Home Breaking Entertainment News Kannada Malayalam actor alencier: ಮಹಿಳೆಯ ಶೇಪ್ ಇರೋ ಟ್ರೋಫಿ ನೋಡಿದ್ರೆ ಟೆಂಪ್ಟ್ ಆಗುತ್ತೆ – ಅದಕ್ಕೆ...

Malayalam actor alencier: ಮಹಿಳೆಯ ಶೇಪ್ ಇರೋ ಟ್ರೋಫಿ ನೋಡಿದ್ರೆ ಟೆಂಪ್ಟ್ ಆಗುತ್ತೆ – ಅದಕ್ಕೆ ಹೀಗ್ ಮಾಡಿ ಎಂದ ನಟ !! ಏನಿದು ಹೊಸದಾದ ವಿಚಿತ್ರ ಮನವಿ

Malayalam actor alencier

Hindu neighbor gifts plot of land

Hindu neighbour gifts land to Muslim journalist

Malayalam actor alencier: ಹೆಚ್ಚಿನ ಪ್ರಶಸ್ತಿ ಸಮಾರಂಭಗಳಲ್ಲಿ ಅದರಲ್ಲಿಯೂ ಸಿನಿಮಾ ರಂಗದ ಪ್ರಶಸ್ತಿಗಳನ್ನು (award) ನೀಡುವ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕದ ಜೊತೆ ಒಂದು ಟ್ರೋಫಿ (ಶಿಲ್ಪ) ನೀಡುವುದನ್ನು ನಾವೆಲ್ಲ ಗಮನಿಸಿರುತ್ತೇವೆ. ಆದರೆ, ಈ ಟ್ರೋಫಿ ವಿಷಯವೇ ದೊಡ್ಡ ಮಟ್ಟದ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣವೂ ಇದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಮ್ಮುಖದಲ್ಲಿ ಚಲನಚಿತ್ರ ಅಕಾಡೆಮಿಯು ಕೇರಳದ ನಿಶಾಗಂಧಿ ಆಡಿಟೋರಿಯಂನಲ್ಲಿ 53 ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ 2022 ಪ್ರಧಾನ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮಲಯಾಳಂ ಚಲನಚಿತ್ರ ನಟ ಅಲೆನ್ಸಿಯರ್ ಲೇ ಲೋಪೆಜ್(Malayalam actor alencier) ಅವರಿಗೆ ಪ್ರಶಸ್ತಿ ಲಭ್ಯವಾಗಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ನೃತ್ಯ ಮಾಡುವ ಮಹಿಳೆಯ ಆಕಾರದ ಶಿಲ್ಪಗಳನ್ನು ನೀಡಲಾಗುತ್ತದೆ. ಈ ಎಲ್ಲಾ ಶಿಲ್ಪಗಳೂ ಹೆಚ್ಚಾಗಿ ಮಹಿಳಾ ಶಿಲ್ಪವೇ ಆಗಿರುತ್ತದೆ. ಇದೀಗ ಈ ಮಹಿಳಾ ಶಿಲ್ಪದ ಬಗ್ಗೆ ಸೆಕ್ಸಿಯಸ್ಟ್ ಕಮೆಂಟ್ ಮಾಡುವ ಮೂಲಕ ನಟನೊಬ್ಬ ಹೆಂಗೆಳೆಯರ ಕೋಪಕ್ಕೆ ತುತ್ತಾದ ಘಟನೆ ವರದಿಯಾಗಿದೆ.

