Home Breaking Entertainment News Kannada ‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’ । ಗರ್ಭಿಣಿ ಆಲಿಯಾಗೆ ವಿಭಿನ್ನವಾಗಿ ಕೀಟಲೆಯ ಶುಭಾಶಯ...

‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’ । ಗರ್ಭಿಣಿ ಆಲಿಯಾಗೆ ವಿಭಿನ್ನವಾಗಿ ಕೀಟಲೆಯ ಶುಭಾಶಯ ಹೇಳಿದ ಕಾಂಡೋಮ್ ಕಂಪನಿ ಡ್ಯುರೆಕ್ಸ್

Hindu neighbor gifts plot of land

Hindu neighbour gifts land to Muslim journalist

ನಟಿ ಆಲಿಯಾ ಭಟ್ ಹಾಗೂ ರಣ್ ಬೀರ್ ಕಪೂರ್ ಮನೆಗೆ ಹೊಸ ಪುಟಾಣಿ ಸದಸ್ಯನ ಆಗಮನವಾಗುತ್ತಿದೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ಆಲಿಯಾ ಘೋಷಿಸಿದ್ದು ಅಭಿಮಾನಿಗಳಿಗೆ ಖುಷಿ ನೀಡಿದ್ದು, ಆಲಿಯಾಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ದಂಪತಿಗೆ ಕಾಂಡೋಮ್ ತಯಾರಿಕಾ ಕಂಪನಿ ಡ್ಯುರೆಕ್ಸ್ ಕೂಡ ವಿಭಿನ್ನವಾಗಿ ಶುಭಾಶಯ ತಿಳಿಸಿದೆ. ಅದು ಫನ್ನಿಯಾಗಿ ಮಾಡಿದ ಈ ಟ್ವಿಟ್ ಸಖತ್ ವೈರಲ್ ಆಗುತ್ತಿದೆ.

ಆಲಿಯಾ ಭಟ್ ಅವರು ನಿನ್ನೆ ತಾನೇ ಅಂದರೆ ಜೂನ್ 27 ರಂದು ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಆಸ್ಪತ್ರೆಯಲ್ಲಿದ್ದಾರೆ, ಜತೆಗೆ ರಣ್ ಬೀರ್ ಕಪೂರ್ ಕೂಡ ಇದ್ದಾರೆ. ‘ಶೀಘ್ರವೇ ನಮ್ಮ ಮಗು ಬರಲಿದೆ’ ಎಂದು ಆಲಿಯಾ ಕ್ಯಾಪ್ಟನ್ ನೀಡಿದ್ದಾರೆ. ಈ ಪೋಸ್ಟ್‌ಗೆ ಎಲ್ಲರೂ ಶುಭಾಶಯ ತಿಳಿಸಿದ್ದರು. ಡ್ಯುರೆಕ್ಸ್ ಕಂಪನಿ ಕೂಡ ಈ ದಂಪತಿಗೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿ ವಿಶೇಷ ಪೋಸ್ಟ್ ಮಾಡಿದೆ. ಅದು ಈಗ ಸೋಷಿಯಲ್ ಮೀಡಿಯಾದ ಗಮನ ಸೆಳೆದಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ಡ್ಯುರೆಕ್ಸ್ ‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’ ಎಂದು ಬರೆದುಕೊಂಡಿದೆ. ಜತೆಗೆ ಶೀಘ್ರವೇ ತಂದೆ-ತಾಯಿ ಆಗುತ್ತಿರುವ ಈ ದಂಪತಿಗೆ ಶುಭಾಶಯ ತಿಳಿಸಿದೆ. ‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’. ನಾವು, ಅಂದರೆ ಕಾಂಡೋಮ್ ಇದ್ದಿದ್ದರೆ ನಿಮಗೆ ಈ ಖುಷಿ ಸಿಗಲು ಸಾಧ್ಯ ಇರಲಿಕ್ಕಿಲ್ಲ ಎಂದಿದೆ. ಜತೆಗೆ, ನಿಮ್ಮ ಖುಷಿಯಲ್ಲಿ ನಾವು ಪಾತ್ರವಹಿಸಲು ಆಗಲಿಲ್ಲವಲ್ಲ ಎಂಬ ಭಾವ ಕೂಡಾ ಇದ್ದು, ಬಹುಭಾವ ಮಿಶ್ರಿತ ಈ ಪೋಸ್ಟ್ ಸಖತ್ ಅಟ್ರಾಕ್ಟೀವ್ ಅನ್ನಿಸಿದೆ.

ರಣ್ ಬೀರ್ ಕಪೂರ್- ಆಲಿಯಾ ಭಟ್ ಜೋಡಿ ಏಪ್ರಿಲ್ 14ರಂದು ಮುಂಬೈನಲ್ಲಿ ವಿವಾಹವಾಗಿದ್ದರು. ಅವರ ದಾಂಪತ್ಯ ಜೀವನಕ್ಕೆ ಎಲ್ಲರೂ ವಿಶ್ ತಿಳಿಸಿದ್ದರು. ಈ ಸಂದರ್ಭದಲ್ಲೂ ಡ್ಯುರೆನ್ಸ್ ಕಂಪೆನಿಯವರು ಟ್ವಿಟ್ ಒಂದನ್ನು ಮಾಡಿದ್ದರು. ‘ಪ್ರೀತಿಯ ರಣಬೀರ್ ಹಾಗೂ ಆಲಿಯಾ, ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಇಲ್ಲ ಎಂದರೆ ಫನ್ ಇರುವುದಿಲ್ಲ’ ಎಂದು ಡ್ಯುರೆಕ್ಸ್‌ನವರು ಬರೆದಿದ್ದರು. ಪರೋಕ್ಷವಾಗಿ ತಮ್ಮ ಕಾಂಡೋಮ್ ಬಳಸಿ ಎಂದು ತಿಳಿಸಿದ್ದರು. ಆದರೆ, ಆಲಿಯಾ-ರಣ್ ಬೀರ್ ಕಾಂಡೋಮ್ ಸುದ್ದಿಗೆ ಹೋಗಿಲ್ಲ. ಆಲಿಯಾ ಎರಡೇ ತಿಂಗಳಿಗೆ ಗರ್ಭಿಣಿ ಆಗಿದ್ದಾಳೆ. ಅದಕ್ಕಾಗೇ ಈಗ ಕಾಂಡೋಮ್ ಕಂಪನಿ ಸುದ್ದಿ ಮಾಡುತ್ತಿದೆ.

ಒಟ್ಟಾರೆ ಡ್ಯುರೆಕ್ಸ್‌ನವರು ಈಗ ಮಾಡಿದ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಟ್ರೋಲ್ ಪೇಜ್‌ಗಳ ತುಂಬಾ ಈ ಪೋಸ್ಟ್ ಬಳಕೆ ಆಗುತ್ತಿದೆ. ಕಂಪನಿ ಪುಕ್ಕಟೆ ಪ್ರಚಾರ ಪಡೆದುಕೊಂಡಿದೆ. ಡ್ಯುರೆಕ್ಸ್ ಕಂಪನಿಯ ಮಾರ್ಕೆಟಿಂಗ್ ತಂತ್ರದ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.