಿ ಹೋಯಿತು. ಆಗ ಲೀಲಾವತಿಯವರೊಡನೆ ಸುಬ್ಬಯ್ಯ ನಾಯ್ಡು ರವರ ನಾಟಕ ಮಂಡಳಿಗೆ ಮಹಾಲಿಂಗ ಭಾಗವತರ್ ಕೂಡ ಸೇರಿದರು. ಬಳಿಕ ಲೀಲಾವತಿ ಅವರಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸಲು ಅವರು ತುಂಬಾ ಕಷ್ಟ ಪಟ್ಟಿದ್ದರು ಎಂದು ಕೂಡ ಸುದ್ಧಿಯಾಗಿತ್ತು.

ಇದನ್ನೂ ಓದಿ: Cyclone Maichang: ಮೈಚಾಂಗ್ ಚಂಡಮಾರುತ ಎಫೆಕ್ಟ್- ಈ 2 ದಿನ ರಾಜ್ಯಾದ್ಯಂತ ಸಿಕ್ಕಾಪಟ್ಟೆ ಮಳೆ !!