Malayalam actor alencier

ಮಲಯಾಳಂ ಚಲನಚಿತ್ರ ನಟ ಅಲೆನ್ಸಿಯರ್ ಲೇ ಲೋಪೆಜ್ ಅವರಿಗೆ ‘ಅಪ್ಪನ್’ (Appan) ಚಿತ್ರದ ನಟನೆಗೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭಿಸಿದ್ದು, ಇದರ ಪ್ರಶಸ್ತಿ ಪ್ರಧಾನದ ಸಮಾರಂಭದ ವೇಳೆ 25 ಸಾವಿರ ರೂಪಾಯಿಗಳ ನಗದು, ಪ್ರಶಸ್ತಿ ಪತ್ರ ಹಾಗೂ ಶಿಲ್ಪವನ್ನು ನೀಡಲಾಗಿದ್ದು, ಈ ಶಿಲ್ಪವು ಹೆಣ್ಣನ್ನು ಹೋಲುವುದ ಗಮನಿಸಿ ನಟ ಅಲೆನ್ಸಿಯರ್ (Alencier)ಕೇರಳದಲ್ಲಿ ಬಲಿಷ್ಠ ಪುರುಷ ಮುಖ್ಯಮಂತ್ರಿ ಇದ್ದು, ‘ಪುರುಷ ಶಕ್ತಿ’ಯನ್ನು ಪ್ರತಿನಿಧಿಸುವ ಶಿಲ್ಪವನ್ನು ನೀಡಿ. ಸ್ತ್ರೀ ಶಿಲ್ಪ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಪುರುಷ ಶಿಲ್ಪ ಮಾತ್ರ ಸೂಕ್ತವಾಗಿದೆ ಎಂದು ಹೇಳಿರುವ ನಟ, ‘ಪ್ರಶಸ್ತಿಯು ಹೆಚ್ಚಿನ ತೂಕವನ್ನು ಹೊಂದಿದ್ದು, ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಸ್ವೀಕರಿಸಲಾಗಿದೆ. ರೂ 25 ಸಾವಿರ ನೀಡಿ ನನ್ನನ್ನು ಮತ್ತು ಕುಂಚಾಕೊ ಬೋಬನ್ ಅವರನ್ನು ಅವಮಾನ ಮಾಡಬೇಡಿ ಜೊತೆಗೆ ದಯವಿಟ್ಟು ಮೊತ್ತವನ್ನು ಹೆಚ್ಚಿಸಿ’ ಎಂದೂ ಅಲೆನ್ಸಿಯರ್ ಹೇಳಿಕೊಂಡಿದ್ದಾರೆ.

‘ಈ ರೀತಿಯ ಸ್ತ್ರೀ ಶಿಲ್ಪದೊಂದಿಗೆ ನಮ್ಮನ್ನು ಪ್ರಚೋದಿಸಬೇಡಿ. ಪುರುಷ ಶಕ್ತಿಯನ್ನೂ ಪ್ರದರ್ಶಿಸಿ, ಕೇವಲ ಸ್ತ್ರೀಯ ಶಿಲ್ಪ ನೀಡುವುದಾದರು ಯಾಕೆ? ಹೀಗೆ ಮಾಡಿ ಟೆಂಪ್ಟ್ ಮಾಡಬೇಡಿ ಎಂದು ಹೇಳಿದ್ದಾರೆ. ಪುರುಷ ಶಿಲ್ಪವನ್ನು ಸ್ವೀಕರಿಸಿದ ದಿನ ಅವರು ತಮ್ಮ ನಟನೆಯನ್ನು ನಿಲ್ಲಿಸುವುದಾಗಿ ಯು ಇದೆ ವೇಳೆ ಹೇಳಿಕೊಂಡಿದ್ದಾರೆ. ಇವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಹೀಗಿದ್ದರು ಕೂಡ ತಮ್ಮ ಮಾತನ್ನು ಸಮರ್ಥಿಸಿಕೊಂಡಿರುವ ನಟ, ‘ನಾನು ಹೇಳಿದ್ದರಲ್ಲಿ ಆಕ್ಷೇಪಾರ್ಹ ಎನಿಸುವಂಥಹದ್ದು ಏನಿಲ್ಲ. ಅದು ಲೈಂಗಿಕತೆಯಲ್ಲ, ನಾನು ಒಬ್ಬ ಪುರುಷ ಎಂದು ಹೆಮ್ಮೆಪಡುತ್ತೇನೆ ಎಂದು ಹೇಳುವ ಮೂಲಕ ತಾನು ಹೇಳಿದ್ದೇ ಸರಿ ಎಂಬ ಧೋರಣೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಮಹಿಳಾ ಒಕ್ಕೂಟವು ನಾನು ಹೇಳುವ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಗ್ರಹಿಸುವಷ್ಟು ಬುದ್ಧಿವಂತರಾಗಿರಬೇಕು. ನಾನು ಪುರುಷನ ಪುರುಷತ್ವವನ್ನು ಚಿತ್ರಿಸುವ ಬಹುಮಾನವನ್ನು ಕೇಳಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: Wheat Stocks: ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ – ಈ ಆಹಾರ ಪದಾರ್ಥದ ಬೆಲೆಯಲ್ಲಿ ಭಾರೀ ಇಳಿಕೆ